You cannot copy content of this page.
. . .

Day: November 27, 2019

ಡಿಕೆಶಿ ಹೇಳಿದ ತಕ್ಷಣ ಜನ ಸೋಲಿಸ್ತಾರಾ..? ; ವಿಶ್ವನಾಥ್ ತಿರುಗೇಟು

  ಡಿ.ಕೆ.ಶಿವಕುಮಾರ್‍ ಹೇಳಿಕೆಗೆ ಅನರ್ಹ ಶಾಸಕ ಹಾಗೂ ಹುಣಸೂರು  ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್‍.ವಿಶ್ವನಾಥ್‍ ತಿರುಗೇಟು ನೀಡಿದ್ದಾರೆ. ಡಿ.ಕೆ.ಶಿವಕುಮಾರ್‍ ಹೇಳಿದ ತಕ್ಷಣ ಜನರು ಸೋಲಿಸುವುದಾಗಲೀ, ಗೆಲ್ಲಿಸುವುದಾಗಲೀ ಮಾಡುವುದಿಲ್ಲ. ಏನೇ ಇದ್ದರೂ ಅದನ್ನು ಜನರೇ ತೀರ್ಮಾನ ಮಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್‍ ಹೇಳಿದ್ದಾರೆ.   ತಿಪ್ಪೂರಿನಲ್ಲಿ ಪ್ರಚಾರದ ಮೇಲೆ ಪ್ರತಿಕ್ರಿಯೆ ನೀಡಿದ ಎಚ್‍.ವಿಶ್ವನಾಥ್‍, ಕಾಂಗ್ರೆಸ್‍ ಹಾಗೂ ಜೆಡಿಎಸ್‍ ನಾಯಕರು ಚೆನ್ನಾಗಿದ್ದರೆ ಉಪಚುನಾವಣೆ ಏಕೆ ಬರುತ್ತಿತ್ತು. ಆ ಎರಡೂ ಪಕ್ಷಗಳಿಂದಾಗಿಯೇ ಈಗ ಚುನಾವಣೆ ಎದುರಾಗಿದೆ ಎಂದು ಆರೋಪಿಸಿದರು.   ನಿವೃತ್ತಿ ಸಮಯದಲ್ಲಿ […]

ನಿವೃತ್ತಿ ಸಮಯದಲ್ಲಿ ವಿಶ್ವನಾಥ್ ಶಾಸಕರಾದರು ; ಡಿ.ಕೆ.ಶಿ

ಮಾಜಿ ಸಚಿವ ಡಿ.ಕೆ.ಶಿವಕುಮಾರ್‍ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿದರು. ಹಳ್ಳಿಗಳಲ್ಲಿ ರೋಡ್‍ ಶೋ ನಡೆಸಿದ ಅವರು ಕಾಂಗ್ರೆಸ್‍ ಅಭ್ಯರ್ಥಿ ಎಚ್‍.ಪಿ.ಮಂಜುನಾಥ್ ಪರವಾಗಿ ಮತಯಾಚನೆ ಮಾಡಿದರು. ಈ ವೇಳೆ ಅವರು ಬಿಜೆಪಿ ಅಭ್ಯರ್ಥಿ ಎಚ್‍.ವಿಶ್ವನಾಥ್‍ ವಿರುದ್ಧ ವಾಗ್ದಾಳಿ ನಡೆಸಿದರು.  ನಿವೃತ್ತಿ ಸಮಯದಲ್ಲಿ ಎಚ್‍.ವಿಶ್ವನಾಥ್‍ ಗೆ ಕುಮಾರಸ್ವಾಮಿ ಹಾಗೂ ದೇವೇಗೌಡರು ಟಿಕೆಟ್‍ ಕೊಟ್ಟು ಗೆಲ್ಲಿಸಿದರು. ಆದರೆ ವಿಶ್ವನಾಥ್‍ ಅವರ ಬೆನ್ನಿಗೆ ಚೂರಿ ಬಿಜೆಪಿಗೆ ಹಾರಿದ್ದಾರೆ. ಯಾವುದೇ ಕಾರಣಕ್ಕೂ ವಿಶ್ವನಾಥ್‍ ಗೆ ಮತ ಹಾಕಬೇಡಿ. ಕಾಂಗ್ರೆಸ್‍ ಅಭ್ಯರ್ಥಿ ಮಂಜುನಾಥ್‍ […]

