You cannot copy content of this page.
. . .

Day: November 20, 2019

ಸುವರ್ಣ ರಥ ರೈಲು ಪುನಾರಂಭ; ಮೈಸೂರಿಗೂ ಬರಲಿದೆ ಐಶಾರಾಮಿ ಟ್ರೇನ್..

    ನಷ್ಟದ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ದಕ್ಷಿಣ ಭಾರತದ ಏಕೈಕ ರೈಲು ಸುವರ್ಣ ರಥ (ಗೋಲ್ಡನ್‍ ಚಾರಿಯೆಟ್‍) ವನ್ನು ಪುನಾರಂಭ ಮಾಡಲು ರೈಲ್ವೆ ಇಲಾಖೆ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ಧಾರ ಮಾಡಿದೆ. ಕರ್ನಾಟಕ, ಕೇರಳ, ಪುದುಚೇರಿ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ 2020ರ ಮಾರ್ಚ್‌ನಿಂದ ಸುವರ್ಣ ರಥ ಓಡಾಟ ನಡೆಸಲಿದೆ. ಸಂತಸದ ಸುದ್ದಿ ಅಂದರೆ ಸುವರ್ಣ ರಥ ಮೈಸೂರಿಗೂ ಆಗಮಿಸಲಿದೆ. ಬಂಡೀಪುರ, ಮೈಸೂರು, ಹಳೇಬಿಡು, ಚಿಕ್ಕಮಗಳೂರು, ಹಂಪಿ, ಬಿಜಾಪುರಗಳಲ್ಲೂ ಸಂಚಾರ ನಡೆಸಲಿದೆ.   ಸುವರ್ಣ ರಥ ರೈಲನ್ನು […]

ಗುಂಡ್ಲುಪೇಟೆ ಬಳಿ ಭೀಕರ ಅಪಘಾತ; ಲಾರಿಗೆ ಮೂವರು ಬಲಿ

ಪ್ಲೈವುಡ್‍ ಶೀಟ್‍ ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಬೈಕ್‍ ಮೇಲೆ ಉರುಳಿಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ  ಬಂಡೀಪುರದ ಮೇಲುಕಾಮನಹಳ್ಳಿ ಚೆಕ್‍ಪೋಸ್ಟ್‍ ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಿಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.    ಲಾರಿ ಬಂಡೀಪುರದ ಕಡೆಯಿಂದ ಗುಂಡ್ಲುಪೇಟೆಯತ್ತ ಬರುತ್ತಿತ್ತು. ಈ ವೇಳೆ ಚೆಕ್‍ಪೋಸ್ಟ್ ನ ಇಳಿಜಾರು ರಸ್ತೆಯಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿದೆ. ದ್ವಿಚಕ್ರ ವಾಹನ ಸವಾರರಾದ ಶಿವಪುರ ಗ್ರಾಮದ ಶಿವಪ್ಪ, ಕಾಳಪ್ಪ ಹಾಗೂ ಲಾರಿ ಚಾಲಕ ಈಶ್ವರಪ್ಪ ಮೃತ ದುರ್ದೈವಿಗಳು. ನಜ್ಜುಗುಜ್ಜಾಗಿದ್ದ […]

ಮಾಧುಸ್ವಾಮಿಗೆ ಚುನಾವಣಾ ಉಸ್ತುವಾರಿಯಿಂದ ಕೊಕ್..

   ಕೆ.ಆರ್‍.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿದ್ದ ಸಚಿವ ಮಾಧುಸ್ವಾಮಿರನ್ನು ಬದಲಾಯಿಸಲಾಗಿದೆ. ಮಾಧುಸ್ವಾಮಿಯವರ ಬದಲಿಗೆ ಡಿಸಿಎಂ ಡಾ.ಅಶ್ವಥನಾರಾಯಣರಿಗೆ ಕೆ.ಆರ್‍.ಪೇಟೆಯ ಬಿಜೆಪಿ ಉಸ್ತುವಾರಿ ನೀಡಲಾಗಿದೆ.   ಇಂದು ಸಂಜೆ (ಬುಧವಾರ) ಬೆಂಗಳೂರಿನಲ್ಲಿ ಉಪಚುನಾವಣೆಯ ಬಿಜೆಪಿ ಉಸ್ತುವಾರಿಗಳ ಸಭೆ ನಡೆಸಲಾಯಿತು. ಇದರಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಡಿಸಿಎ ಡಾ.ಅಶ್ವಥನಾರಾಯಣ ಅವರಿಗೆ ಮೊದಲು ಹೊಸಕೋಟೆ ಕ್ಷೇತ್ರದ ಜವಾಬ್ದಾರಿ ನೀಡಲಾಗಿತ್ತು. ಆದರೆ ಈಗ ಹೊಸಕೋಟೆಗೆ ಸಿಎಂ ಸಂಸದೀಯ ಕಾರ್ಯದರ್ಶಿ ಎಸ್‍.ಆರ್‍.ವಿಶ್ವನಾಥ್‍ ರನ್ನು ನೇಮಿಸಿ ತೀರ್ಮಾನ ಕೈಗೊಳ್ಳಲಾಗಿದೆ.

