You cannot copy content of this page.
. . .

Day: November 30, 2019

‘ಚಕ್ರವರ್ತಿ’ಗೆ ಜನಸಾಮಾನ್ಯರ ಮಾತಿನ ‘ತಿವಿತ’..!

ಯುವ ಬ್ರಿಗೇಡ್‍ ನ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಇತ್ತೀಚೆಗೆ ಪದೇ ಪದೇ ಸಾಮಾಜಿಕ ಜಾಲತಾಣಿಗರಿಗೆ ಆಹಾರವಾಗುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂದಿದ್ದರ ಬಗ್ಗೆ ಮಾತನಾಡುತ್ತಾ ಅಮಿತ್‍ ಷಾರನ್ನು ಚಾಣಕ್ಯ ಅಲ್ಲ ಶಾಣಕ್ಯ ಎಂದು ಹೊಗಳಿದ್ದರು. ಅದಾದ 2 ದಿನದಲ್ಲೇ ಬಿಜೆಪಿ ಸರ್ಕಾರ ಉರುಳಿತ್ತು. ಆಗ ನೆಟ್ಟಿಗರು ಚಕ್ರವರ್ತಿ ಸೂಲಿಬೆಲೆ ಬಗ್ಗೆ ವ್ಯಂಗ್ಯವಾಡಿದ್ದರು. ಇದೀಗ ಹೈದರಾಬಾದ್‍ ನಲ್ಲಿ ನಡೆದ ಪಶು ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಲಿಬೆಲೆ ಮಾಡಿರುವ ಟ್ವೀಟ್‍, ನೆಟ್ಟಿಗರ […]

ಉಪ ಸಮರದಲ್ಲಿ ಸೇಬಿನ ಹಾರದ ‘ಪರ್ವ’

  ಹಿಂದೆ ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡಕ್ಕಾಗಿ ಜನ ಕಿತ್ತಾಡೋದನ್ನು ನೋಡ್ತಿದ್ವಿ. ಈಗ ಕಾಲ ಬದಲಾಗಿದೆ. ಜನ ಚುನಾವಣೆಗಳಲ್ಲಿ ಸೇಬುಗಳಿಗಾಗಿ ಕಿತ್ತಾಡುತ್ತಿದ್ದಾರೆ. ಜಗಳ ಮಾಡಿಕೊಂಡಾದರೂ ಸೇಬು ತಿನ್ನುತ್ತಿದ್ದಾರೆ. ಕಾಶ್ಮೀರಿ ಆಪಲ್‍ ಗಾಗಿ ಒಂದೇ ಪಕ್ಷದ ಕಾರ್ಯಕರ್ತರು ಹೊಡೆದಾಡುವ ಹಂತಕ್ಕೂ ತಲುಪುತ್ತಿದ್ದಾರೆ.       2018ರಲ್ಲಿ ಕುಮಾರಸ್ವಾಮಿಯವರ ಕುಮಾರ ಪರ್ವದ ಜೊತೆಗೆ ಸೇಬಿನ ಹಾರದ ಪರ್ವ ಶುರುವಾಗಿತ್ತು.. ಅದು ಈಗಲೂ ಮುಂದುವರೆಯುತ್ತಿದೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ಕುಮಾರ ಪರ್ವ ಆರಂಭಿಸಿದ್ದರು. ಆಗ […]

‘ವಿಶ್ವಾಸ’ದಿಂದ ಬೀಗಿದ ಉದ್ಧವ್ ಠಾಕ್ರೆ..

   ಗುರುವಾರವಷ್ಟೇ ಪ್ರಮಾಣವಚನ ಸ್ವೀಕರಿಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್‍ ಠಾಕ್ರೆ ಇಂದು ವಿಶ್ವಾಸಮತ ಗೆದ್ದಿದ್ದಾರೆ. ವಿಶ್ವಾಸಮತದ ಪರ 169 ಶಾಸಕರು ಮತ ಚಲಾಯಿಸಿದರೆ, ಸದನದಲ್ಲಿ ಹಾಜರಿದ್ದ ಎಂಎನ್‍ ಎಸ್ ನ ‍ ಒಬ್ಬ ಶಾಸಕ ಸೇರಿ ನಾಲ್ವರು ಶಾಸಕರು ತಟಸ್ಥರಾಗಿ ಉಳಿದಿದ್ದಾರೆ. ವಿಶ್ವಾಸಮತಯಾಚನೆ ಪ್ರಕ್ರಿಯೆ ಶುರುವಾಗುತ್ತಿದ್ದಂತೆ  ಗದ್ದಲ ಶುರು ಮಾಡಿದ ಬಿಜೆಪಿ ಸದಸ್ಯರು ಸದನದಿಂದ ಹೊರನಡೆದಿದ್ದಾರೆ.  ಶಿವಸೇನೆ, ಕಾಂಗ್ರೆಸ್‍ ಹಾಗೂ ಎನ್‍ ಸಿಪಿ ಮೈತ್ರಿಕೂಟದ ಸದಸ್ಯರು 154 ಮಂದಿ ಇದ್ದಾರೆ. ಇದರ ಜೊತೆಗೆ ಇತರೆ 15 ಶಾಸಕರು […]

ಸೇನಾ ಕ್ಯಾಂಟೀನ್ ಗೆ ಊಟಕ್ಕೆ ಬಂತಾ ಕಾಡಾನೆ..?

   ಇನ್ನು ಸ್ವಲ್ಪ ಹೊತ್ತಲ್ಲಿ ಸೇನಾ ಸಿಬ್ಬಂದಿ ಊಟಕ್ಕೆ ಕೂರಬೇಕಿತ್ತು. ಅಷ್ಟರಲ್ಲಿ ಅತಿಥಿಯಾಗಿ ಆಗಮಿಸಿತ್ತು ಕಾಡಾನೆ. ನೇರವಾಗಿ ಸೇನಾ ಕ್ಯಾಂಟೀನ್‍ ಒಳಗೇ ನುಗ್ಗಿತ್ತು. ನಂತರ ಅಲ್ಲಿ ನಡೆದಿದ್ದು ಕುರ್ಚಿ, ಟೇಬಲ್ಲುಗಳ ತೂರಾಟ..! ಈ ಘಟನೆ ನಡೆದದ್ದು, ಪಶ್ಚಿಮ ಬಂಗಾಳದ ಹಾಸಿಮಾರಾ ಸೇನಾ ಕ್ಯಾಂಟೀನ್‍ ನಲ್ಲಿ..    ಊಟದ ಹಾಲ್‍ ಗೆ ನುಗ್ಗಿದ ಕಾಡಾನೆ, ಸಿಕ್ಕ ಮೇಜು, ಕುರ್ಚಿಗಳ ತೂರಾಟ ನಡೆಸಿದೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ಕೂಗಾಡಿದ್ದಾರೆ. ಮುನ್ನುಗ್ಗುತ್ತಿದ್ದ ಸಲಗವನ್ನು ನಿಯಂತ್ರಿಸಲು ರಟ್ಟಿಗೆ ಬೆಂಕಿ ಹಚ್ಚಿ ಎಸೆದಿದ್ದಾರೆ. ಆದರೆ […]

ಅಮೆರಿಕದಲ್ಲಿ ಶೂಟೌಟ್ ಪ್ರಕರಣ: ಅಭಿಷೇಕ್ ನಿವಾಸಕ್ಕೆ ಶ್ರೀರಾಮುಲು ಭೇಟಿ

   ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಮೈಸೂರಿನ ಅಭಿಷೇಕ್‍ ನಿವಾಸಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ಮಾಡಿ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೈಸೂರಿನ ಕುವೆಂಪುನಗರದ E & F ಬ್ಲಾಕ್‍ ನಲ್ಲಿ ಮೃತ ಅಭಿಷೇಕ್‍ ಅವರ ನಿವಾಸವಿದೆ. ಅಭಿಷೇಕ್‍ ತಂದೆ ಸುದೇಶ್‍ ಚಂದ್‍ ಯೋಗಾ ಶಿಕ್ಷಕರಾಗಿದ್ದು, ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ಮಗ ಕೊಲೆಯಾದ ವಿಚಾರ ತಿಳಿದು ದಿಕ್ಕುತೋಚದಂತಾಗಿದ್ದಾರೆ. ಅವರ ಗೋಳಾಟ ತಿಳಿದು ಸಚಿವರು ಭೇಟಿ ನೀಡಿ ಮೃತ ಅಭಿಷೇಕ್‍ ಕುಟುಂಬಕ್ಕೆ ಸಾಂತ್ವನ ಹೇಳಿದರು.  ಇದೇ ವೇಳೆ […]