You cannot copy content of this page.
. . .

Day: November 26, 2019

NCP ಶಾಸಕರನ್ನು ರಕ್ಷಿಸಿದ್ದು ಸೋನಿಯಾ..!

    ಅಜಿತ್‍ ಪವಾರ್‍ ಜೊತೆ ಹೋಗಿ ಬಿಜೆಪಿ ಬೆಂಬಲಿಸಿದ್ದ ಶಾಸಕರನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿ ಕರೆತಂದಿದ್ದು ಸೋನಿಯಾ. ದೆಹಲಿ ಸೇರಿದ್ದ ನಾಲ್ವರು ಎನ್‍ ಸಿಪಿ ಶಾಸಕರನ್ನು ಸೋನಿಯಾ ವಾಪಸ್‍ ಕರೆತಂದಿದ್ದರಿಂದಲೇ ಇಂದು ಬಿಜೆಪಿ ಸೋಲೊಪ್ಪಿಕೊಳ್ಳಬೇಕಾಯಿತು. ಇಲ್ಲದಿದ್ದರೆ ಮತ್ತಷ್ಟು ಆಪರೇಷನ್‍ ಸಾಧ್ಯವಾಗುತ್ತಿತ್ತು. ಅಂದಹಾಗೆ, ಶಾಸಕರನ್ನು ರಕ್ಷಿಸಿದ ಸೋನಿಯಾ ಕಾಂಗ್ರೆಸ್‍ ಅಧಿನಾಯಕಿ ಅಲ್ಲ. ಎನ್‍ ಸಿಪಿ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಸೋನಿಯಾ ದೂಹನ್‍.   ಅಜಿತ್‍ ಪವಾರ್‍ ಶನಿವಾರ ಬೆಳಗ್ಗೆ ಬಿಜೆಪಿಗೆ ಬೆಂಬಲ ಸೂಚಿಸಿ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. […]

ಕಡಿಮೆ ಅವಧಿಯಲ್ಲಿ ರಾಜೀನಾಮೆ ಕೊಟ್ಟ ಸಿಎಂಗಳಿವರು..

   ಮಹಾರಾಷ್ಟ್ರದಲ್ಲಿ ಪ್ರಮಾಣವಚನ ಸ್ವೀಕರಿಸಿದ 4 ದಿನದಲ್ಲೇ ದೇವೇಂದ್ರ ಫಡ್ನವಿಸ್‍ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗೆ ಬಹುಮತ ಸಾಬೀತುಪಡಿಸುತ್ತೇವೆಂಬ ಧೈರ್ಯದಿಂದ ಪ್ರಮಾಣವಚನ ಸ್ವೀಕರಿಸಿ, ನಂತರ ಪರಿಸ್ಥಿತಿ ಅರಿವಾಗಿ ರಾಜೀನಾಮೆ ನೀಡಿದ ಮುಖ್ಯಮಂತ್ರಿಗಳು ಸಾಕಷ್ಟು ಜನ ಇದ್ದಾರೆ. ಅವರು ಯಾರ್ಯಾರು..? ಎಷ್ಟು ದಿನ ಅಧಿಕಾರದಲ್ಲಿದ್ದರು..? ಇಲ್ಲಿದೆ ಮಾಹಿತಿ. ಅವಧಿ: 21-23 ಫೆಬ್ರವರಿ 1998 – 3 ದಿನ (44 ಗಂಟೆ) ಅಧಿಕಾರ ಜಗದಾಂಬಿಕಾ ಪಾಲ್ ಉತ್ತರ ಪ್ರದೇಶ ಅವಧಿ: 17-19 ಮೇ 2018 – 3 ದಿನ […]

‘ಮಹಾ’ ಡ್ರಾಮಾ; ದೋಸ್ತಿ ಗಟ್ಟಿ ಮಾಡಿದರೇ ಖರ್ಗೆ..?