ಗಾಳಿಯಿಂದ ನೀರು ಉತ್ಪಾದನೆ; ಟೇಸ್ಟ್ ನೋಡಿ ಖುಷಿ ಪಟ್ಟ ಯಧುವೀರ್

    ವಾತಾವರಣದಲ್ಲಿ ತೇವಾಂಶವಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲ ಪ್ರಗತಿ ಪರ ರೈತರು ಗಾಳಿಯಲ್ಲಿನ ತೇವಾಂಶವನ್ನೇ ಬಳಸಿಕೊಂಡು ಬೆಳೆ ಬೆಳೆದು ತೋರಿಸಿದ್ದಾರೆ ಕೂಡಾ. ಆದರೆ ಸಂಶೋಧಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಗಾಳಿಯಲ್ಲಿನ ತೇವಾಂಶವನ್ನು ನೀರಾಗಿ ಪರಿವರ್ತಿಸಿ, ಕುಡಿಯುವುದಕ್ಕೆ ಬಳಸಬಹುದು ಅನ್ನೋದನ್ನು ಸಾಬೀತು ಮಾಡಿದ್ದಾರೆ. ಜರ್ಮನಿಯ ಗ್ರೀನ್‍ಟೆಕ್‍ ಆಕ್ವಾ ಎಂಬ ಕಂಪನಿ ಗಾಳಿಯಿಂದ ನೀರು ಉತ್ಪಾದಿಸುವ ಯಂತ್ರವನ್ನು ತಯಾರಿಸಿದ್ದು, ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಪ್ರದರ್ಶನಕ್ಕಿಟ್ಟಿತ್ತು.    ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್‍ 18 ರಿಂದ […]

ಮಾಧುಸ್ವಾಮಿ ವಿರುದ್ಧ ಸಿಡಿದೆದ್ದ ಕುರುಬ ಸಮಾಜ; ಕ್ಷಮೆ ಕೇಳಿದ ಸಿಎಂ

   ತುಮಕೂರು ಜಿಲ್ಲೆ ಹುಳಿಯಾರು ಪಟ್ಟಣದಲ್ಲಿ ಸರ್ಕಲ್‍ ಒಂದಕ್ಕೆ ಹೆಸರಿಡುವ ಸಂಬಂಧ ನಡೆದ ವಾಗ್ವಾದ ತಾರಕಕ್ಕೇರಿದೆ. ಸಚಿವ ಮಾಧುಸ್ವಾಮಿಯವರು ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ವಿರುದ‍್ಧ ಮಾತನಾಡಿದ್ದಾರೆಂದು ಆರೋಪಿಸಿ ಕುರುಬ ಸಮುದಾಯ ರಾಜ್ಯದ್ಯಂತ ಪ್ರತಿಭಟನೆಗಿಳಿದಿದೆ. ನಾಳೆ ಹುಳಿಯಾರು ಬಂದ್‍ ಗೂ ಕರೆ ನೀಡಲಾಗಿದೆ. ಇದು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸಿಎಂ ಯಡಿಯೂರಪ್ಪ, ಮಾಧುಸ್ವಾಮಿ ಪರವಾಗಿ ಕ್ಷಮೆಯಾಚನೆ ಮಾಡಿದ್ದಾರೆ. ಜತೆಗೆ ಸಚಿವ ಮಾಧುಸ್ವಾಮಿ ಕೂಡಾ ಸಿಎಂ ಕ್ಷಮೆಯಾಚಿಸುವಷ್ಟು ನೋವಾಗಿದ್ದರೆ ನಾನೂ ಕ್ಷಮೆ ಕೋರುತ್ತೇನೆಂದು ಹೇಳಿದ್ದಾರೆ.   ಈ […]