ಸರ್ಕಾರ ಸ್ಥಿರವಾಗುತ್ತೆ, ಬಿಜೆಪಿ ಸರ್ಕಾರವಲ್ಲ; ಎಚ್.ಡಿ.ಕೆ

    ನಾನು ಉಪಚುನಾವಣೆ ನಂತರ ಸರ್ಕಾರ ಸ್ಥಿರವಾಗುತ್ತೆ ಅಂತ ಹೇಳಿದ್ದೆ. ಆದರೆ ಬಿಜೆಪಿ ಸರ್ಕಾರ ಸ್ಥಿರವಾಗುತ್ತೆ ಅಂತ ಹೇಳಿಲ್ಲ. ಯಾವ ಸರ್ಕಾರ ಸ್ಥಿರವಾಗುತ್ತೆ ಅನ್ನೋದು ಡಿಸೆಂಬರ್‍ 9ರಂದು ಗೊತ್ತಾಗುತ್ತೆ ಎಂದು ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ಹೇಳಿದ್ದಾರೆ.    ಕೆ.ಆರ್‍.ಪೇಟೆ ಉಪಚುನಾವಣಾ ಪ್ರಚಾದಲ್ಲಿರುವ ಎಚ್‍ ಡಿಕೆ ಕಿಕ್ಕೇರಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಬಿಜೆಪಿ ಸರ್ಕಾರ ಸ್ಥಿರವಾಗಿರುತ್ತೆ ಅಂತ ನಾನು ಎಂದೂ ಹೇಳಿಲ್ಲ. ಸರ್ಕಾರ ಸ್ಥಿರವಾಗಿರುತ್ತೆ ಅಂತ ಅಷ್ಟೇ ಹೇಳಿರೋದು. ಡಿಸೆಂಬರ್‍ 9ರ […]

ಬಾಂಬೆ ಅಲ್ಲ, ಕಾಮಾಟಿಪುರ ಮಾಡುತ್ತಾರೆ: ಡಿ.ಸಿ.ತಮ್ಮಣ್ಣ ವ್ಯಂಗ್ಯ

 ಕೆ.ಸಿ.ನಾರಾಯಣಗೌಡರನ್ನು ಶಾಸಕರನ್ನಾಗಿ ಮಾಡಿದರೆ ಅವರು ಕೆ.ಆರ್.ಪೇಟೆಯನ್ನು ಕಾಮಾಟಿಪುರವನ್ನಾಗಿ ಮಾಡುತ್ತಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವ್ಯಂಗ್ಯವಾಡಿದ್ದಾರೆ.   ಜೆಡಿಎಸ್‍ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ನಾರಾಯಣಗೌಡರು ಕೆ.ಆರ್‍.ಪೇಟೆಯನ್ನು ಬಾಂಬೆ ರೀತಿಯಲ್ಲಿ ಅಭಿವೃದ್ಧಿ ಮಾಡುವುದು ಸುಳ್ಳು. ಬದಲಾಗಿ ಕಾಮಾಟಿಪುರವನ್ನಾಗಿ ಬದಲಾಯಿಸುತ್ತಾರೆ ಎಂದರು. ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿ ಸೇರಿರುವ ಕೆ.ಸಿ.ನಾರಾಯಣಗೌಡರನ್ನು ಸೋಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ನಾರಾಯಣಗೌಡರನ್ನು ಬಾಂಬೆ ಕಳ್ಳ ಅಂತಿದ್ದರು..! ; ಎಚ್.ಡಿ.ಕೆ

   ಕೆ.ಆರ್‍.ಪೇಟೆ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರನ್ನು ಬಾಂಬೆ ಕಳ್ಳ ಅಂತ ಎಲ್ಲರೂ ಕರೆಯುತ್ತಿದ್ದರು. ಆದರೂ ನಾನು ಟಿಕೆಟ್‍ ಕೊಟ್ಟು ಶಾಸಕನನ್ನಾಗಿ ಮಾಡಿದೆ. ದೇವೇಗೌಡರು ನಾರಾಯಣಗೌಡರಿಗೆ ಟಿಕೆಟ್‍ ಕೊಡುವುದು ಬೇಡ ಎಂದಿದ್ದರು. ಅವರ ಮಾತನ್ನು ಲೆಕ್ಕಿಸದೇ ನಾನು ಟಿಕೆಟ್‍ ಕೊಟ್ಟು ಗೆಲ್ಲಿಸಿದೆ. ಅಂತಹ ವ್ಯಕ್ತಿ ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾನೆ ಎಂದು ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.    ಕೆ.ಆರ್‍.ಪೇಟೆ ಕ್ಷೇತ್ರದಲ್ಲಿ ನಡೆದ ಜೆಡಿಎಸ್‍ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ […]

