You cannot copy content of this page.
. . .

Day: November 25, 2019

ಬಿಜೆಪಿ ಜೊತೆ ಕೈಜೋಡಿಸಿದ್ದಕ್ಕೆ ಗಿಫ್ಟ್ ; ಅಜಿತ್‍ ಪವಾರ್ ಗೆ ಕ್ಲೀನ್‍ ಚಿಟ್

    ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ಕೊಟ್ಟು ಡಿಸಿಎಂ ಆದ 48 ಗಂಟೆಯೊಳಗೇ ಅಜಿತ್‍ ಪವಾರ್‍ ಅವರ ಮೇಲಿನ ಎಲ್ಲಾ ಆರೋಪಗಳನ್ನೂ ಎಸಿಬಿ ಕೈಬಿಟ್ಟಿದೆ.  ಅಜಿತ್ ಪವಾರ್ ವಿರುದ್ಧ ದಾಖಲಾಗಿದ್ದ ನೀರಾವರಿ ಹಗರಣದ ಪ್ರಕರಣಗಳನ್ನು ಕೈಬಿಡಲಾಗಿದೆ. ಅವರು ಇದರಲ್ಲಿ ಆರೋಪಿ ಅಲ್ಲ ಎಂದು ಮಹಾರಾಷ್ಟ್ರ ಎಸಿಬಿ ಹೇಳಿದೆ.   1999-2004ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್‌-ಎನ್‌ಸಿಪಿ ಸರ್ಕಾರದಲ್ಲಿ ಅಜಿತ್‌ ಪವಾರ್‌ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಭಾರೀ ಸದ್ದು ಮಾಡಿದ್ದ 70 ಸಾವಿರ ಕೋಟಿ […]

ಹಾಡಹಗಲೇ ಎಟಿಎಂ ಯಂತ್ರ ಬ್ಲಾಸ್ಟ್ ಮಾಡಿದ ಕಳ್ಳರು..!

   ಹಣ ದೋಚುದಕ್ಕಾಗಿ ಕಳ್ಳರು ಎಟಿಎಂ ಯಂತ್ರವನ್ನೇ ಬ್ಲಾಸ್ಟ್ ಮಾಡಿರುವ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬಾಕಾಲ್‍ ಗ್ರಾಮದಲ್ಲಿ ನಡೆದಿದೆ. ಇಂದು (ಸೋಮವಾರ) ಮಧ್ಯಾಹ್ನ 2 ಗಂಟೆ ಸುಮಾರಿಗೆ ಭಾರೀ ಸ್ಫೋಟದ ಶಬ್ದ ಕೇಳಿ ಸ್ಥಳೀಯರು ಭಯಭೀತರಾಗಿದ್ದಾರೆ. ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.  ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ನೋಡಿದಾಗ ದುಷ್ಕರ್ಮಿಗಳು ಕಳ್ಳತನ ಮಾಡುವುದಕ್ಕಾಗಿ ಎಟಿಎಂ ಯಂತ್ರ ಸ್ಫೋಟಿಸಿರುವುದು ಗೊತ್ತಾಗಿದೆ. ಎಟಿಎಂನಲ್ಲಿ ಕೇವಲ 10 ಸಾವಿರ ರೂಪಾಯಿ ಇತ್ತು. ಅದನ್ನೇ ಎತ್ತಿಕೊಂಡು ಕಳ್ಳರು […]

ಜೆಡಿಎಸ್‍ ನನ್ನನ್ನು ನಾಯಕನಾಗಿ ನೋಡಲಿಲ್ಲ – ಜಿ.ಟಿ.ದೇವೇಗೌಡ ಬೇಸರ

ಜೆಡಿಎಸ್‍ ನಾಯಕರ ವಿರುದ್ಧ ಮತ್ತೆ ಜಿ.ಟಿ.ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮಲಗಿದ್ದ ಜೆಡಿಎಸ್‍ ಪಕ್ಷವನ್ನು ಬಲಪಡಿಸಲು ಮುಂದಾದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷ ಸಂಘಟನೆ ಶುರು ಮಾಡಿದೆ. ಆದರೆ ನಮ್ಮ ನಾಯಕರು ಎಂದೂ ನನ್ನನ್ನು ನಾಯಕನ್ನಾಗಿ ನೋಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.   ಸಾರ್ವತ್ರಿಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‍—ಜೆಡಿಎಸ್‍ ಕಚ್ಚಾಡಿದ್ದರು. ನಂತರ ಒಟ್ಟಿಗೆ ಸೇರಿ ಸರ್ಕಾರ ಮಾಡಿದರು. ಇತ್ತೀಚೆಗೆ ಕುಮಾರಸ್ವಾಮಿಯವರು ಬಿಜೆಪಿ ಸರ್ಕಾರವನ್ನು ಬೀಳಿಸಲ್ಲ ಎಂದಿದ್ದಾರೆ. ಅದಕ್ಕೆ ಯಡಿಯೂರಪ್ಪ ಧನ್ಯವಾದ ಸಲ್ಲಿಸಿದ್ದಾರೆ. ಇಂತಹ ರಾಜಕೀಯ […]

GTD ಭೇಟಿ ಮಾಡಿದ ಸಚಿವ ಶ್ರೀರಾಮುಲು..

