You cannot copy content of this page.
. . .

Day: November 22, 2019

ಕೆ.ಆರ್.ಪೇಟೆಯಲ್ಲಿ ಅಪ್ಪ.. ಹುಣಸೂರಿನಲ್ಲಿ ಮಗ ಪ್ರಚಾರ

  ಕೆ.ಆರ್‍.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್‍.ಡಿ.ರೇವಣ್ಣ ಕಳೆದ ಮೂರು ದಿನಗಳಲ್ಲಿ ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರತಿ ಹಳ್ಳಿಗೂ ಭೇಟಿ ನೀಡುತ್ತಿರುವ ರೇವಣ್ಣ, ಜೆಡಿಎಸ್‍ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಇನ್ನು ಇಂದು ಅವರ ಪುತ್ರ ಹಾಗೂ ಸಂಸದ ಪ್ರಜ್ವಲ್‍ ರೇವಣ್ಣ ಕೂಡಾ ಪ್ರಚಾರದ ಅಖಾಡಕ್ಕೆ ಧುಮಿಕಿದ್ದಾರೆ.   ಹಾಸನ ಸಂಸದರಾಗಿರುವ ಪ್ರಜ್ವಲ್‍ ರೇವಣ್ಣ, ಈ ಮೊದಲು ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಆಸಕ್ತಿ ಹೊಂದಿದ್ದರು. ಹೀಗಾಗಿ ಹುಣಸೂರಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿದ್ದರು. […]

ಸಿದ್ದರಾಮಯ್ಯ ತವರು ಮೈಸೂರಲ್ಲ, ಬದಾಮಿ; ಸಚಿವ ವಿ.ಸೋಮಣ್ಣ

  ಮಾಜಿ ಸಿಎಂ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆಯಲ್ಲ. ಬದಾಮಿ, ಬಾಗಲಕೋಟೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಹುಣಸೂರು ಕ್ಷೇತ್ರದ ಮುಳ್ಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಸೋಮಣ್ಣ, ಸಿದ್ದರಾಮಯ್ಯ ವಿರುದ‍್ಧ ಆಕ್ರೋಶ ವ್ಯಕ್ತಪಡಿಸಿದರು.   ಸಿದ್ದರಾಮಯ್ಯ ಒಬ್ಬರೇ ಗಡ್ಡ ಕೆರೆದುಕೊಂಡು ಒದ್ದಾಡುತ್ತಿದ್ದಾರೆ. ಅವರು ಹೇಳಿದ್ದೆಲ್ಲಾ ನಿಜವಾಗುವುದಿಲ್ಲ ಎಂದ ವಿ.ಸೋಮಣ್ಣ, ಜನರಿಗೆ ಅನರ್ಹ ಶಾಸಕರ ಬಗ್ಗೆ ಆಕ್ರೋಶವಿಲ್ಲ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮೇಲೆ ಆಕ್ರೋಶ ಇದೆ ಎಂದರು.

ಸದಾನಂದ ಗೌಡ-ಸಿದ್ದರಾಮಯ್ಯ ನಡುವೆ ‘ಗೊಬ್ಬರ’ದ ವಾರ್..!

   ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಸದಾನಂದ ಗೌಡ ನಡುವೆ ಟ್ವೀಟ್‍ ವಾರ್‍ ನಡೆದಿದೆ. ಸದಾನಂದಗೌಡರು ಗೊಬ್ಬರ ಸಚಿವರಾಗಿರುವುದರಿಂದ ಸಿದ್ದರಾಮಯ್ಯ ತಮ್ಮ ಟ್ವೀಟ್‍ ನಲ್ಲಿ ಬಿಜೆಪಿಯಲ್ಲಿ ಗೌಡರು ಗೊಬ್ಬರವಾಗಿ ಹೋಗಿದ್ದಾರೆ ಎಂದು ಮೂದಲಿಸಿದ್ದರು. ಇದಕ್ಕೆ ಸದಾನಂದಗೌಡರು ಟ್ವೀಟ್ ಮೂಲಕವೇ ಟಾಂಗ್‍ ಕೊಟ್ಟಿದ್ದಾರೆ. ಇದಕ್ಕೆ ಕುವೆಂಪು ಅವರ ಪದ್ಯವನ್ನು ಉಲ್ಲೇಖ ಮಾಡಿದ್ದಾರೆ.   ಸದಾನಂದಗೌಡರ ಟಾಂಗ್‍: “ಹಳಿಯದಿರೊ; ಇಂದೊ ನಾಳೆಯೊ ನೀನು ಕೆಳಗುರುಳಿ ಗೊಬ್ಬರದೊಳೊಂದಾಗುವಾ ಮುಂದೆ ಕಾದಿಹುದು –ಕುವೆಂಪು.. ನಾನು ಗೊಬ್ಬರ ಹೌದು, ಸ್ವಪಕ್ಷೀಯರ ರಕ್ತ […]

ಸಿದ್ದರಾಮಯ್ಯ ವಿರುದ್ಧ ಮಾತಾಡಿದ್ರೆ ಮೋದಿ ಬಹುಮಾನ ಕೊಡ್ತಾರಾ..?

   ಮಾಜಿ ಸಿಎಂ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್‍ ಪಕ್ಷದಲ್ಲಿ ಸಿದ್ದರಾಮಯ್ಯಗೆ ಯಾರೂ ಬೆಂಬಲ ನೀಡುತ್ತಿಲ್ಲ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಟಾಂಗ್‍ ಕೊಟ್ಟಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಇತರ ಬಿಜೆಪಿ ನಾಯಕರ ವಿರುದ್ಧ ಟ್ವಿಟರ್‍ ನಲ್ಲಿ ಸಿದ್ದರಾಮಯ್ಯ ಟಾಂಗ್‍ ಕೊಟ್ಟಿದ್ದಾರೆ. ರಾಜ್ಯದ ಬಿಜೆಪಿ ಎಲ್ಲಾ ನಾಯಕರು ನನ್ನ ಮೇಲೆ ಮುಗಿಬೀಳುತ್ತಿದ್ದಾರೆ. ಇದನ್ನು ನೋಡಿದರೆ, ನನ್ನ ಮೇಲೆ ಮುಗಿಬಿದ್ದರೆ ಬಹುಮಾನ ಕೊಡುತ್ತೇವೆಂದು ಮೋದಿ ಹಾಗೂ ಅಮಿತ್‍ ಷಾ ಹೇಳಿರುವಂತೆ ಕಾಣುತ್ತಿದೆ […]

ಮೈಸೂರಿನಿಂದ ಬೆಂಗಳೂರಿಗೆ ಚಿತ್ರನಗರಿ ಶಿಫ್ಟ್; ಹೋಟೆಲ್ ಮಾಲೀಕರ ಸಂಘ ಆಕ್ರೋಶ

  ಚಿತ್ರನಗರಿಯನ್ನು ಮೈಸೂರಿನಿಂದ ಬೆಂಗಳೂರಿಗೆ ಶಿಫ್ಟ್‍ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಮೈಸೂರು ಜಿಲ್ಲಾ ಹೋಟೆಲ್‍ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ.   ಮೈಸೂರು ಪ್ರೆಸ್‍ ಕ್ಲಬ್‍ ನಲ್ಲಿ ಸುದ್ದಿಗೋಷ್ಠಿ ನಡೆಸಿದ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ, ಮೈಸೂರಿನಲ್ಲಿ ಪ್ರವಾಸೋದ್ಯಮವನ್ನೇ ನಂಬಿಕೊಂಡು ಸಾವಿರಾರು ಕುಟುಂಬ ಬದುಕುತ್ತಿದೆ. ಈಗಾಗಲೇ ಮೈಸೂರಿನ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಬೇರೆಡೆಗೆ ಸ್ಥಳಾಂತರವಾಗಿವೆ. ಚಿತ್ರನಗರಿಯನ್ನೂ ಸ್ಥಳಾಂತರ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.   ಎರಡು ವರ್ಷಗಳ ಹಿಂದೆ ರಾಜ್ಯ […]

