You cannot copy content of this page.
. . .

Day: November 21, 2019

ಮಹಾ ರಾಜಕೀಯ ಬಿಕ್ಕಟ್ಟು; ಸೇನೆ ಬೆಂಬಲಿಸಲು ಕಾಂಗ್ರೆಸ್‍, ಎನ್‍ಸಿಪಿ ಒಪ್ಪಿಗೆ..

  ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ  ಕಾಂಗ್ರೆಸ್-ಎನ್ ಸಿಪಿ ಮಾತುಕತೆ ಅಂತಿಮವಾಗಿದೆ. ಶುಕ್ರವಾರ ಮುಂಬೈನಲ್ಲಿ ಶಿವಾಸೇನೆ ಜೊತೆ ಮಾತುಕತೆ ನಡೆಸಿ ಮೈತ್ರಿ ಅಂತಿಮಗೊಳಿಸಲಾಗುವುದು ಎಂದು ಕಾಂಗ್ರೆಸ್-ಎನ್ ಸಿಪಿ ನಾಯಕರು ತಿಳಿಸಿದ್ದಾರೆ. .   ಕಾಂಗ್ರೆಸ್ ಹಾಗೂ ಎನ್ ಸಿಪಿ ಮುಖಂಡರ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹ್ಹಾಣ್ ಅವರು, ಎಲ್ಲಾ ವಿಷಯಗಳ ಬಗ್ಗೆ ಎರಡೂ ಪಕ್ಷಗಳಿಗೂ “ಸಂಪೂರ್ಣ ಒಮ್ಮತ” ಇದೆ. ನಾಳೆ ಶಿವಸೇನಾ ಜೊತೆ ಮಾತುಕತೆ ನಡೆಸಿದ ಬಳಿಕ ಮೈತ್ರಿ ಪಾಲುದಾರರ […]

ಯಾರು ಈ ಎಡ್ವಿನ್ ವ್ಯಾನ್ ಇಂಗೇನ್..? ಆ 117 ಕೋಟಿ ರೂ. ಆಸ್ತಿಯ ಗುಟ್ಟೇನು..?

 ಮೈಸೂರಿನಲ್ಲಿ ನೆಲೆಸಿದ್ದ ಖ್ಯಾತ ವನ್ಯಜೀವಿ ಚರ್ಮ ಪ್ರಸಾದನ ತಜ್ಞ ಎಡ್ವಿನ್‌ ಜೋಬರ್ಟ್‌ ವ್ಯಾನ್‍ ಇಂಗೇನ್‍ ಅವರಿಗೆ ಸೇರಿದ್ದ 117.87 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮೈಕೆಲ್‍ ಫ್ಲಾಯ್ಡ್‍ ಈಶ್ವರ್‍ ಎಂಬಾತ ಕಬಳಿಸಿದ್ದ. ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಯ ಅಧೀನದಲ್ಲಿದ್ದ ಎಲ್ಲಾ ಆಸ್ತಿಯನ್ನೂ ವಶಪಡಿಸಿಕೊಂಡಿದ್ದಾರೆ. ಕೇರಳದ ವಯನಾಡಿನಲ್ಲಿರುವ 220.19 ಎಕರೆ ಕಾಫಿ ಪ್ಲಾಂಟೇಷನ್‍ ಹಾಗೂ ಮೈಸೂರಿನ ಹೈದರ್‌ ಅಲಿ ರಸ್ತೆಯಲ್ಲಿರುವ ‘ಬಿಸ್ಸಲ್‌ ಮುಂಟಿ‘ ವ್ಯಾನ್‍ ಇಂಗೇನ್‍ ಕಟ್ಟಡ ಮತ್ತು ರೋಸ್‌ವುಡ್‌ನಿಂದ ತಯಾರಿಸಿದ ಪಿಠೋಪಕರಣಗಳು, ಸತ್ತ ವನ್ಯಜೀವಿಗಳ ಚರ್ಮದಿಂದ ತಯಾರಿಸಿದ 70 ವಿವಿಧ […]

ಬಿಜೆಪಿಯಿಂದ ಶರತ್ ಬಚ್ಚೇಗೌಡ ಉಚ್ಚಾಟನೆ

   ಹೊಸಕೋಟೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಂಸದ ಬಿ.ಎನ್‍.ಬಚ್ಚೇಗೌಡರ ಪುತ್ರ ಶರತ್‍ ಬಚ್ಚೇಗೌಡರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ನಾಮಪತ್ರ ಹಿಂತೆಗೆಲು ಇವತ್ತು ಕೊನೆಯ ದಿನವಾಗಿತ್ತು. ಅಂತಿಮ ಕ್ಷಣದವರೆಗೂ ಶರತ್‍ ಬಚ್ಚೇಗೌಡರ ಮನವೊಲಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್‍ ಕಟೀಲ್‍, ಶರತ್‍ ಬಚ್ಚೇಗೌಡರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ.   ಇನ್ನೊಂದೆಡೆ ವಿಜಯನಗರ ಕ್ಷೇತ್ರದಲ್ಲಿ ಕವಿರಾಜ್ ಅರಸ್‍ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇವರೂ ಕೂಡಾ ಬಿಜೆಪಿ ನಾಯಕರ ಮನವೊಲಿಕೆಗೆ ಜಗ್ಗಲಿಲ್ಲ. ಈ […]