ಫಡ್ನವಿಸ್ ಪತ್ನಿ ಅಮೃತಾ ಆಶಾವಾದದ ಟ್ವೀಟ್

   ಮಹಾರಾಷ್ಟ್ರದ ನಿರ್ಗಮಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ ಪತ್ನಿ ರಾಜಕೀಯದಲ್ಲಿಲ್ಲ. ಆದರೆ ಆಗಾಗ ರಾಜಕೀಯದ ವಿಷಯಗಳನ್ನು ಚರ್ಚೆ ಮಾಡುತ್ತಾ ಪ್ರಚಾರದಲ್ಲಿರುತ್ತಾರೆ. ಮಂಗಳವಾರ ಅಮೃತಾ ಅವರ ಪತಿ ದೇವೇಂದ್ರ ಪಡ್ನವಿಸ್‍ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೃತಾ ಅಶಾವಾದದ ಟ್ವೀಟ್‍ ಒಂದನ್ನು ಮಾಡಿದ್ದಾರೆ. ಆ ಟ್ವೀಟ್‍ ನ ಸಾರಾಂಶ ಇಲ್ಲಿದೆ. “ಈಗ ಚಳಿಗಾಲವಿದೆ. ವಾತಾವರಣ ಬದಲಾದ ಬಳಿಕ ಎಲ್ಲವೂ ಬದಲಾಗಲಿದೆ. ಇನ್ನಷ್ಟು ಹೊಸತನದೊಂದಿಗೆ ಮತ್ತೆ ಬರುತ್ತೇವೆ. 5 ವರ್ಷದ ಕಾಲ ನಿಮ್ಮ ಸಹೋದರಿ ಎಂಬಂತೆ ಪ್ರೀತಿ […]

ವಿಶ್ವನಾಥ್ ಸೀಸನ್ ರಾಜಕಾರಣಿ ; ದೇವೇಗೌಡ ವ್ಯಂಗ್ಯ

   ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್‍.ವಿಶ್ವನಾಥ್‍ ಸೀಸನ್‍ ರಾಜಕಾರಣಿ ಎಂದು ಮಾಜಿ ಪ್ರಧಾನಿ ಎಚ್‍.ಡಿ.ದೇವೇಗೌಡ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ವಿಶ್ವನಾಥ್‍ ಹೃದಯದಲ್ಲಿರುವುದೇ ಬೇರೆ. ಜನರ ಮುಂದೆ ಮಾತನಾಡುವುದೇ ಬೇರೆ ಎಂದು ಹೇಳಿದ್ದಾರೆ.    ವಿಶ್ವನಾಥ್‍ ನನ್ನನ್ನೂ ಹೊಗಳುತ್ತಾರೆ, ಸಿದ್ದರಾಮಯ್ಯರನ್ನೂ ಹೊಗಳುತ್ತಾರೆ. ಈಗ ನಮ್ಮಂಥಹ ನಾಯಕರನ್ನು ಟೀಕೆ ಮಾಡಿದರೆ ತೊಂದರೆ ಎಂದು ಅವರಿಗೆ ಗೊತ್ತಿದೆ. ಹೀಗಾಗಿ ಅವರು ನಮ್ಮನ್ನು ಹೊಗಳುತ್ತಾರೆ ಎಂದು ದೇವೇಗೌಡರು ಹೇಳಿದ್ದಾರೆ. ಇನ್ನು ಮಹಾರಾಷ್ಟ್ರ ರಾಜಕೀಯ ಬೆಳವಣಗೆ ಬಗ್ಗೆ ಮಾತನಾಡಿದ ದೇವೇಗೌಡರು, ದೇಶದ ರಾಜಕಾರಣದಲ್ಲಿ […]