You cannot copy content of this page.
. . .

Day: November 19, 2019

ಹುಣಸೂರು ಉಪಸಮರ; ಪ್ರಮುಖರ ಮನೆಗಳಿಗೆ ರಾಮುಲು ಭೇಟಿ

   ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಶ್ರೀರಾಮುಲು ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದಾರೆ. ಕ್ಷೇತ್ರದ ಪ್ರಮುಖರ ಮನೆಗಳಿಗೆ ಭೇಟಿ ನೀಡಿದ ಶ್ರೀರಾಮುಲು, ಬಿಜೆಪಿ ಅಭ್ಯರ್ಥಿ ಎಚ್‍.ವಿಶ್ವನಾಥ್‍ರನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ.   ಮೊದಲಿಗೆ ಚಿಕ್ಕಮಾದು ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಶ‍್ರೀರಾಮುಲು ನಮನ ಸಲ್ಲಿಸಿದರು. ಅನಂತರ ಅನಿಲ್‍ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಜೊತೆಗೆ ಮಾಜಿ ಸಚಿವ ವಿಜಯ್‍ ಶಂಕರ್‍ ಮನೆಗೂ ಭೇಟಿ ನೀಡಿದ್ದ ಶ್ರೀರಾಮುಲು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಮನವಿ […]

ಉಪ ಸಮರ ಗೆಲ್ಲಲು ರಣತಂತ್ರ: ಹುಣಸೂರಿಗೆ ಸಿಎಂ ಹೆಚ್ಚು ಸಮಯ..?

     15 ಕ್ಷೇತ್ರಗಳ ಉಪಚುನಾವಣಾ ಕಣ ರಂಗೇರುತ್ತಿದೆ. ಮೂರೂ ಪಕ್ಷಗಳೂ ಗೆಲ್ಲಲು ಭಾರೀ ರಣತಂತ್ರ ರೂಪಿಸುತ್ತಿವೆ. ಅದರಲ್ಲೂ ಸಿಎಂ ಬಿ.ಎಸ್‍.ಯಡಿಯೂರಪ್ಪ, ಅಭ್ಯರ್ಥಿಗಳು ಹಾಗೂ ಉಸ್ತುವಾರಿಗಳನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು, ಬಿರುಸಿನ ಚರ್ಚೆ ನಡೆಸಿದ್ದಾರೆ. ಈ ವೇಳೆ ಹುಣಸೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಎಚ್‍.ವಿಶ್ವನಾಥ್‍, ನಮ್ಮ ಕ್ಷೇತ್ರಕ್ಕೆ ನೀವು ಹೆಚ್ಚು ಸಮಯ ನೀಡಬೇಕೆಂದು ಯಡಿಯೂರಪ್ಪರಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ಹುಣಸೂರಿನಲ್ಲಿ ಗೆಲ್ಲಲು ರಣತಂತ್ರ ರೂಪಿಸುವ ಸಲುವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಜೊತೆಗೂ ವಿಶ್ವನಾಥ್ ‍ಮಾತುಕತೆ ನಡೆಸಿದ್ದಾರೆ. […]

ಸಿದ್ದರಾಮಯ್ಯ ವಿರುದ್ಧ ರಾಮುಲು ಟ್ವೀಟ್‍ ವಾರ್

ಶ್ರೀರಾಮುಲು ಒಬ್ಬ ಸ್ವಾರ್ಥಿ, ಮಾನ, ಮರ್ಯಾದೆ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು ಎಂದು ಗುಡುಗಿದ್ದ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಟ್ವೀಟ್‍ ವಾರ್‍ ನಡೆಸಿದ್ದಾರೆ.   ಇಂದು ಬೆಳಗ್ಗೆ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾತನಾಡುತ್ತಾ ಹುಣಸೂರು ಕ್ಷೇತ್ರದ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿರುವ ಶ್ರೀರಾಮುಲು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸರಣಿ ಟ್ವೀಟ್‍ ಮಾಡಿರುವ ಶ್ರೀರಾಮುಲು, ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ. ಶ್ರೀರಾಮುಲು ಟ್ವೀಟ್‍ ನಲ್ಲಿ ಏನು ಹೇಳಿದ್ದಾರೆ..?   “ ಮಾನ್ಯ ಸಿದ್ದರಾಮಯ್ಯನವರೇ, ನಿಮಗೊಂದು ಸವಾಲು. ಬಾದಾಮಿಯಲ್ಲಿ […]