ಸಿದ್ದರಾಮಯ್ಯ ಪ್ರಚಾರ ವೇಳೆ ಸರಣಿ ಕಾರು ಅಪಘಾತ

   ಕೆ.ಆರ್‍.ಪೇಟೆ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣಾ ಪ್ರಚಾರದ ವೇಳೆ ಸರಣಿ ಅಪಘಾತ ಸಂಭವಿಸಿದೆ. ಕೃಷ್ಣಾಪುರದಲ್ಲಿ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್‍ ಮುಖಂಡರಿಗೆ ಸೇರಿದ ನಾಲ್ಕು ಕಾರುಗಳು ಸರಣಿ ಅಪಘಾತಕ್ಕೀಡಾಗಿದ್ದು, ಯಾರಿಗೂ ಯಾವುದೇ ತೊಂದರೆಯಾಗಿಲ್ಲ.    ಕೃಷ್ಣಾಪುರಕ್ಕೆ ಬರುತ್ತಿರುವಾಗ ಒಂದರಹಿಂದೊಂದು ಕಾರುಗಳು ಡಿಕ್ಕಿ ಹೊಡೆದಿವೆ. ಇದರಲ್ಲಿ ಮಾಜಿ ಶಾಸಕ ನರೇಂದ್ರ ಸ್ವಾಮಿಗೆ ಸೇರಿದ ಕಾರು ಕೂಡಾ ಇದೆ. ನರೇಂದ್ರಸ್ವಾಮಿಯವರ ಕಾರಿನ ಸ್ವಲ್ಪ ಭಾಗ ನಜ್ಜುಗುಜ್ಜಾಗಿದೆ ಎಂದು ತಿಳಿದುಬಂದಿದೆ.

ತನ್ವೀರ್ ಸೇಠ್ ಆರೋಗ್ಯ ವಿವರ; ಧ್ವನಿ ಪೆಟ್ಟಿಗೆಯಲ್ಲಿ ಸಣ್ಣ ಸಮಸ್ಯೆ..!

  ಮಚ್ಚಿನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಶಾಸಕ ತನ್ವೀರ್‍ ಸೇಠ್‍ ಬಹುತೇಕ ಚೇತರಿಸಿಕೊಂಡಿದ್ದಾರೆ. ಆದರೆ ಅವರ ಧ್ವನಿಪೆಟ್ಟಿಗೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇಂದು ಶಾಸಕ ತನ್ವೀರ್‍ ಸೇಠ್‍ ಆರೋಗ್ಯದ ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ವೈದ್ಯ ದತ್ತಾತ್ರಿ ಈ ವಿಷಯ ತಿಳಿಸಿದರು.  ಆರಂಭದಲ್ಲಿ ಶಾಸಕರ ಕತ್ತಿನ ನರಗಳು ಸರಿಯಾಗಿಯೇ ಇವೆ ಎಂದುಕೊಂಡಿದ್ದೆವು. ಆದರೆ ಬುಧವಾರ ಸಂಜೆಯಿಂದ ಧ್ವನಿ ಸಂಬಂಧಿಸಿದ ನರ ವೀಕ್‍ ಇರುವಂತೆ ಕಾಣಿಸುತ್ತಿದೆ. ಅದು […]

ಜಿಟಿಡಿ ಜೊತೆ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ; ಮೈಸೂರಿನಲ್ಲಿ HDK

    ಜಿ.ಟಿ.ದೇವೇಗೌಡರ ಜೊತೆ ನಾನು ಮಾತನಾಡುವುದಿಲ್ಲ. ಅವರೇ ನಮ್ಮ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿದರೆ ಸ್ವಾಗತಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಚುನಾವಣೆ ಎಂದ ಮೇಲೆ ಎಲ್ಲರೂ ಒಂದೊಂದು ತಂತ್ರ ಮಾಡುತ್ತಾರೆ. ಅದೇ ರೀತಿ ಸಿದ್ದರಾಮಯ್ಯ ಕೂಡಾ ಜಿ.ಟಿ.ದೇವೇಗೌಡರ ಬೆಂಬಲ ಕೋರಿರಬಹುದು. ಆದರೆ ನಾನು ಜಿ.ಟಿ.ದೇವೇಗೌಡರ ಜೊತೆ ಮಾತನಾಡುವುದಿಲ್ಲ. ಅವರೇ ಪಕ್ಷದ ಪರ ಕೆಲಸ ಮಾಡಿದರೆ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ಕೆ.ಆರ್.ಪೇಟೆ ಉಪಚುನಾವಣೆ; ನಾರಾಯಣಗೌಡ ವಿರುದ್ಧ ಸಿದ್ದು ವಾಗ್ಬಾಣ

