You cannot copy content of this page.
. . .

Day: November 28, 2019

ಮಹಾರಾಷ್ಟ್ರದಲ್ಲಿ ಠಾಕ್ರೆ ಸರ್ಕಾರ್ : ಪ್ರಮಾಣ ಸ್ವೀಕರಿಸಿದ ಉದ್ಧವ್

ಉದ್ಧವ್‌ ಠಾಕ್ರೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರಾಜ್ಯಪಾಲ ಕೋಶ್ಯಾರಿ ಅವರು ಉದ್ಧವ್‍ ಠಾಕ್ರೆಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉದ್ಧವ್‍ ಠಾಕ್ರೆ ಶಿವಾಜಿ ಹಾಗೂ ದೇವರ ಹೆಸರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಸದನದ ಸದಸ್ಯರಾಗದೇ ನೇರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮಹಾರಾಷ್ಟ್ರದ 8ನೇ ರಾಜಕಾರಣಿಯಾಗಿದ್ದಾರೆ. ಈಗಾಗಲೇ ಮಹಾರಾಷ್ಟ್ರದಲ್ಲಿ 7 ಮಂದಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 6 ತಿಂಗಳೊಳಗೆ ಸದನದ ಸದಸ್ಯರಾಗಿದ್ದರು. ಕಾಂಗ್ರೆಸ್‌ನ ಎ.ಆರ್‌. […]

ಸಿದ್ದರಾಮಯ್ಯ ಅವರಿಗೆ ನಿಷೇಧ ಹೇರಿ; ಚುನಾವಣಾ ಆಯೋಗಕ್ಕೆ ದೂರು

   ಸಿದ್ದರಾಮಯ್ಯ ಅವರು ಉಪಚುನಾವಣೆಯಲ್ಲಿ ಪ್ರಚಾರ ಮಾಡುವುದಕ್ಕೆ ನಿಷೇಧ ಹೇರಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿದೆ. ಬಿಜೆಪಿಯಿಂದ ನೋಟು ಪಡೆದು ಕಾಂಗ್ರೆಸ್‍ ಗೆ ಮತ ಹಾಕಿ ಎಂದು ಸಿದ್ದರಾಮಯ್ಯ ಪ್ರಚಾರ ಭಾಷಣಗಳಲ್ಲಿ ಹೇಳುತ್ತಿದ್ದಾರೆ. ಈ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಉಪಚುನಾವಣೆಯಲ್ಲಿ ಪ್ರಚಾರ ಮಾಡದಂತೆ ಸೂಚನೆ ನೀಡಬೇಕೆಂದು ಬಿಜೆಪಿ, ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.   ಹಿರೇಕೆರೂರಿನಲ್ಲಿ ನಿನ್ನೆ (ಬುಧವಾರ) ಸಿದ್ದರಾಮಯ್ಯ ಕಾಂಗ್ರೆಸ್‍ ಸಭೆಯಲ್ಲಿ […]

ಬರ್ತಿದ್ದಾನೆ ಬುಲೆಟ್‍ಪ್ರೂಫ್‍ ಮಾನವ; ನೀವೂ ಆಗಬಹುದು..!

  ಆಕ್ಸಿಡೆಂಟ್‍ ಆದರೂ ಏನೂ ಆಗಲ್ಲ.. ಗುಂಡಿನ ಮಳೆ ಸುರಿಸಿದರೂ ಪ್ರಾಣ ಹೋಗಲ್ಲ.. ಒಂದು ಹನಿ ರಕ್ತ ಕೂಡ ಹೊರಬರಲ್ಲ, ಚಿಕ್ಕದೊಂದು ಗಾಯವೂ ಆಗೋದಿಲ್ಲ.. ಈ ಸಾಲುಗಳನ್ನು ಓದಿ ನಿಮಗೆ ನಟ ರಜನಿಕಾಂತ್‍ ನೆನಪಿಗೆ ಬಂದಿರಬಹುದು.. ಆದರೆ ನಾವು ಹೇಳ್ತಾ ಇರೋದು ಆಕ್ಷನ್‍ ಸಿನಿಮಾವೊಂದರ ದೃಶ್ಯ ವಿವರಣೆ ಅಲ್ಲವೇ ಅಲ್ಲ.. ನಿಜವಾಗಿಯೂ ನಾವು ನೀವು ಕೂಡಾ ಸಿನಿಮಾಗಳಲ್ಲಿನ ಹೀರೋಗಳಂತಾಗಬಹುದು.. ಅಂದಹಾಗೆ ಮನುಷ್ಯ ಕಾಯಿಲೆ ಬಂದೋ ಅಥವಾ ವಯಸ್ಸಾಗೋ ಸಾಯಬಹುದು. ಇದನ್ನು ಯಾರೂ ತಡೆಯೋದಕ್ಕೆ ಆಗೋದಿಲ್ಲ.. ಆದರೆ ಯಾರಾದರೂ […]

