You cannot copy content of this page.
. . .

Day: November 29, 2019

ಮೈಸೂರಲ್ಲಿ ಮೊದಲ ಬಾರಿ ಅರಳಿಮರ ಸ್ಥಳಾಂತರ..

   ಖಾಸಗಿ ಜಾಗದಲ್ಲಿದ್ದ 4 ವರ್ಷದ ಅರಳಿ ಮರವನ್ನು ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಸ್ಥಳಾಂತರ ಮಾಡಲಾಗಿದೆ. ಅಗ್ರಹಾರ ಸರ್ಕಲ್‍ ಬಳಿಯ ಖಾಸಗಿ ಜಾಗದಲ್ಲಿ ಅರಳಿ ಮರವಿತ್ತು. ಆ ಜಾಗದಲ್ಲಿ ಮಾಲೀಕರು ಕಟ್ಟಡ ಕಟ್ಟಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ, ಆರ್‍ಟಿಒ ಹಾಗೂ O2 ಎಂಬ ಸರ್ಕಾರೇತರ ಸಂಸ್ಥೆಯ ನೇತೃತ್ವದಲ್ಲಿ ಮರವನ್ನು ಸ್ಥಳಾಂತರ ಮಾಡಲಾಯಿತು.   ಜೆಸಿಬಿ ಮೂಲಕ ಸುತ್ತಲೂ ಅಗೆದು ನಂತರ ಬೇರುಗಳ ಸಮೇತ ಮರವನ್ನು ಉರುಳಿಸಲಾಯಿತು. ನಂತರ ಕ್ರೇನ್‍ ತರಿಸಿ ಅದರ […]

ಕೇರಳದ ಅಕ್ಕಿತಂಗೆ ಜ್ಞಾನಪೀಠ ಪ್ರಶಸ್ತಿ

  ಅಕ್ಕಿತಂ ಎಂಬ ಕಾವ್ಯನಾಮದಿಂದಲೇ  ಜನಪ್ರಿಯರಾಗಿರುವ   ಮಲೆಯಾಳಂ   ಹಿರಿಯ ಸಾಹಿತಿ   ಅಚ್ಯುತನ್ ನಂಬೂದರಿ  ಅವರಿಗೆ  ಸಾಹಿತ್ಯಕ್ಕಾಗಿ ನೀಡುವ   ಅತ್ಯಂತ ಪ್ರತಿಷ್ಠಿತ  ಜ್ಞಾನಪೀಠ ಪುರಸ್ಕಾರವನ್ನು ಘೋಷಿಸಲಾಗಿದೆ. 93 ವರ್ಷದ  ಉತ್ತರ ಕೇರಳದ  ಈ ಹಿರಿಯ,  ಹೃದಯದಿಂದಲೇ   ಬರೆಯುವ  ಸಾಹಿತಿ ಎಂದೇ  ಮಲೆಯಾಳಂ  ಓದುಗ ಪ್ರೇಮಿಗಳಲ್ಲಿ  ಜನಪ್ರಿಯರಾಗಿದ್ದಾರೆ.   ದೆಹಲಿಯಲ್ಲಿ ನಡೆದ ಹಿರಿಯ ಒಡಿಯಾ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಪ್ರತಿಭಾ ರೇ ಅವರ ಅಧ್ಯಕ್ಷತೆಯ ಕೇಂದ್ರೀಯ ಆಯ್ಕೆ ಸಮಿತಿ ಸಭೆಯಲ್ಲಿ ಅಕ್ಕಿತಂ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಮಿತಿಯಲ್ಲಿ ದೇಶದ […]