ರಾಮುಲು ಮೋಸ್ಟ್ ಪಾಪ್ಯುಲರ್ ಲೀಡರ್ ; ಟ್ವಟಿರ್ ನಲ್ಲೇ ಕಾಲೆಳೆದ ಸಿದ್ದರಾಮಯ್ಯ

   ಮಂಗಳವಾರ ಸಿದ್ದರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ಟ್ವೀಟ್‍ ವಾರ್‍ ನಡೆಸಿದ್ದರು. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ಬರಲಿ. ನನ್ನ ವಿರುದ್ಧ ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದ್ದರು. ಇದಕ್ಕೆ ಸಿದ್ದರಾಮಯ್ಯ ಟ್ವೀಟ್‍ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಸಚಿವ ಶ್ರೀರಾಮುಲುಗೆ ಕಾಲೆಳೆದಿದ್ದಾರೆ.   “ಶ್ರೀರಾಮುಲು ಕರ್ನಾಟಕದ ಮೋಸ್ಟ್‍ ಪಾಪ್ಯುಲರ್‍ ಲೀಡರ್‍. ಯಾರಿಗೆ ಬೇಕಾದರೂ ಚಾಲೆಂಜ್‍ ಮಾಡಬಲ್ಲರು. ನಾನು ಅವರಿಗೆ ಚಾಲೆಂಜ್‍ ಮಾಡುವಷ್ಟು ಪಾಪ್ಯುಲರ್‍ ನಾಯಕನಲ್ಲ. ಒಂದು ಬಾರಿ ಸೋಲಿಸಿದ್ದೇನೆ ಅಷ್ಟು ಸಾಕು.” ಹೀಗಂತ ಸಿದ್ದರಾಮಯ್ಯ ಟ್ವೀಟ್‍ ಮಾಡಿದ್ದಾರೆ.    […]

ಜನತಾ ಕೋರ್ಟ್ ನಲ್ಲೂ ಅನರ್ಹಗೊಳಿಸಿ- ಸಿದ್ದರಾಮಯ್ಯ

   ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಇವತ್ತು ವಿಪಕ್ಷ ನಾಯಕ ಸಿದ್ದರಾಮಯ್ಯರದ್ದೇ ಅಬ್ಬರ. ಕಾಂಗ್ರೆಸ್‍ ಅಭ್ಯರ್ಥಿ ಎಚ್‍.ಪಿ.ಮಂಜುನಾಥ್‍ ಅವರ ಪರವಾಗಿ ಪ್ರಚಾರ ಕೈಗೊಂಡಿರುವ ಸಿದ್ದರಾಮಯ್ಯ, ಅನರ್ಹ ಶಾಸಕ ವಿಶ್ವನಾಥ್‍ ವಿರುದ್ಧ ವಾಗ್ಬಾಣಗಳನ್ನು ಬಿಡುತ್ತಿದ್ದಾರೆ. ಹನಗೋಡು, ಕಾಮಗೊಂಡನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರೋಡ್‍ ಶೋ ನಡೆಸಿದ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್‍ 17 ಶಾಸಕರನ್ನು ಅನರ್ಹರನ್ನಾಗಿ ಮಾಡಿದೆ. ಈಗ ಅವರು ಜನತಾ ಕೋರ್ಟ್‍ ಮುಂದೆ ಬಂದಿದ್ದಾರೆ. ಮತದಾರರೂ ಕೂಡಾ ಅವರನ್ನು ಅನರ್ಹರನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದಾರೆ.   ಬಿಜೆಪಿ ಅಭ್ಯರ್ಥಿಯಾಗಿರುವ ಎಚ್.ವಿಶ್ವನಾಥ್‍ […]