ಕರ್ತವ್ಯ ಲೋಪ ಹಿನ್ನೆಲೆ; ತನ್ವೀರ್‍ ಸೇಠ್‍ ಗನ್‍ ಮ್ಯಾನ್‍ ಅಮಾನತು

   ಕರ್ತವ್ಯದ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಶಾಸಕ ತನ್ವಿರ್‍ ಸೇಠ್‍ ಗನ್‍ ಮ್ಯಾನ್‍ ಫೈರೋಜ್‍ ಖಾನ್‍ ರನ್ನು ಅಮಾನತುಗೊಳಿಸಿ ಪೊಲೀಸ್‍ ಆಯುಕ್ತ ಬಾಲಕೃಷ್ಣ ಆದೇಶ ಹೊರಡಿಸಿದ್ದಾರೆ.   ಭಾನುವಾರ ರಾತ್ರಿ ಮದುವೆ ಸಮಾರಂಭವೊಂದರಲ್ಲಿ ಶಾಸಕ ತನ್ವಿರ್‍ ಸೇಠ್‍ ಮೇಲೆ ದುಷ್ಕರ್ಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ವೇಳೆ ಭದ್ರತೆಗಿದ್ದ ಫೈರೋಜ್‍ ಖಾನ್‍ , ಈ ಕೃತ್ಯವನ್ನು ತಡೆಯುವಲ್ಲಿ ವಿಫಲನಾಗಿದ್ದ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸ್‍ ಇಲಾಖೆ, ಕರ್ತವ್ಯ ಲೋಪವೆಸಗಿದ್ದಾನೆಂಬ ಕಾರಣಕ್ಕೆ ಫೈರೋಜ್‍ ಖಾನ್‍ ರನ್ನು […]

ಹಕ್ಕಿ ಒಂದೇ ಕಡೆ ಇರುತ್ತಾ..?; ಧ್ರುವನಾರಾಯಣ್‍ ಕಾಲೆಳೆದ ಎಚ್‍.ವಿಶ್ವನಾಥ್

   ಹಕ್ಕಿಯನ್ನು ನೋಡಿದ್ದೀರಿ ತಾನೆ..? ಹಕ್ಕಿ ಗೂಡು ಕಟ್ಟಿಕೊಂಡು ಒಂದೇ ಕಡೆ ಇರುತ್ತಾ..? ಹೊರಗಡೆ ಹಾರಾಡ್ಕೊಂಡು ಬರಲ್ವಾ..? ಹೀಗಂತ ಅನರ್ಹ ಶಾಸಕ ಎಚ್‍.ವಿಶ್ವನಾಥ್‍ ಮಾಜಿ ಸಂಸದ ಧ್ರುವನಾರಾಯಣ್ ಅವರ ಕಾಲೆಳೆದಿದ್ದಾರೆ.    ಎಚ್‍.ವಿಶ್ವನಾಥ್‍ ಜೆಡಿಎಸ್‍ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದ, ಹುಣಸೂರು ಕ್ಷೇತ್ರದಲ್ಲಿ ಅಖಾಡಕ್ಕಿಳಿದಿದ್ದಾರೆ. ಇತ್ತೀಚೆಗೆ ಈ ಬಗ್ಗೆ ಹೇಳಿಕೆ ನೀಡಿದ್ದ ಮಾಜಿ ಸಂಸದ ಧ್ರುವ ನಾರಾಯಣ್, ವಿಶ್ವನಾಥ್‍ ಹಳ್ಳಿ ಹಕ್ಕಿ ಅಲ್ಲ, ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವ ಹಕ್ಕಿ ಎಂದು ಹೇಳಿದ್ದರು.   ಇಂದು ಇಬ್ಬರೂ […]

ಹುಣಸೂರು ಉಪಸಮರ: ನಾಳೆಯಿಂದ ಸಿದ್ದರಾಮಯ್ಯ ಪ್ರಚಾರ

   ಬುಧವಾರದಿಂದ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುತ್ತೇನೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್‍, ಬಿಜೆಪಿ ಬಗ್ಗೆ ಜನರಲ್ಲಿ ಒಲವಿಲ್ಲ ಎಂದು ಹೇಳಿದ್ದಾರೆ.    ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಟೀಕಿಸಿರುವ ಸಚಿವ ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಶ್ರೀರಾಮುಲು ಒಬ್ಬ ಸ್ವಾರ್ಥಿ. ಸ್ವಾರ್ಥಕ್ಕೆ ಮಾತನಾಡುವವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಶ್ರೀರಾಮುಲು ನನ್ನ ವಿರುದ್ಧ ಸೋತಿದ್ದಾರೆ. ಅದಕ್ಕೆ‌ ಈ ರೀತಿ ಹತಾಶರಾಗಿ ಮಾತನಾಡುತ್ತಾರೆ. ಅವರಿಗೆ ಮಾನ […]

ಜನಪ್ರತಿನಿಧಿಗಳ ಮೇಲೆ ದಾಳಿ; ರಾಜ್ಯದಲ್ಲಿ ಎಸಗಿದ ಕೃತ್ಯಗಳೆಷ್ಟು..?

    ನವೆಂಬರ್‍ 17ರ ಭಾನುವಾರ ಶಾಸಕ ತನ್ವಿರ್‍ ಸೇಠ್‍ ಮೇಲೆ ಫರ್ಹಾನ್‍ ಎಂಬಾತ ಮಚ್ಚಿನಿಂದ ಮಾರಣಾಂತಿಕ ದಾಳಿ ನಡೆಸಿದ್ದ. ಸದ್ಯ ಶಾಸಕರು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಹಿಂದೆ ಕೂಡಾ ರಾಜ್ಯದಲ್ಲಿ ಜನಪ್ರತಿನಿಧಿಗಳ ಮೇಲೆ ದಾಳಿಗಳು ನಡೆದಿವೆ. ದುಷ್ಕರ್ಮಿಗಳು ಹಾಡಹಗಲೇ ಕೆಲವರನ್ನು ಕೊಲೆ ಕೂಡಾ ಮಾಡಿದ್ದಾರೆ. ಅಂತಹ ಕೃತ್ಯಗಳ ವಿವರಗಳು ಇಲ್ಲಿವೆ. ಹೆಬ್ಬಾಳ ಶಾಸಕ ಭೈರತಿ ಸುರೇಶ್‍   ಅದು 2019ರ ಅಕ್ಟೋಬರ್‍ 19. ಅಂದು ಹೆಬ್ಬಾಳ ಶಾಸಕ ಭೈರತಿ […]

ತನ್ವೀರ್‍ ಸೇಠ್‍ ಕೊಲೆ ಯತ್ನ ಪ್ರಕರಣ; ರಾತ್ರಿಯಿಡೀ 10 ಮಂದಿಯ ವಿಚಾರಣೆ

   ಶಾಸಕ ತನ್ವೀರ್‍ ಸೇಠ್‍ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಕೆಲಸ ಕೊಡಿಸಲು ಹಿಂದೇಟು ಹಾಕಿದ್ದಕ್ಕೆ ಕೊಲೆಗೆ ಸಂಚು ರೂಪಿಸಿದ್ದಾಗ ಆರೋಪಿ ಪರ್ಹಾನ್ ಹೇಳುತ್ತಿದ್ದಾನೆ. ಆದರೆ ಕೃತ್ಯಕ್ಕೆ ಬೇರೆಯದೇ ಕಾರಣ ಇದೆ ಎಂಬ ಅನುಮಾನ ಪೊಲೀಸರದ್ದು. ಹೀಗಾಗಿ ಸೋಮವಾರ 5 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ನಂತರ ಇನ್ನೂ ಐದು ಮಂದಿಯನ್ನು ವಶಕ್ಕೆ ತೆಗೆದುಕೊಂಡು ರಾತ್ರಿಯಿಡೀ ವಿಚಾರಣೆ ನಡೆಸಿದ್ದಾರೆ.    ಇದುವರೆಗೆ ಒಟ್ಟು 10 ಮಂದಿಯ ವಿಚಾರಣೆ ನಡೆದಿದೆ. ಶಂಕಿತರ ವಿಚಾರಣೆ […]