ಅಮೆರಿಕದಲ್ಲಿ ಅಪರಿಚಿತರ ಗುಂಡೇಟಿಗೆ ಮೈಸೂರು ವಿದ್ಯಾರ್ಥಿ ಬಲಿ

   ವಿದ್ಯಾಭ್ಯಾಸ ಮಾಡಿಕೊಂಡು ಹೋಟೆಲ್‍ ನಲ್ಲಿ ಕೆಲಸ ಮಾಡುತ್ತಿದ್ದ  ಮೈಸೂರಿನ ವಿದ್ಯಾರ್ಥಿಯೊಬ್ಬನನ್ನು ಅಮೆರಿಕದಲ್ಲಿ ಗುಂಡಿಟ್ಟು ಕೊಲೆ ಮಾಡಲಾಗಿದೆ. ಮೈಸೂರಿನ ಕುವೆಂಪು ನಗರದ E & F ಬ್ಲಾಕ್‍ ನಲ್ಲಿರುವ ಯೋಗ ಶಿಕ್ಷಕ ಸುರೇಶ್‍ ಚಂದ್ರ ಅವರ ಪುತ್ರ ಅಭಿಷೇಕ್‍ ಕೊಲೆಯಾಗಿರುವ ವಿದ್ಯಾರ್ಥಿ. ಅಭಿಷೇಕ್‍ ಕಳೆದ ಒಂದೂವರೆ ವರ್ಷದಿಂದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‍ ಸೈನ್ಸ್‍ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ. ಜೊತೆಗೆ ಬಿಡುವಿನ ವೇಳೆಯಲ್ಲಿ ಹೋಟೆಲ್‍ ನಲ್ಲಿ ಕೆಲಸ ಮಾಡುತ್ತಿದ್ದನೆಂದು ಗೊತ್ತಾಗಿದೆ.    ಗುರುವಾರ ರಾತ್ರಿ ಹೋಟೆಲ್‍ ಕೆಲಸ […]

ಚಾಕೊಲೇಟ್ ನಲ್ಲಿ ಡ್ರಗ್ಸ್ ಇಟ್ಟು ಮಾರಾಟ..!

ಚಾಕೊಲೇಟ್‍ ನಲ್ಲಿ ಡ್ರಗ್ಸ್ ಇಟ್ಟು ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆಕೋರರನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೋಲ್ಕತ್ತಾ ಮೂಲದ ಅತೀಫ್ ಸಲೀಂ ಹಾಗೂ ರೋಹಿತ್‍ ಬಂಧಿತ ಆರೋಪಿಗಳು. ಬಂಧಿತರಿಂದ 1 ಕೋಟಿ ರೂಪಾಯಿ ಮೌಲ್ಯದ ಹಶೀಶ್ ಹಾಗೂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.   ಕೆನಡಾದಿಂದ ಆನ್‍ ಲೈನ್‍ ಮೂಲಕ ಡ್ರಗ್ಸ್‍ ತರಿಸಿಕೊಳ್ಳುತ್ತಿದ್ದ ಆರೋಪಿಗಳು, ಹಾಲಿನ ಪೌಡರ್‍ ಬಾಕ್ಸ್‍ ಗಳಲ್ಲಿ ಡ್ರಗ್ಸ್ ಡೆಲಿವರಿ ಮಾಡುತ್ತಿದ್ದರು. ಚಾಕ್‍ ಲೇಟ್‍ ರೂಪದಲ್ಲಿದ್ದದ್ದರಿಂದ ಪೊಲೀಸರಿಗೆ ಹಿಡಿಯಲಾಗಿರಲಿಲ್ಲ. ಡ್ರಗ್ಸ್ ಮಿಶ್ರಿತ ಒಂದು ಚಾಕೊಲೇಟ್‍ […]

ಎಚ್.ವಿಶ್ವನಾಥ್ ಅಲ್ಲ.. ಹೈ ಡೀಲ್ ವಿಶ್ವನಾಥ್; ಸಾರಾ ವ್ಯಂಗ್ಯ

   ಹುಣಸೂರು ಚುನಾವಣಾ ಕಣದಲ್ಲಿ ವಾಗ್ಯುದ್ಧಗಳು ಜೋರಾಗಿ ನಡೆಯುತ್ತಿದೆ. ಅದರಲ್ಲೂ ಎರಡು ದಿನದಿಂದ ಹುಣಸೂರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಶಾಸಕ ಸಾ.ರಾ.ಮಹೇಶ್‍, ಅನರ್ಹ ಶಾಸಕ ಎಚ್‍.ವಿಶ್ವನಾಥ್‍ ವಿರುದ‍್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇವತ್ತು ಅವರು ಶಿರಿಯೂರಿನಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮಿಸ್ಟರ್‍ ಕ್ಲೀನ್‍ ವಿಶ್ವನಾಥ್‍ ಹರಿಸುತ್ತಿರುವ ದುಡ್ಡು ಯಾವುದು..? ಎಂದು ಪ್ರಶ್ನಿಸಿದರು. ಅದು ವರ್ಗಾವಣೆ ದಂಧೆಯ ದುಡ್ಡಾ..? ಅಥವಾ ಗುತ್ತಿಗೆದಾರರಿಂದ ವಸೂಲಿ ಮಾಡಿದ್ದಾ ಎಂದು ಕೇಳಿದರು. ಮುಂದುವರೆಯುತ್ತಾ, ವಿಶ್ವನಾಥ್‍ ಅವರು ಬರೀ ಎಚ್‍.ವಿಶ್ವನಾಥ್‍ ಅಲ್ಲ, […]