ಕೆ.ಆರ್.ಪೇಟೆ ಉಪಸಮರ; ಜಾತಿ ಲೆಕ್ಕಾಚಾರದಲ್ಲಿ ಸಿದ್ದು, ಡಿಕೆಶಿ ಪ್ರಚಾರ

    ಕೆ.ಆರ್‍.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಮತದಾರರಿಗೆ ಗಾಳ ಬೀಸುತ್ತಿದೆ. ಕ್ಷೇತ್ರದಲ್ಲಿ ಹೆಚ್ಚಿರುವ ಒಕ್ಕಲಿಗ ಹಾಗೂ ಕುರುಬ ಸಮುದಾಯದ ಮತಗಳ ಮೇಲೆ ಕಾಂಗ್ರೆಸ್‍ ಕಣ್ಣಿಟ್ಟಿದೆ. ಕುರುಬ ಸಮಯದಾಯದ ಮತಗಳನ್ನು ಸೆಳೆಯಲು ಸಿದ್ದರಾಮಯ್ಯ ಹಾಗೂ ಒಕ್ಕಲಿಗ ಮತಗಳನ್ನು ಸೆಳೆಯಲು ಡಿ.ಕೆ.ಶಿವಕುಮಾರ್‍ ಅಖಾಡಕ್ಕಿಳಿಯುತ್ತಿದ್ದಾರೆ.   ಕೆ.ಆರ್‍.ಪೇಟೆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ 90 ಸಾವಿರ ಮತದಾರರಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ 45 ಸಾವಿರ ಮತದಾರರಿದ್ದಾರೆ. ಹೀಗಾಗಿ ಈ ಮತಗಳ ಮೇಲೆ ಕಾಂಗ್ರೆಸ್‍ ಕಣ್ಣಿಟ್ಟಿದೆ. ವಿಪಕ್ಷ ನಾಯಕ […]

ರಮೇಶ್ ಜಾರಕಿಹೊಳಿ ಬೆನ್ನುಬಿಡ್ತಿಲ್ಲ ಕಾಂಗ್ರೆಸ್..!

   ಅನರ್ಹ ಶಾಸಕ ರಮೇಶ್‍ ಜಾರಕಿಹೊಳಿಗೆ ಇನ್ನೂ ಕಾಂಗ್ರೆಸ್‍ ಬೆನ್ನುಬಿಡುತ್ತಿಲ್ಲವಂತೆ. ಕಾಂಗ್ರೆಸ್‍ ಶಾಸಕರಾಗಿದ್ದ ರಮೇಶ್‍ ಜಾರಕಿಹೊಳಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅನರ್ಹಗೊಂಡಿದ್ದಾರೆ. ಈ ಕಾರಣಕ್ಕೆ ಗೋಕಾಕ್‍ ನಲ್ಲಿ ಉಪಚುನಾವಣೆ ನಡೆಯುತ್ತಿದ್ದು, ರಮೇಶ್‍ ಜಾರಕಿಹೊಳಿ, ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಶತಾಯ ಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ರಮೇಶ್‍ ಜಾರಕಿಹೊಳಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಅವರಿಗೆ ತಲೆನೋವಾಗಿ ಪರಿಣಮಿಸಿರೋದು ಕಾಂಗ್ರೆಸ್‍ ಪಕ್ಷ.. ಹೌದು, ಪ್ರಚಾರದ ವೇಳೆ ಎಲ್ಲಿ ಕಾಂಗ್ರೆಸ್‍ ಪಕ್ಷಕ್ಕೆ ಮತ ಹಾಕಿ ಎಂದು […]

ಎಂಟಿಬಿ ಬಳಿ ಸಾಲ ಮಾಡಿದ್ದಾರಾ ಸಿದ್ದರಾಮಯ್ಯ..?

  ಅನರ್ಹ ಶಾಸಕ ಎಂಟಿಬಿ ನಾಗರಾಜ್‍ ಸಾವಿರಾರು ಕೋಟಿ ಒಡೆಯ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಯಾಕೆಂದರೆ ಅವರೇ ಅಧಿಕೃತವಾಗಿ ತಮ್ಮ ಬಳಿ 1300 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಆದರೆ ವಿಷಯ ಅದಲ್ಲ, ಎಂಟಿಬಿ ನಾಗರಾಜ್‍, ದೊಡ್ಡ ದೊಡ್ಡ ನಾಯಕರಿಗೆಲ್ಲಾ ಸಾಲ ಕೊಟ್ಟಿದ್ದಾರಂತೆ. ಚುನಾವಣಾ ಪ್ರಚಾರದ ವೇಳೆ ಎಂಟಿಬಿ ನಾಗರಾಜ್, ತಮಗೆ ಸಾಲ ಕೊಡಬೇಕಾದವರ ಪಟ್ಟಿಯನ್ನು ರಿಲೀಸ್‍ ಮಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ತಮ್ಮ ಬಳಿ ಹಣ ಪಡೆದಿದ್ದು ವಾಪಸ್‍  […]