ನಿಮ್ಮಂತೆ ರಾಸಲೀಲೆಗೆ ರೂಂ ಮಾಡಿಲ್ಲ; ವಿಶ್ವನಾಥ್ ಗೆ ಹೆಚ್ಡಿಕೆ ತಿರುಗೇಟು

   ನಿಮ್ಮಂತೆ ರಾಸಲೀಲೆ ನಡೆಸಲು ನಾನು ಹೋಟೆಲ್‍ ರೂಂ ಮಾಡಿರಲಿಲ್ಲ ಎಂದು ಅನರ್ಹ ಶಾಸಕ ಎಚ್‍.ವಿಶ್ವನಾಥ್‍ ಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಹುಣಸೂರಿನಲ್ಲಿ ಜೆಡಿಎಸ್‍ ಅಭ್ಯರ್ಥಿ ಪರ ಪ್ರಚಾರದ ಮೇಲೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ ವಿಶ್ವನಾಥ್‍ ವಿರುದ್ಧ ವಾಗ್ದಾಳಿ ನಡೆಸಿದರು.   ವಿಶ್ವನಾಥ್‍ ಅವರು ಎಷ್ಟು ಬಾರಿ ನಮ್ಮ ಮನೆಗೆ ಬಂದು ತಿಂಡಿ ಮಾಡಿಲ್ಲ ಹೇಳಿ. ಆದರೆ ಒಂದು ದಿನವಾದರೂ ಅವರು ನಮ್ಮ ಕ್ಷೇತ್ರದ ಕೆಲಸ ಮಾಡಿಕೊಡಿ ಎಂದು ಕೇಳಿದ್ದಾರಾ ಎಂದು ಕುಮಾರಸ್ವಾಮಿ […]

ಸಿದ್ದು, ಹೆಚ್ಡಿಕೆ ವಿರುದ್ಧ ಮಾನನಷ್ಟ ಕೇಸ್; ಸಿಎಂ

 ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮಾನನಷ್ಟು ಮೊಕದ್ದಮೆ ದಾಖಲಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಮಾತನಾಡಿದ ಅವರು, ನಾವು ಹಣ ಕೊಟ್ಟು ಶಾಸಕರನ್ನು ಖರೀದಿಸಿದ್ದೇನೆ ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆಂದು ಹೇಳಿದರು.    ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಉಪಚುನಾವಣೆಯ ಪ್ರಚಾರ ಭಾಷಣಗಳಲ್ಲಿ ಅನರ್ಹ ಶಾಸಕರು ತಮ್ಮನ್ನು ದುಡ್ಡಿಗೆ ಮಾರಿಕೊಂಡಿದ್ದಾರೆ. ಬಿಜೆಪಿಯವರು ಕೋಟಿ ಕೋಟಿ ಸುರಿದು, ಅವರನ್ನು ಕೊಂಡುಕೊಂಡಿದ್ದಾರೆಂದು […]

ಹೌದು ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್; ಹೆಚ್ಡಿಕೆ

ಕಣ್ಣೀರು ಹಾಕೋದು ನಮ್ಮ ಕುಟುಂಬದ ಪೇಟೆಂಟ್‍ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.   ಹುಣಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, ಬಡವರ ಕಷ್ಟ ನೋಡಿ ನನಗೆ ತಕ್ಷಣ ಕಣ್ಣೀರು ಬರುತ್ತದೆ. ನಿಮ್ಮಂತೆ ನಾನು ವಿಕ್ಸ್‍, ಗ್ಲಿಸರಿನ್‍ ಹಾಕಿಕೊಂಡು ಕಣ್ಣೀರು ಸುರಿಸೋದಿಲ್ಲ ಎಂದು ಸದಾನಂದಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನು ಭಾವನಾತ್ಮಕವಾಗಿ ಕಣ್ಣೀರು ಹಾಕುತ್ತೇನೆ. ಸದಾನಂದಗೌಡರಂತೆ ಯಾವಾಗಲೂ ಹಲ್ಲು ಬಿಟ್ಟುಕೊಂಡು ಇರೋದಕ್ಕೆ ಆಗುವುದಿಲ್ಲ. ಬಡವರನ್ನು ನೋಡಿ ನೋವಾಗಿ ಕಣ್ಣೀರಾಕಿದ್ದೇನೆಂದು ಕುಮಾರಸ್ವಾಮಿ ಇದೇ ವೇಳೆ […]

ಎಲ್ಲಾ ಪಕ್ಷಗಳೊಂದಿಗೂ ಸ್ನೇಹ ಬೆಳೆಸಿತ್ತು ಶಿವಸೇನೆ..

   ಉದ್ಧವ್‍ ಠಾಕ್ರೆ.. ಮಹಾರಾಷ್ಟ್ರದ ನೊಗ ಹೊರುತ್ತಿರುವ ಶಿವಸೈನಿಕ.. ಶಿವಸೇನಾ ಸಂಸ್ಥಾಪಕ ಬಾಳಾ ಸಾಹೇಬ್‍ ಠಾಕ್ರೆ ಪುತ್ರ.. ರಾಜಕೀಯಕ್ಕೆ ಬಂದು ಹಲವು ದಶಕಗಳ ಅನುಭವವಿದ್ದರೂ ಇದುವರೆಗೂ ಚುನಾವಣಾ ಕಣಕ್ಕೆ ಇಳಿದಿಲ್ಲ.. ಇವರಷ್ಟೇ ಅಲ್ಲ. ಇಡೀ ಠಾಕ್ರೆ ಕುಟುಂಬದ ಯಾವ ಸದಸ್ಯರೂ 2019ರವರೆಗೆ ಚುನಾವಣೆಗೆ ಸ್ಪರ್ಧಿಸಿರಲಿಲ್ಲ..    1966ರಲ್ಲಿ ಬಾಳಾ ಠಾಕ್ರೆ ಶಿವಸೇನೆ ಪಕ್ಷವನ್ನು ಸ್ಥಾಪಿಸಿದರು. ಆದರೆ ಬಾಳಾ ಠಾಕ್ರೆಯಿಂದ ಹಿಡಿದ ಠಾಕ್ರೆ ಕುಟುಂಬದ ಯಾರೂ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಬಾಳಾ ಠಾಕ್ರೆ ನಿಧನದ ಬಳಿಕ ಪಕ್ಷದ ಹೊಣೆಹೊತ್ತ ಪುತ್ರ […]