ವಿಪಕ್ಷ ನಾಯಕ ಸಿದ್ದರಾಮಯ್ಯ ಇವತ್ತು (ಗುರುವಾರ) ಕೆ.ಆರ್‍.ಪೇಟೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿ ಕಾಂಗ್ರೆಸ್‍ ಅಭ್ಯರ್ಥಿ ಚಂದ್ರಶೇಖರ್‍ ಪರ ಮತಯಾಚನೆ ಮಾಡುತ್ತಿರುವ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣ ಗೌಡ, ತನ್ನನ್ನು ಮಾರಿಕೊಂಡು ಬಿಜೆಪಿ ಹೋಗಿದ್ದಾರೆ. ಮಾನ ಮರ್ಯಾದೆ ಇಲ್ಲದೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಅವರು ಬಿಜೆಪಿ ಹೋಗುವಾಗ ನಿಮ್ಮನ್ನು ಕೇಳಿ ಹೋಗಿದ್ದರಾ ಎಂದು ಮತದಾರರನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.  ಹಿರಿಕಳಲೆ […]

ಅಪಘಾತದಲ್ಲಿ ಪತ್ರಕರ್ತ ಸಾವು; ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ

ಪ್ರಜಾವಾಣಿ ಪತ್ರಿಕೆಯ ಹಾವೇರಿ ಜಿಲ್ಲೆಯ ಹಿರಿಯ ವರಿಗಾರರಾಗಿದ್ದ ಎಂ.ಸಿ.ಮಂಜುನಾಥ್‍ ಅಪಘಾತದಲ್ಲಿ ನಿಧನರಾಗಿದ್ದಾರೆ. ಬುಲೆಟ್‍ ನಲ್ಲಿ ಬುಧವಾರ ರಾತ್ರಿ ತನ್ನ ಅಕ್ಕನ ಮನೆಗೆ ತೆರಳುತ್ತಿದ್ದಾಗ, ಟ್ರ್ಯಾಕ್ಟರ್‍ ವೊಂದು ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ. ಪತ್ರಕರ್ತ ಮಂಜುನಾಥ್‍ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ ಸೂಚಿಸಿದ್ದು, ಮೃತ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.   ಬೆಂಗಳೂರಿನಲ್ಲಿ ಕ್ರೈಂ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೃತ ಮಂಜುನಾಥ್ , 5 ತಿಂಗಳ ಹಿಂದಷ್ಟೇ ಹಾವೇರಿಗೆ ವರ್ಗಾವಣೆಯಾಗಿದ್ದರು. ಮೃತದೇಹವನ್ನು ಪೊಲೀಸರು ಪ್ರಾಣಿಗಳ […]

15 ಕ್ಷೇತ್ರಗಳ ಉಪಸಮರ: ಪ್ರಚಾರದಿಂದ ದೂರವುಳಿದ ಹಿರಿಯ ಕಾಂಗ್ರೆಸ್ಸಿಗರು

   15 ಕ್ಷೇತ್ರಗಳ ಉಪಚುನಾವಣಾ ಕಣದಲ್ಲಿ ಪ್ರಚಾರದ ಭರಾಟೆ ಜೋರಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‍ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಬೇಕಿದ್ದ ಕಾಂಗ್ರೆಸ್‍ ಹಿರಿಯ ನಾಯಕರು ಮಾತ್ರ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯ, ದಿನೇಶ್‍ ಗುಂಡೂರಾವ್‍ ಮಾತ್ರ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಉಳಿದಂತೆ ನಾಮಪತ್ರ ಸಲ್ಲಿಕೆ ವೇಳೆ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದ ಡಿ.ಕೆ.ಶಿವಕುಮಾರ್‍ ಕೂಡಾ ನಂತರ ಪ್ರಚಾರದಿಂದ ದೂರವೇ ಉಳಿದಿದ್ದಾರೆ. ಪರಮೇಶ್ವರ್‍, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್‍, ಕೆ.ಎಚ್‍.ಮುನಿಯಪ್ಪ ಮುಂತಾದ ಹಿರಿಯ ನಾಯಕರು ಕೂಡಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಹುಮ್ಮಸ್ಸು ತೋರಿಸುತ್ತಿಲ್ಲ.    ಉಪಚುನಾವಣೆಗೆ ಕಾಂಗ್ರೆಸ್‍ ಅಭ್ಯರ್ಥಿಗಳ […]