  ಸಚಿವ ಶ್ರೀರಾಮುಲು ಅವರು ಜಿ.ಟಿ.ದೇವೇಗೌಡರನ್ನು ಮೈಸೂರಿನ ವಿಜಯನಗರದಲ್ಲಿರುವ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಇಂದು ಜಿ.ಟಿ.ದೇವೇಗೌಡರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ ಶ್ರೀರಾಮುಲು ಶುಭ ಕೋರಿದರು. ಜೊತೆಗೆ ಅವರೊಂದಿಗೆ ಮಾತುಕತೆಯನ್ನೂ ನಡೆಸಿದರು. ಶ್ರೀರಾಮುಲು ಹುಟ್ಟುಹಬ್ಬಕ್ಕೆ ಶುಭಕೋರಲು ಬಂದಿದ್ದರೂ ಉಪಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.   ಜಿ.ಟಿ.ದೇವೇಗೌಡರು ಜೆಡಿಎಸ್‍ ನಿಂದ ಆಯ್ಕೆಯಾಗಿದ್ದಾರೆ. ಆದರೆ ಉಪಚುನಾವಣೆಯಲ್ಲಿ ಅವರು ಜೆಡಿಎಸ್‍ ಪರವಾಗಿ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಜೊತೆಗೆ ಜೆಡಿಎಸ್‍ ನಾಯಕರ ಜೊತೆಗೂ […]

ಪರಮೇಶ್ವರ್’ಗೆ ಮುತ್ತಿಗೆ: ನೀವು ಸಿಎಂ ಆಗುವುದಾದರೆ ಮತ..!

   ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ ನಾಯಕ ಜಿ.ಪರಮೇಶ್ವರ್‍ ಗೆ ಜನ ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಬನ್ನಿಕುಪ್ಪೆ ಗ್ರಾಮದಲ್ಲಿ ಪರಮೇಶ್ವರ್‍ ಮತಯಾಚನೆ ಮಾಡುತ್ತಿರುವಾಗ ಗ್ರಾಮಸ್ಥರು ಮುತ್ತಿಗೆ ಹಾಕಿದ್ದಾರೆ. ನಾವು ಮಂಜುನಾಥ್‍ ಗೆ ಏಕೆ ಮತ ಹಾಕಬೇಕು. ನೀವು ಸಿಎಂ ಆಗುವುದಾದರೆ ಮಾತ್ರ ಮತ ಹಾಕುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.   ನೀವು ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದಿರಿ. ಆದರೆ ನಿಮಗೆ ಯಾಕೆ ಸಿಎಂ ಸ್ಥಾನ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ಉತ್ತರಿಸಿದ ಪರಮೇಶ್ವರ್‍, ನೀವು […]

ಗಂಡಿಗೆ ಹೆರುವುದೇ ಕೆಲಸ; ಇದು ಪುರುಷ ಕಡಲ್ಗುದುರೆಯ ಪ್ರಸವ ವೇದನೆ ಕತೆ..!

     ಗರ್ಭ ಧರಿಸೋದು, ಹೆರಿಗೆ ನೋವು ಅನುಭವಿಸೋದು, ಮಗುವಿಗೆ ಜನ್ಮ ನೀಡೋದು ಎಲ್ಲಾ ಹೆಣ್ಣಿಗೆ ಸಂಬಂಧಿಸಿದ್ದು.. ಹೀಗಂತ ನಾವು ನೀವೆಲ್ಲರೂ ನಂಬಿದ್ದೇವೆ.. ಆದ್ರೆ, ಮೀನಿನ ಸಂತತಿಯೊಂದರಲ್ಲಿ ಜನ್ಮ ನೀಡುವ ಹೆಣ್ತನವೇನಿದ್ದರೂ ಗಂಡಿನ ಕೆಲಸ.. ಕಡಲ ಕುದುರೆ ಎಂದು ಕರೆಯಲ್ಪಡುವ ಮೀನಿನ ಜಾತಿಯಲ್ಲಿ ಗಂಡು ಕಡಲ ಕುದುರೆಗಳೇ ಗರ್ಭ ಧರಿಸುತ್ತವೆ, ಪ್ರಸವ ವೇದನೆ ಅನುಭವಿಸುತ್ತವೆ..!     ಹೆಣ್ಣು ಹಾಗೂ ಗಂಡು ಕಡಲ ಕುದುರೆಗಳ ದೇಹ ರಚನೆ ವಿಭಿನ್ನವಾಗಿರುತ್ತೆ. ಗಂಡು ಕಡಲ ಕುದುರೆಯ ಹೊಟ್ಟೆಯ ಕೆಳಭಾಗದಲ್ಲಿ ಚೀಲದ ರೀತಿಯ ಜಾಗವಿದ್ದು, […]