ಉಪಸಮರ: ಪ್ರಚಾರಕ್ಕೆ ಹಾಸ್ಯ ನಟ ಬ್ರಹ್ಮಾನಂದಂ

15 ಕ್ಷೇತ್ರಗಳ ಉಪಚುನಾವಣೆ ಪ್ರಚಾರ ಕಣದಲ್ಲಿ ಸಿನಿ ತಾರೆಯರ ಮೆರುಗು ಹೆಚ್ಚಾಗುತ್ತಿದೆ. ಅದರಲ್ಲೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಿನಿತಾರೆಯರ ದಂಡೇ ಪ್ರಚಾರದಲ್ಲಿ ನಿರತವಾಗಿದೆ. ಇನ್ನೊಂದೆಡೆ ನಾಳೆ (ಶನಿವಾರ)  ತೆಲುಗಿನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಚಿಕ್ಕಬಳ್ಳಾರ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಬಿಜೆಪಿ ಪರ ಬ್ರಹ್ಮಾನಂದ ಪ್ರಚಾರ ನಡೆಸಲಿದ್ದಾರೆ.   ಬಿಜೆಪಿಯಿಂದ ಅಖಾಡಕ್ಕಿಳಿದಿರುವ ಅನರ್ಹ ಶಾಸಕ ಡಾ.ಕೆ.ಸುಧಾಕರ್‍, ಮತಬೇಟೆಗೆ ಸಿನಿಮಾ ಸ್ಟಾರ್‍ ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ನಟಿಯರಾದ ಹರ್ಷಿಕಾ ಪೂಣಚ್ಚ, ಹರಿಪ್ರಿಯ, ನಟರಾದ ಭುವನ್‍ , ದಿಗಂತ್‍ […]

ಸಂಜೆ ಜ್ಞಾನಪೀಠ ಪ್ರಶಸ್ತಿ ಪ್ರಕಟ ; ಮೈಸೂರಿಗೆ ಸಿಗುತ್ತಾ ಗೌರವ..?

  ದೆಹಲಿಯಲ್ಲಿ ಇಂದು ಜ್ಞಾನಪೀಠ ಪ್ರಶಸ್ತಿಯ ಕೇಂದ್ರೀಯ ಆಯ್ಕೆ ಸಮಿತಿ ಸಭೆ ಸೇರಿದೆ. ಸಂಜೆ ವೇಳೆಗೆ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟವಾಗಲಿದೆ. ಕನ್ನಡ ಉಪ ಸಮಿತಿಯಿಂದ ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಅದರಲ್ಲಿ ಮೈಸೂರಿನ ಸಾಹಿತಿ ಡಾ.ಲತಾ ರಾಜಶೇಖರ್‍ ಅವರೂ ಸೇರಿದ್ದಾರೆ.   ಹಿರಿಯ ಒಡಿಯಾ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಪ್ರತಿಭಾ ರೇ ಅವರ ಅಧ್ಯಕ್ಷತೆಯ ಕೇಂದ್ರೀಯ ಆಯ್ಕೆ ಸಮಿತಿಯಲ್ಲಿ ದೇಶದ ನಾನಾ ಭಾಷೆಗಳ 23 ಸಾಹಿತಿಗಳಿದ್ದಾರೆ. ಕನ್ನಡದ ಪ್ರತಿನಿಧಿಯಾಗಿ ಜೆ.ಎನ್‍.ಯು ಕನ್ನಡ ಪೀಠದ ನಿರ್ದೇಶಕರಾದ ಡಾ.ಪುರುಷೋತ್ತಮ […]