   ಮಹಾರಾಷ್ಟ್ರದಲ್ಲಿ ನಾಲ್ಕೇ ದಿನಕ್ಕೆ ದೇವೇಂದ್ರ ಫಡ್ನವಿಸ್‍ ನೇತೃತ್ವದ ಸರ್ಕಾರ ಪದತ್ಯಾಗ ಮಾಡಿದೆ. ಇನ್ನೇನು 162 ಶಾಸಕರ ಬೆಂಬಲ ಹೊಂದಿರೋ ಉದ್ಧವ್‍ ಠಾಕ್ರೆ ಸಿಎಂ ಆಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಅಂದಹಾಗೆ ಶಿವಸೇನೆ ಸಿದ್ಧಾಂತಗಳಿಗೂ ಎನ್‍ ಸಿಪಿ ಹಾಗೂ ಕಾಂಗ್ರೆಸ್‍ ಸಿದ್ಧಾಂತಗಳಿಗೂ ತದ್ವಿರುದ್ಧ. ಇಂತಹ ಪಕ್ಷಗಳ ದೋಸ್ತಿ ಗಟ್ಟಿಯಾಗೋದಕ್ಕೆ, ಬಿಜೆಪಿ ಅಡ್ಡದಾರಿಯಲ್ಲಿ ಸರ್ಕಾರ ರಚನೆ ಮಾಡಿದರೂ ಒಗ್ಗಟ್ಟು ಬಿಡದೇ ಇರೋದಕ್ಕೆ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರಾ..? ಕಳೆದ ನಾಲ್ಕು ದಿನಗಳಿಂದ ನಡೆದ ಬೆಳವಣಿಗೆಗಳು ನೋಡಿದರೆ ಈ ಪ್ರಶ್ನೆಗೆ ಹೌದು […]

ಸೋಲೊಪ್ಪಿಕೊಂಡ ಬಿಜೆಪಿ; ‘ಮಹಾ’ ಸಿಎಂ ಫಡ್ನವಿಸ್‍ ರಾಜೀನಾಮೆ

    ಬಹುಮತ ಸಾಬೀತಿಗೂ ಮುಂಚೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸೋಲೊಪ್ಪಿಕೊಂಡಿದೆ. ಬಹುಮತ ಸಾಬೀತಿಗೆ ಬೇಕಾದಷ್ಟು ಶಾಸಕರ ಬಲ ಇಲ್ಲದಿರುವುದರಿಂದ ಫಡ್ನವಿಸ್‍ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಫಡ್ನವಿಸ್‍ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದರು. ಅನಂತರ ರಾಜ್ಯಪಾಲ ಭಗತ್‍ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದರು. ಇದಕ್ಕೂ ಮುಂಚೆ ಡಿಸಿಎಂ ಅಜಿತ್ ಪವಾರ್‍ ಕೂಡಾ ರಾಜೀನಾಮೆ ಸಲ್ಲಿಸಿದ್ದರು. ಇದರಿಂದಾಗಿ ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಗೆ ದಾರಿ ಸುಗಮವಾದಂತಾಗಿದೆ.   ಇಂದು ರಿಟ್‍ ಅರ್ಜಿಯ […]

ಡಿಸಿಎಂ ಸ್ಥಾನಕ್ಕೆ ಅಜಿತ್‍ ಪವಾರ್ ರಾಜೀನಾಮೆ

  ಬಹುಮತ ಸಾಬೀತುಪಡಿಸಲು ಸುಪ್ರಿಂ ಕೋರ್ಟ್‍ ನಾಳೆ ಸಂಜೆ 5 ಗಂಟೆ ಗಡುವು ನೀಡುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆಯೇ ಡಿಸಿಎಂ ಸ್ಥಾನಕ್ಕೆ ಅಜಿತ್ ‍ಪವಾರ್‍ ರಾಜೀನಾಮೆ ನೀಡಿದ್ದಾರೆ . ಬಹುಮತ ಸಾಬೀತಿಗೂ ಮೊದಲೇ ಅಜಿತ್‍ ಪವಾರ್‍ ಸೋಲೊಪ್ಪಿಕೊಂಡಿದ್ದಾರೆ.   ಶನಿವಾರ ಅನಿರೀಕ್ಷಿತ ಬೆಳವಣಿಗೆಯಲ್ಲಿ ಎನ್‍ ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಅಜಿತ್‍ ಪವಾರ್‍ ಬಿಜೆಪಿಗೆ ಬೆಂಬಲ ನೀಡಿದ್ದರು. ಎನ್‍ ಸಿಪಿಯ ಎಲ್ಲಾ ಶಾಸಕರೂ ಬೆಂಬಲಿಸುತ್ತಾರೆನ್ನುವ ವಿಶ್ವಾಸ ಹೊಂದಿದ್ದ ಬಿಜೆಪಿ, ಅಜಿತ್‍ ಪವಾರ್‍ ಜೊತೆ ಸೇರಿ […]