ಕೆ.ಆರ್.ಪೇಟೆ ಉಪಸಮರ; ಮಾಜಿ ಸ್ಪೀಕರ್ ಕೃಷ್ಣ ಮನೆಗೆ ಡಿಸಿಎಂ

   ಕೆ.ಆರ್‍.ಪೇಟೆ ಉಪಚುನಾವಣೆಯ ಬಿಜೆಪಿ ಉಸ್ತುವಾರಿ ಹೊತ್ತಿರುವ ಡಿಸಿಎಂ ಡಾ.ಅಶ್ವತ್ಥನಾರಾಯಣ, ತಮ್ಮ ತಂತ್ರಗಾರಿಕೆ ಶುರು ಮಾಡಿದ್ದಾರೆ. ಮೈಸೂರಿಗೆ ಆಗಮಿಸಿರುವ ಡಾ.ಅಶ್ವತ್ಥನಾರಾಯಣ, ಕುವೆಂಪುನಗರದಲ್ಲಿರುವ ಮಾಜಿ ಸ್ಪೀಕರ್‍ ಕೆ.ಆರ್‍.ಪೇಟೆ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಕೆ.ಆರ್‍.ಪೇಟೆ ಮಾಜಿ ಶಾಸಕರೂ ಆಗಿರುವ ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದ ಅಶ್ವತ್ಥ ನಾರಾಯಣ, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.   ನಂತರ ಮಾತನಾಡಿದ ಡಿಸಿಎಂ‌ ಅಶ್ವತ್ಥ ನಾರಾಯಣ, ಸಿದ್ದರಾಮಯ್ಯ ಕಾಂಗ್ರೆಸ್‍ ಪಕ್ಷದಲ್ಲಿ ಏಕಾಂಗಿ ನಾಯಕರಾಗಿದ್ದಾರೆ. […]

ಅಂದ್ಲೆ ಜಗದೀಶ್ವರಿಗೆ ಮಾಜಿ ಸಚಿವ ಡಿಕೆಶಿ ಪೂಜೆ

   ಕಾನೂನು ಸಂಕಷ್ಟದಿಂದ ತಾತ್ಕಾಲಿಕವಾಗಿ ಪಾರಾಗಿರುವ ಕಾಂಗ್ರೆಸ್‍ ನಾಯಕ ಡಿ.ಕೆ.ಶಿವಕುಮಾರ್‍ ಗುಡಿ ಗೋಪುರ ಸುತ್ತುವುದನ್ನು ಮುಂದುವರೆಸಿದ್ದಾರೆ. ಇವತ್ತು (ಶುಕ್ರವಾರ) ಉತ್ತರಕ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಂದ್ಲೆ ಗ್ರಾಮದ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಅಂಕೋಲಾಕ್ಕೆ ಬಂದ ಅವರು ನೇರವಾಗಿ ದೇವಸ್ಥಾನಕ್ಕೆ ತೆರಳಿದರು.    ಜಗದೀಶ್ವರಿ ದೇವಸ್ಥಾನ ಅಂಕೋಲಾ ಪಟ್ಟಣದಿಂದ 10 ಕಿಲೋ ಮೀಟರ್‍ ದೂರದಲ್ಲಿದೆ. ತಮ್ಮ ಮನಸ್ಸಿನಲ್ಲಿರುವ ವಿಚಾರಗಳ ಬಗ್ಗೆ ದೇವಿಯಿಂದ ಪ್ರಸಾದ ಕೇಳುವ ಪದ್ಧತಿ ಇಲ್ಲಿ […]