. . .

Month: December 2019

ರೈತನ ಮೇಲೆ ಕಾಡಾನೆ ದಾಳಿ

6 Viewsಡೈರಿಗೆ ಹಾಲು ಹಾಕಲು ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ಹಠಾತ್ ದಾಳಿ ನಡೆಸಿದೆ. ಸರಗೂರು ತಾಲ್ಲೂಕಿನ ಕಲ್ಲಂಬಾಳು ಗ್ರಾಮದಲ್ಲಿ ಘಟನೆ ನಡೆದಿದೆ. ರಾಮಯ್ಯ ಎಂಬುವರೇ (68) ಕಾಡಾನೆ ದಾಳಿಗೆ ಒಳಗಾದವರು. ಆನೆ ದಾಳಿಯಿಂದ ರಾಮಯ್ಯಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಂದಿನಂತೆ ಹಾಲಿನ ಡೈರಿಗೆ ಹಾಲು ಹಾಕಲು ರಾಮಯ್ಯ ತೆರಳುತ್ತಿದ್ದಾಗ, ಹಠಾತ್‍ ಎದುರಾದ ಕಾಡಾನೆಯೊಂದು ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಅವರು ಕೂಗಾಡಿದ್ದಾರೆ. ಹತ್ತಿರದಲ್ಲೇ ಇದ್ದ ಜನರು ಕೂಗಾಟ […]

ಬಸ್-ಬೈಕ್ ಡಿಕ್ಕಿ; ಅಪ್ಪ, ಮಗ ಸ್ಥಳದಲ್ಲೇ ಸಾವು

6 Viewsಮೈಸೂರು ತಾಲ್ಲೂಕಿನ ಕೋಟೆಹುಂಡಿ ಸರ್ಕಲ್ ಬಳಿ ಕೆಎಸ್ಆರ್‍ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಅಪ್ಪ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ಇಂದು ಬೆಳಿಗ್ಗೆ ನಡೆದಿದೆ.  ಪ್ರಕಾಶ್ (50), ಸುರೇಶ್ (23) ಮೃತಪಟ್ಟವರು. ಕಟ್ಟೆಹುಣಸೂರು ನಿವಾಸಿಗಳಾದ ಇವರು ಮೈಸೂರಿನ ಜೆ.ಪಿ.ನಗರದ ಮಹದೇವುಪರದಲ್ಲಿ ವಾಸವಿದ್ದರು. ಪ್ರಕಾಶ್ ಮತ್ತು ಸುರೇಶ್ ರೇಷನ್ ಅಕ್ಕಿ ತರಲು ಕಟ್ಟೆಹುಣಸೂರಿಗೆ ಡಿಯೋ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಮೃತ್ಯುಸ್ವರೂಪಿಯಾಗಿ ಬಂದ ಕೆಎಸ್ಆರ್‍ಟಿಸಿ ಬಸ್ ಸ್ಕೂಟರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ […]

ಅಗ್ನಿ ದುರಂತ; ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ- ಕೇಜ್ರಿವಾಲ್

15 Viewsಭಾರತದ ರಾಜಧಾನಿ ದೆಹಲಿಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ದೆಹಲಿ ಸಿಎಂ ಅರವಿಂದ್‍ ಕೇಜ್ರಿವಾಲ್ ಘೋಷಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಅಗ್ನಿ ದುರಂತದಲ್ಲಿ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿರುವುದಲ್ಲದೇ, ಉಚಿತ ಚಿಕಿತ್ಸೆಗೂ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಅಗ್ನಿ ದುರಂತ; ಸಾವಿನ ಸಂಖ್ಯೆ ೪೩ಕ್ಕೆ ಏರಿಕೆ

11 Viewsಇಂದು ಬೆಳ್ಳಂಬೆಳಗ್ಗೆ ದೆಹಲಿಯ ರಾಣಿ ಜಾನ್ಸಿ ರಸ್ತೆ ಬಳಿಯ ಅನಾಜ್ ಮಂಡಿ ಪ್ರದೇಶದ ಮೂರು ಮಹಡಿಗಳಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ೪೩ ಮಂದಿ ಬಲಿಯಾಗಿದ್ದಾರೆ. ಮಹಡಿಗಳ ಕಟ್ಟಡದೊಳಗೆ ಇನ್ನೂ ಹಲವರು ಸಿಲುಕಿಕೊಂಡಿದ್ದಾರೆ. ಈವರೆಗೂ ೫೦ಕ್ಕೂ ಹೆಚ್ಚು ಮಂದಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದು, ಕಾರ್ಯಾಚರಣೆ ಮುಂದುವರಿಸಿದ್ದಾರೆ. ಗಾಯಾಳುಗಳನ್ನು ಆರ್‌ಎಂಎಲ್, ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ದೆಹಲಿಯ […]

ಜೀಪ್-ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸಾವು

14 Viewsಜೀಪ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.ತಾಲ್ಲೂಕಿನ ಅಗ್ರಹಾರ ಗ್ರಾಮದ ವೈರಮುಡಿ ಪುತ್ರ ನಾಗರಾಜ್ (೨೨) ಮೃತಪಟ್ಟವರು. ನಗರದ ಬೈಪಾಸ್ ರಸ್ತೆಯ ಕೋರ್ಟ್ ವೃತ್ತದ ಬಳಿ ಮಡಿಕೇರಿಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಜೀಪ್ ಎದುರಿನಿಂದ ಬಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕಟ್ಟೆಮಳಲವಾಡಿ ಬಳಿಯ ಅಗ್ರಹಾರ ಗ್ರಾಮದ ವೈರಮುಡಿ ಪುತ್ರ ನಾಗರಾಜ್ ಸಾವನ್ನಪ್ಪಿದರೆ, ಹಿಂಬದಿಯ ಸವಾರನಿಗೆ ತೀವ್ರ ಪೆಟ್ಟು ಬಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ತಿಗಾಗಿ ತಮ್ಮನ ಹೆಂಡತಿ ಕೊಲೆ

10 Viewsಆಸ್ತಿ ವಿಚಾರವಾಗಿ ವ್ಯಕ್ತಿಯೊಬ್ಬ ತನ್ನ ತಮ್ಮನ ಹೆಂಡತಿಯನ್ನೇ ಬಡಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕುಶಾಲನಗರ ಸಮೀಪದ ರಂಗಸಮುದ್ರದಲ್ಲಿ ನಡೆದಿದೆ. ರಂಗಸಮುದ್ರದ ಬಿಪಿನ್ ಎಂಬಾತನೇ ಬಂಧಿತ ಆರೋಪಿ. ತಮ್ಮನ ಹೆಂಡತಿ ಜಲಜಾಕ್ಷಿ (೪೨) ಕೊಲೆಯಾದ ಮಹಿಳೆ. ಎಂದಿನಂತೆ ಅಮ್ಮತಿಯಿಂದ ರಂಗಸಮುದ್ರದ ತಮ್ಮ ಕಾಪಿ ತೋಟದಲ್ಲಿ ಕೆಲಸ ಮಾಡಲು ಬಂದಿದ್ದ ಜಲಜಾಕ್ಷಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ತಿಗಾಗಿ ಅಣ್ಣ-ತಮ್ಮನ ನಡುವೆ ಹಲವು ದಿನಗಳಿಂದ ಕಲಹ ನಡೆಯುತ್ತಿತ್ತು. ಇದೇ ವಿಚಾರದಲ್ಲಿ […]

ಬಸ್‌ನಿಂದ ಆಯಾತಪ್ಪಿ ಬಿದ್ದು ಮಹಿಳೆ ಸಾವು

19 Viewsಬಸ್ ಇಳಿಯುವಾಗ ಆಯಾತಪ್ಪಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ವಸತಿ ಶಾಲೆಯಲ್ಲಿ ಇದ್ದ ಮಗಳನ್ನು ನೋಡಲು ಬಂದ ತಾಯಿ, ನಂಜನಗೂಡು ತಾಲ್ಲೂಕಿನ ಮುದ್ದಹಳ್ಳಿಯ ಕಡುಬಿನ ಕಟ್ಟೆ ಗೇಟ್ ಬಳಿ ಬಸ್ ಇಳಿಯುವಾಗ ಆಯಾತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಮೊರಾರ್ಜಿ ಶಾಲೆಯಲ್ಲಿ ಓದುತ್ತಿರುವ ತಮ್ಮ ಮಗಳನ್ನು ನೋಡಲು ಚನ್ನಪಟ್ಟಣ ಗ್ರಾಮದಿಂದ ಮಹಿಳೆ ಭಾಗ್ಯಮ್ಮ (೩೦) ಶನಿವಾರ ಮಧ್ಯಾಹ್ನ ಆಗಮಿಸಿದ್ದರು. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂದ ಇವರು ಮುದ್ದಹಳ್ಳಿ ಕಡುಬಿನ ಕಟ್ಟೆ ಗೇಟ್‌ನಲ್ಲಿ ಬಸ್ ಇಳಿಯುವಾಗ ಅವರು ಇಳಿಯುವ ಮುನ್ನವೇ […]

ಯುವಕರ ಮೇಲೆ ಹಲ್ಲೆ ಆರೋಪ; ಪುರಸಭೆ ಸದಸ್ಯನ ಬಂಧನ

17 Views  ಯುವಕರಿಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಕೆ.ಆರ್‍.ನಗರದ ಪುರಸಭೆಯ ೧೯ನೇ ವಾರ್ಡಿನ ಕಾಂಗ್ರೆಸ್  ಸದಸ್ಯ ಸೈಯದ್ ಸಿದ್ದಿಖ್ ಅವರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.   ನ.೧೨ರಂದು ತಾಲ್ಲೂಕಿನ ಮಂಚನಹಳ್ಳಿ ಗ್ರಾಮದ ಮಹದೇವ ಮತ್ತು ಮಹದೇಶ ಎಂಬವರ ಮೇಲೆ ಪಟ್ಟಣದ ರಸ್ತೆ ಸಾರಿಗೆ ನಿಗಮದ ಘಟಕದ ಮುಂದೆ ಸೈಯದ್ ಸಿದ್ದಿಖ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಹಲ್ಲೆಗೊಳಗಾದ ಯುವಕರ ಸ್ನೇಹಿತ ಬೀರೇಶ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೊಲೆ ಯತ್ನದಡಿ ದೂರು ದಾಖಲಿಸಿಕೊಂಡಿದ್ದ […]

ಯುವತಿಯರ ಅಶ್ಲೀಲ ಫೋಟೊ ಹಾಕಿ ಬ್ಲಾಕ್ಮೇಲ್ ಮಾಡುತ್ತಿದ್ದ ವ್ಯಕ್ತಿ ಬಂಧನ

21 Viewsಹಾಸನ: ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಅಶ್ಲೀಲ ಘೋಟೊಗಳನ್ನು ಹಾಕಿ ಬ್ಲಾಕ್ಮೇಲ್ ಮಾಡಿ ಹಣ ವಸೂಲು ಮಾಡುತ್ತಿರುವ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಫೇಸ್‌ಬುಕ್‌ನಲ್ಲಿ ಕದ್ದ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಹಣ ನೀಡುವಂತೆ ಅಮಾಯಕ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಜಾಲವನ್ನು ಭೇದಿಸಿ ಆರೋಪಿಯೊಬ್ಬನನ್ನು ಹಾಸನದ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.  ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಕೇಡಿಗೆ ಗ್ರಾಮದ, ಕಾರು ಚಾಲಕ ಪ್ರಶಾಂತ್ ರಾಜಶೇಖರ್ ವಾಮ (೨೪) ಎಂಬಾತನೇ ಬಂಧಿತ ಆರೋಪಿ. ಕೃತ್ಯದಲ್ಲಿ […]

ರೈತನ ಖಾತೆಗೆ ಕನ್ನಾ; ಏರ್ಟೆಲ್ ಸಂಸ್ಥೆಗೆ ದಂಡ

29 Viewsಮೈಸೂರು: ರೈತನ ಖಾತೆಗೆ ಕನ್ನ ಹಾಕಿದ ಏರ್‌ಟೆಲ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ದಂಡ ವಿಧಿಸಿದೆ. ಆಧುನಿಕ ಮಾರುಕಟ್ಟೆ ಸಿದ್ಧಾಂತವು ಗ್ರಾಹಕನನ್ನು ಮಾರುಕಟ್ಟೆಯ ರಾಜನೆಂದು ಪರಿಗಣಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ಈಚೆಗೆ ಗ್ರಾಹಕರನ್ನು ಸಣ್ಣ ಮಾರುಕಟ್ಟೆಗಳಿಂದ ಹಿಡಿದು, ದೊಡ್ಡ ಕಂಪನಿಗಳು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ವೇಳೆಯಲ್ಲಿ ನೆಟ್‌ವರ್ಕ್ ಸಂಸ್ಥೆಯ ವಿರುದ್ಧವೇ ಪ್ರಕರಣ ಹೂಡಿ ಹಣ ಪೀಕಿಸಿರುವ ಅಂಶ ಬಲು ಅಪರೂಪವಾಗಿದೆ. […]