ಡೈನೋಸಾರ್’ನಂತೆ ಕಾಣುತ್ತೆ; ಮೊಸಳೆಯನ್ನೇ ತಿನ್ನುತ್ತೆ ಪಕ್ಷಿ..!

   ಉದ್ದನೆಯ ಮೂತಿ.. ಭಯ ಹುಟ್ಟಿಸೋ ಕಣ್ಣುಗಳು.. ಕತ್ತು ತಿರುಗಿಸೋ ಸ್ಟೈಲು.. ಜೊತೆಗೆ ವಿಚಿತ್ರ ಶಬ್ದ.. ಇದನ್ನು ನೋಡಿದರೆ ಡೈನೋಸಾರ್‍ ಮರಿಯಂತೆ ಕಾಣುತ್ತೆ.. ಡೈನೋಸಾರ್ ‍ಗಳು ಮತ್ತೆ ಹುಟ್ಟಿಬಂದವಾ ಅನ್ನೋ ಅನುಮಾನ ಮೂಡುತ್ತೆ.. ಆದರೆ ಇದು ಡೈನೋಸಾರ್‍ ನಂತೆಯೇ ಕಾಣುವ ಹಕ್ಕಿ..! ಇದರ ಹೆಸರು ಶೋಬಿಲ್‍.. ಪ್ಯೂರ್‍ ಮಾಂಸಾಹಾರಿ.. ಅದರಲ್ಲೂ ಮೊಸಳೆ ಮಾಂಸ ಸಿಕ್ಕರೆ ಇದಕ್ಕೆ ಹಬ್ಬದೂಟ..!   ಸೂಡಾನ್‍, ರವಾಂಡಾ, ಉಗಾಂಡಾ, ತಾಂಜೇನಿಯಾ ಮುಂತಾದ ಕಡೆ ಈ ಶೋಬಿಲ್‍ ಹಕ್ಕಿ ಕಾಣಿಸುತ್ತೆ.. ಜಾತಿಯಲ್ಲಿ ಇದು ಪಕ್ಷಿಯೇ […]

ಆನೆಗಳ ಗುಂಡು ಪಾರ್ಟಿ; ಕಾಡು ಪ್ರಾಣಿಗಳೆಲ್ಲಾ ಅತಿಥಿಗಳು..!

  ಗುಂಡು ಪಾರ್ಟಿ ಮಾಡೋದು ಮನುಷ್ಯರು ಮಾತ್ರಾನಾ..? ಇಲ್ಲ, ನಾವೂ ಮಾಡ್ತೀವಿ ಅಂತಿವೆ ಕಾಡು ಪ್ರಾಣಿಗಳು..! ಹೌದು, ಕಾಡಿನಲ್ಲಿ ಆನೆಗಳ ನೇತೃತ್ವದಲ್ಲಿ ಆಗಾಗ ಗುಂಡಿನ ಸಮಾರಾಧನೆ ನಡೆಯುತ್ತೆ. ಎಲ್ಲ ಪ್ರಾಣಿಗಳೂ ನಶೆ ಏರಿಸಿಕೊಂಡು ತೂರಾಡುತ್ತವೆ. ನಡೆಯೋಕೂ ಆಗದೇ ಗುಂಡಿಯಲ್ಲಿ, ಕೊಚ್ಚೆಯಲ್ಲಿ ಬಿದ್ದುಕೊಳ್ಳುತ್ತವೆ. ಆಶ್ಚರ್ಯ ಎನಿಸಿದರೂ ಇದು ನಿಜ.    ಫೆಬ್ರವರಿ ಹಾಗೂ ಮಾರ್ಚ್‍ ತಿಂಗಳಲ್ಲಿ ನೀವು ಆಫ್ರಿಕಾದ ಕಾಡುಗಳಿಗೆ ಭೇಟಿ ಕೊಟ್ಟರೆ ಪ್ರಾಣಿಗಳ ಗುಂಡು ಪಾರ್ಟಿಯನ್ನು ಕಣ್ಣಾರೆ ಕಾಣಬಹುದು. ಬೆಳ್ಳಂಬೆಳಗ್ಗೆಯೇ ಪ್ರಾಣಿಗಳು ಮತ್ತೇರಿಸಿಕೊಂಡಿರುತ್ತವೆ. ಮತ್ತೆ ಗುಂಡಿನ ಸಮಾರಾಧನೆಗೆ […]