‘ಮಹಾ’ ಬಿಕ್ಕಟ್ಟು: ಕರ್ನಾಟಕದ ತೀರ್ಪು ಉಲ್ಲೇಖಿಸಿದ ಸುಪ್ರೀಂ

    ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಬುಧವಾರ ಸಂಜೆಯೊಳಗೆ ವಿಶ್ವಾಸಮತ ಯಾಚಿಸುವಂತೆ ಸಿಎಂ ಫಡ್ನವಿಸ್‍ ಗೆ ಸೂಚನೆ ನೀಡಿದೆ. ಈ ತೀರ್ಪು ನೀಡುವಾಗ ನ್ಯಾಯಮೂರ್ತಿ ಎನ್.ವಿ.ರಮಣ ಅವರು, ಕರ್ನಾಟಕದ ಎಸ್.ಆರ್.ಬೊಮ್ಮಾಯಿ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಏನಿದು ಎಸ್‍.ಆರ್‍.ಬೊಮ್ಮಾಯಿ ಕೇಸ್‍..?    1989ರಲ್ಲಿ ಎಸ್.ಆರ್. ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಕೆಲ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರಕ್ಕೆ ನೀಡಿದ್ದ ವಾಪಸ್‍ ಪಡೆಯುತ್ತಿರುವುದಾಗಿ ಪತ್ರ ನೀಡಿದ್ದರು. ಆಗ ರಾಜ್ಯದಲ್ಲಿ ರಾಜಕೀಯ […]

ಅಯೋಧ್ಯಾ ತೀರ್ಪು: ಮರು ಪರಿಶೀಲನಾ ಅರ್ಜಿ ಇಲ್ಲ

    ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಮರು ಪರಿಶೀಲನಾ ಅರ್ಜಿ ಸಲ್ಲಿಸದಿರಲು ಸುನ್ನಿ ವಕ್ಫ್ ಬೋರ್ಡ್‍ ನಿರ್ಧಾರ ಕೈಗೊಂಡಿದೆ. ಇಂದು 7 ಸದಸ್ಯರ ಸುನ್ನಿ ವಕ್ಫ್ ಬೋರ್ಡ್‍ ಕಮಿಟಿ ಈ ಸಂಬಂಧ ಸಭೆ ಸೇರಿತ್ತು. ಸುಪ್ರೀಂ ಕೋರ್ಟ್‍ ತೀರ್ಪು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕೆ ಬೇಡವೆ ಎಂಬುದರ ಕುರಿತು ಚರ್ಚಿಸಲಾಯಿತು. ಆದರೆ 7 ಸದಸ್ಯರ ಸಭೆಯಲ್ಲಿ 6 ಮಂದಿ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಅಯೋಧ್ಯಾ ವಿವಾದ ಇನ್ನು ಮುಗಿದ ಅಧ್ಯಾಯವಾದಂತಾಗಿದೆ.   ಸುನ್ನಿ ವಕ್ಫ್ […]

ಇದು ‘ನಿಸರ್ಗ’ ಲೇಔಟ್ ; ಸುಸಜ್ಜಿತ ಮನೆಗಳಲ್ಲಿ ಮರ, ಗಿಡಗಳ ವಾಸ..!

  ಮೈಸೂರು ನಗರದಲ್ಲಿ ಸರ್ಕಾರದ ಎಷ್ಟೋ ಬಡಾವಣೆಗಳಿವೆ. ಕೆಲವು ಬಡಾವಣೆಗಳಲ್ಲಿ ಮನೆಯ ಪರಿಸ್ಥಿತಿ ಸರಿಯಿಲ್ಲ ಎಂದು ವಾಸಿಸುತ್ತಿರುವ ಜನ ದೂರುತ್ತಿದ್ದರೆ, ಇನ್ನು ಕೆಲವು ಬಡಾವಣೆಗಳಲ್ಲಿ ಕಟ್ಟಿ ಮೂರು ನಾಲ್ಕು ವರ್ಷವಾದರೂ ಸುಸ್ಥಿತಿಯಲ್ಲಿರುವ ಮನೆಗಳಿಗೆ ವಾಸಿಸಲು ಜನರೇ ಬಂದಿಲ್ಲ. ಅದರಲ್ಲಿ ಒಂದು ಕೆಎಚ್‌ಬಿ ವತಿಯಿಂದ ನಿರ್ಮಾಣವಾದ ಕೆ.ಆರ್.ಎಸ್ ನಿಸರ್ಗ ಬಡಾವಣೆ.    ಇಲವಾಲ ಹೋಬಳಿಯ ಗೊಮ್ಮಟಗಿರಿ ಬಳಿ ಇರುವ ಈ ಬಡಾವಣೆಯಲ್ಲಿ ಮನೆಗಳು ನಿರ್ಮಾಣವಾಗಿ ನಾಲ್ಕು ವರ್ಷ ಕಳೆದಿದ್ದರೂ ಅಲ್ಲಿ ಜನ ಮಾತ್ರ ಕಾಣುವುದಿಲ್ಲ. ೨೦*೩೦, ೩೦*೪೦, ೬೦*೪೦ […]

