You cannot copy content of this page.
. . .

Day: November 23, 2019

ಮಹಾರಾಷ್ಟ್ರ ರಾಜಕೀಯ: ಯಾರು ಈ ಅಜಿತ್ ಪವಾರ್..?

 ಕ್ಷಿಪ್ರ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಡಿಸಿಎಂ ಆಗಿರುವ ಅಜಿತ್‍ ಪವಾರ್‍, ಎನ್‍ ಸಿ ಪಿ ನಾಯಕ ಶರದ್‍ ಪವಾರ್‍ ಅವರ ಹಿರಿಯ ಸಹೋದರ ಅನಂತ್‍ ರಾವ್‍ ಅವರ ಪುತ್ರ. ಅನಂತ್ ರಾವ್  ಚಿತ್ರಕರ್ಮಿ ವಿ ಶಾಂತಾರಾಮ್ ಅವರ ಜೊತೆ ರಾಜ್ ಕಮಲ್ ಸ್ಟುಡಿಯೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತಂದೆಯ ಅಕಾಲಿಕ ಮರಣದಿಂದ ಅಜಿತ್‍ ವಿದ್ಯಾಭ್ಯಾಸ ತೊರೆಯಬೇಕಾಯಿತು. ಮಾಜಿ ಸಚಿವ ಪದಮ್ ಸಿಂಗ್ ಪಾಟೀಲ್ ತಂಗಿ ಸುನೇತ್ರಾರನ್ನು ಮದುವೆಯಾಗಿರುವ ಅಜಿತ್‍ ಗೆ ಪಾರ್ಥ್ ಪವಾರ್ ಹಾಗೂ ಜಯ್ ಪವಾರ್ ಎಂಬ ಪುತ್ರರಿದ್ದಾರೆ. […]

ಅಜಿತ್ ಪರವಿರುವ ಶಾಸಕರಿಗೆ ಶರದ್ ಪವಾರ್ ವಾರ್ನಿಂಗ್..!

ಅಜಿತ್‍ ಪವಾರ್‍ ನಡೆಯಿಂದ ನಮ್ಮ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ. ಅವರ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದು ಎನ್‍ ಸಿಪಿ ನಾಯಕ ಶರದ್‍ ಪವಾರ್‍ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್‍ ಸಿಪಿ ಮೈತ್ರಿ ಸರ್ಕಾರ ರಚನೆ ಮಾಡಿದ ಹಿನ್ನೆಲೆಯಲ್ಲಿ ಎನ್‍ ಸಿಪಿ ಹಾಗೂ ಶಿವಸೇನೆ ನಾಯಕರ ಜಂಟಿ ಸುದ್ದಿಗೋಷ್ಠಿ ನಡೆಸಿದರು.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರದ್‍ ಪವಾರ್‍, ಅಜಿತ್‍ ಪವಾರ್‍ ಅವರು ನಮ್ಮ ಅನುಮತಿ ಪಡೆಯದೇ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಅವರ ಜೊತೆ 10 ರಿಂದ 12 ಶಾಸಕರಿರಬಹುದು ಅಷ್ಟೇ. […]

ದೇವೇಗೌಡರ ತಂತ್ರ ಬಳಸಿದರಾ ಶರದ್ ಪವಾರ್..?

   ಶುಕ್ರವಾರ ತಡರಾತ್ರಿ ತನಕ ಶಿವಸೇನೆ, ಎನ್‍’ಸಿಪಿ ಹಾಗೂ ಕಾಂಗ್ರೆಸ್‍ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುತ್ತೆ ಅಂತಾನೇ ಎಲ್ಲರೂ ನಂಬಿದ್ದರು. ಅಂದುಕೊಂಡಂತೆ ಆಗಿದ್ದರೆ ಇಂದು ಉದ್ಧವ್‍ ಠಾಕ್ರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಬೇಕಿತ್ತು. ಆದರೆ ರಾತ್ರೋರಾತ್ರಿ ಎಲ್ಲವೂ ಉಲ್ಟಾ ಆಗಿದೆ. ಸಿದ್ಧಾಂತ ಮರೆತು ಎನ್‍ಸಿಪಿ ಪಕ್ಷ ಬಿಜೆಪಿಯೊಂದಿಗೆ ಕೈಜೋಡಿಸಿದೆ. ಈ ಬೆಳವಣಿಗೆ ನನ್ನ ಗಮನಕ್ಕೆ ಬಾರದೆ ನಡೆದಿದೆ ಎಂದು ಎನ್‍ ಸಿಪಿ ಮುಖ್ಯಸ್ಥ ಶರದ್‍ ಪವಾರ್‍ ಹೇಳಿದ್ದಾರೆ. ಈ ಹಿಂದೆ ದೇವೇಗೌಡರು ಮಾಡಿದ ತಂತ್ರವನ್ನೇ ಮಾಡಿ, ಶರದ್‍ […]

ಶಿವಸೇನೆಗೆ ‘ಮಹಾ’ ಹೊಡೆತ; ‘ಕಮಲ’ ಅರಳಿಸಿತು ‘ಗಡಿಯಾರ’..

   ಒಂದು ಕಡೆ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಎನ್‍’ಸಿಪಿ ಪಕ್ಷದ ಸಂಸದರನ್ನು ಹೊಗಳಿ ಅಟ್ಟಕ್ಕೇರಿಸಿದ್ದರು.. ಇನ್ನೊಂದು ಕಡೆ ಎನ್‍’ಸಿಪಿ ನಾಯಕ ಶರದ್‍ ಪವಾರ್‍, ರೈತರ ವಿಚಾರ ನೆಪವಿಟ್ಟುಕೊಂಡು ಪ್ರಧಾನಿಯನ್ನು ಭೇಟಿಯಾಗಿ ಬಂದಿದ್ದರು.. ಇತ್ತ ಅವಕಾಶ ಸಿಕ್ಕಾಗೆಲ್ಲಾ ನಮಗೆ ಮತದಾರರು ವಿರೋಧ ಪಕ್ಷದಲ್ಲಿ ಕೂರಲು ಹೇಳಿದ್ದಾರೆ.. ಬಿಜೆಪಿಯೇ ಸರ್ಕಾರ ಮಾಡಲಿ ಅಂತಾನೂ ಶರದ್‍ ಪವಾರ್‍ ಹೇಳ್ತಾ ಬಂದಿದ್ದರು. ಇದರ ನಡುನಡುವೆಯೇ ಶಿವಸೇನೆ, ಕಾಂಗ್ರೆಸ್‍ ಜೊತೆ ಮಾತುಕತೆಗಳು ನಡೆಸಿದರು. ದಿನಗಟ್ಟಲೇ ಚರ್ಚೆಗಳಾದವು. ಮೂವರೂ ಸೇರಿ ಸರ್ಕಾರ ರಚನೆ ಮಾಡ್ತೀವಿ ಅಂತಾನೂ […]