ಹಾವನ್ನೇ ತಿಂದು ಮುಗಿಸುತ್ತೆ; ಸ್ಕೂಬಾ ಡೈವ್ ಹೊಡೆಯುತ್ತೆ ಜೇಡ..!

   ಮಹಾ ಅಂದ್ರೆ ಜೇಡ ಎಷ್ಟು ಗಾತ್ರ ಇರಬಹುದು.. ಅಂಗೈಯಷ್ಟು ಗಾತ್ರಕ್ಕಿಂತ ಜಾಸ್ತಿ ಇರೋಕೆ ಸಾಧ್ಯನೇ ಇಲ್ಲ ಬಿಡಿ.. ಅಷ್ಟು ದೊಡ್ಡ ಜೇಡದ ವಿಷಯ ಪಕ್ಕಕ್ಕಿರಲಿ.. ನಾವು ನೀವು ನೋಡಿರುವ ತೀರಾ ಸಣ್ಣ ಗಾತ್ರದ ಜೇಡವೇ ಒಂದು ಹಾವನ್ನು ತಿಂದು ಮುಗಿಸುತ್ತೆ ಅಂದ್ರೆ ನಂಬೋದು ಸ್ವಲ್ಪ ಕಷ್ಟಾನೇ.. ಆದ್ರೆ, ಅದು ಹಾವು, ಪಕ್ಷಿ, ಹಲ್ಲಿ ಹೀಗೆ ದೊಡ್ಡ ದೊಡ್ಡ ಪ್ರಾಣಿಗಳನ್ನೇ ಸ್ವಾಹ ಮಾಡುತ್ತೆ ಅನ್ನೋದಕ್ಕೆ ಎಷ್ಟು ಸಾಕ್ಷಿಗಳು ಬೇಕಾದ್ರೂ ಸಿಕ್ತವೆ..   ರೆಡ್‍ಬ್ಯಾಕ್‍.. ಇದು ಆಸ್ಟ್ರೇಲಿಯಾದಲ್ಲಿ ಕಂಡುಬರೋ […]

ಕಡಲಾಳದಲ್ಲಿ ದಿನವೂ ನಡೆಯುತ್ತೆ ಜಂಬೂಸವಾರಿ..!

    ಮೈಸೂರು ದಸರಾದಲ್ಲಿ ನಡೆಯೋ ಜಂಬೂಸವಾರಿ ಬಗ್ಗೆ ಎಲ್ಲರಿಗೂ ಗೊತ್ತು.. ಆದ್ರೆ, ನಾವಿಲ್ಲಿ ಹೇಳ್ತಾ ಇರೋದು ಸಮುದ್ರದಲ್ಲಿ ನಡೆಯೋ ಜಂಬೂ ಸವಾರಿ ಬಗ್ಗೆ.. ಹೌದು, ಸಮುದ್ರದಾಳದಲ್ಲಿ ಪ್ರತಿನಿತ್ಯ ಜಂಬೂ ಸವಾರಿ ನಡೆಯುತ್ತೆ.. ಇಂಡೋ ಫೆಸಿಪಿಕ್‍ ಸಾಗರದ ತಳದಲ್ಲಿ ಇದು ಸಾಮಾನ್ಯವಾಗಿ ಕಾಣುವ ದೃಶ್ಯ..! ಫ್ಲಂಬೋಯಾಂಟ್‍ ಕಟಲ್‍ ಎಂಬ ಮೀನಿದೆ.. ಅದು ಥೇಟ್‍ ಆನೆಯಂತೆಯೇ ಕಾಣುತ್ತದೆ.. ಅದರ ನಡಿಗೆಯೂ ಗಜರಾಜನನ್ನು ನೆನಪಿಸುತ್ತದೆ.. ಮೀನಿನ ಸಂತತಿಯಾದರೂ ಇದು ಯಾವಾಗಲೂ ಸಾಗರದ ತಳದಲ್ಲಿರುತ್ತದೆ.. ಇದು ಈಜುವುದಿಲ್ಲ.. ಬದಲಾಗಿ ಘನ ಗಾಂಭೀರ್ಯದಿಂದ ನಡೆಯುತ್ತದೆ.. […]