ಗೋಕುಲಂನಲ್ಲೊಂದು ಆಮ್ಲಜನಕ ಮನೆ..!

 ಪರಿಸರ ಉಳಿಸಬೇಕು, ವಾತಾವರಣವನ್ನು ಹಸಿರಾಗಿಟ್ಟುಕೊಳ್ಳಬೇಕು ಎಂದು ಹೇಳುವವರು ಸಾಕಷ್ಟು ಜನ ಇದ್ದಾರೆ. ಆದರೆ ದುರದೃಷ್ಟವಶಾತ್ ಅದನ್ನು ಹೇಳುವವರ ಸಂಖ್ಯೆ ಪಾಲಿಸುವವರ ಸಂಖ್ಯೆಗಿಂತ ಹತ್ತು ಪಟ್ಟು ಅಧಿಕ. ಆದರೆ ಕೆಲವರು ಮಾತ್ರ ಹಸಿರು ಬೆಳೆಸಿ ಪರಿಸರ ಉಳಿಸುವ ಪಣತೊಟ್ಟು ಪ್ರಚಾರವಿಲ್ಲದೆ ಸಮಾಜಕ್ಕೆ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ.    ಮೈಸೂರಿನ ಗೋಕುಲಂನಲ್ಲಿರುವ `ವರ್ಟಿಕಲ್ ಗಾರ್ಡನ್’ ಹೆಸರಿನ ಬೆಂಜಮಿನ್ ವಾಸ್ ಅವರ ಮನೆಯನ್ನು ಸ್ವಲ್ಪ ದೂರದಿಂದ ನೋಡಿದರೆ ಯಾರೂ ಅದನ್ನು ಮನೆ ಎಂದು ಕಂಡುಹಿಡಿಯುವುದಿಲ್ಲ. ವಿವಿಧ ಗಿಡಗಳನ್ನು ಮಾರುವ ನರ್ಸರಿ […]

‘ಮಹಾ’ ಬಿಕ್ಕಟ್ಟು; ನಾಳೆಯೇ ಬಹುಮತ ಸಾಬೀತುಪಡಿಸಿ-ಸುಪ್ರೀಂ

 ನಾಳೆ (ಬುಧವಾರ) ಹಂಗಾಮಿ ಸ್ಪೀಕರ್‍ ನೇಮಕ ಮಾಡಬೇಕು. ಸಂಜೆ 5 ಗಂಟೆಯೊಳಗೆ ಎಲ್ಲಾ ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸಬೇಕು. ಅನಂತರ ಬಹುಮತ ಸಾಬೀತು ಪ್ರಕ್ರಿಯೆ ನಡೆಯಬೇಕು ಎಂದು ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ಹೊರಡಿಸಿದೆ. ಬಹುಮತ ಸಾಬೀತು ಪ್ರಕ್ರಿಯೆ ನೇರ ಪ್ರಸಾರ ಮಾಡಬೇಕು, ಗೌಪ್ಯ ಮತದಾನ ಮಾಡಬಾರದು ಎಂದೂ ಸುಪ್ರೀಂ ಕೋರ್ಟ್‍ ಸೂಚಿಸಿದೆ.  ಶನಿವಾರ ಬೆಳಗಿನಜಾವದ ತನಕ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು. ಕಾಂಗ್ರೆಸ್‍, ಎನ್‍ ಸಿಪಿ ಹಾಗೂ ಶಿವಸೇನೆ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ […]