You cannot copy content of this page.
. . .

Day: November 18, 2019

ತನ್ವೀರ್ ಸೇಠ್ ಚೇತರಿಕೆ; ನರಗಳಿಗೆ ಹಾನಿಯಾಗಿಲ್ಲ..

   ಮಚ್ಚಿನಿಂದ ಮಾರಾಣಾಂತಿಕ ದಾಳಿಗೊಳಗಾಗಿ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್‍ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕುತ್ತಿಗೆಯ ನರ ಹಾಗೂ ಸ್ಪೈನಲ್‍ ಕಾರ್ಡ್‍ ಗೆ ಯಾವುದೇ ಹಾನಿಯಾಗಿಲ್ಲ ಎಂಬುದು ದೃಢಪಟ್ಟಿದೆ. ಸ್ಕ್ಯಾನಿಂಗ್‍ ವರದಿಯ ಪ್ರಕಾರ ತನ್ವೀರ್‍ ಸೇಠ್‍, ಪ್ರಾಣಾಪಾಯದಿಂದ ಪಾರಾಗಿದ್ದಾರೆ.   ಕೆಲ ಸಮಯ ವೆಂಟಿಲೇಟರ್‍ ತೆಗೆದು ಪರೀಕ್ಷೆ ಮಾಡಲಾಗಿದೆ. ಶಾಸಕರು ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ. ಹೀಗೆಯೇ ಚೇತರಿಕೆ ಕಂಡರೆ ಮಂಗಳವಾರ ಅಥವಾ ಬುಧವಾರ ವಾರ್ಡ್‍ಗೆ ಶಿಫ್ಟ್‍ […]

ಕೆ.ಆರ್.ಪೇಟೆ ಉಪಸಮರ; ನಾರಾಯಣ ಗೌಡ ವಿರುದ್ಧ ಘೋಷಣೆ

ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬಂದ ಕೆ.ಆರ್‍.ಪೇಟೆ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ವಿರುದ್ಧ ಜೆಡಿಎಸ್‍ ಕಾರ್ಯಕರ್ತರು ಘೋಷಣೆ ಕೂಗಿ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ. ಜೆಡಿಎಸ್‍ ನಿಂದ ಆಯ್ಕೆಯಾಗಿದ್ದ ನಾರಾಯಣಗೌಡರು, ಬಿಜೆಪಿಗೆ ಹಾರಿದ್ದರಿಂದಾಗಿ ಉಪಚುನಾವಣೆ ಎದುರಾಗಿದೆ. ಇವತ್ತು (ಸೋಮವಾರ) ನಾರಾಯಣಗೌಡ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಲು ಬಂದಿದ್ದರು. ಈ ವೇಳೆ ಜೆಡಿಎಸ್‍ ಕಾರ್ಯಕರ್ತರು ನಾರಾಯಣಗೌಡ ವಿರುದ್ಧ ಘೋಷಣೆ ಕೂಗಿದರು. ಪಕ್ಷಕ್ಕೆ ದ್ರೋಹ ಎಸಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್‍ ಕಾರ್ಯಕರ್ತರ ನಡುವೆ […]

ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣ; FIRನಲ್ಲಿ ಏನಿದೆ..?

   ಭಾನುವಾರ ರಾತ್ರಿ ಶಾಸಕ ತನ್ವೀರ್‍ ಸೇಠ್‍ ಮೇಲೆ ಕೊಲೆ ಯತ್ನ ಪ್ರಕರಣ ಸಂಬಂಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದುವರೆಗೆ ಐವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ದಾಖಲಾಗಿರುವ ಎಫ್‍ ಐ ಆರ್‍ ನಲ್ಲಿ ದಾಖಲಾಗಿರುವ ಮಾಹಿತಿ ಇಲ್ಲಿದೆ:    FIR: ದಿನಾಂಕ;17.11.2019 ರಂದು ರಾತ್ರಿ ಬನ್ನಿ ಮಂಟಪದ ಆವರಣದಲ್ಲಿ ಸೈಯದ್‍ ಯೂನಸ್ ರವರ ಮಗನ ವಲೀಮಾ ಸಮಾರಂಭಕ್ಕೆ ನರಸಿಂಹರಾಜ ಕ್ಷೇತ್ರ ಶಾಸಕರಾದ ತನ್ವೀರ್‍ ಸೇಠ್ ರವರು ಹಾಜರಾಗಿ, ರಾತ್ರಿ […]

ತನ್ವೀರ್ ಸೇಠ್ ಪ್ರಕರಣ: ಹೇಡಿ ಕೃತ್ಯ ಖಂಡಿಸ್ತೀನಿ-ಎಚ್.ಸಿ.ಮಹದೇವಪ್ಪ

   ಶಾಸಕ ತನ್ವೀರ್‍ ಸೇಠ್‍ ಮೇಲೆ ಕೊಲೆ ಯತ್ನ ನಡೆಸಿರುವುದು ಹೇಡಿ ಕೃತ್ಯ ಎಂದು ಮಾಜಿ ಸಚಿವ ಎಚ್‍.ಸಿ.ಮಹದೇವಪ್ಪ ಖಂಡಿಸಿದ್ದಾರೆ. ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ತನ್ವೀರ್‍ ಸೇಠ್‍ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆಂದು ಮಹದೇವಪ್ಪ ಹೇಳಿದರು. https://youtu.be/uSv4OU7Y6iU

ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣ: ಎಸ್ಡಿಪಿಐ ಹೇಳಿಕೆ ಬಿಡುಗಡೆ

   ಶಾಸಕ ತನ್ವೀರ್‍ ಸೇಠ್‍ ಕೊಲೆ ಯತ್ನ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಡೇಮಾಕರ್ಟಿಕ್  ಪಾರ್ಟಿ ಆಫ್ ಇಂಡಿಯಾ(ಎಸ್ ಡಿ ಪಿ ಐ) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ನೂರಾರು ಜನರ ಸಮ್ಮುಖದಲ್ಲೇ ಶಾಸಕರ ಮೇಲೆ ಕೊಲೆ ಯತ್ನ ನಡೆದಿರುವುದು ಆತಂಕಕಾರಿ ಬೆಳವಣಿಗೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಎನ್‍ಆರ್‍ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.   ಈಗಾಗಲೇ […]

ತನ್ವೀರ್ ಸೇಠ್ ಪ್ರಕರಣ; ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ

ಶಾಸಕ ತನ್ವೀರ್‍ ಸೇಠ್‍ ಮೇಲೆ ನಡೆದ ಕೊಲೆ ಯತ್ನ ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು ಈಗಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ನಗರ  ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಹೇಳಿದ್ದಾರೆ. ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಮಾತನಾಡಿದ ಅವರು, ಕೊಲೆ ಯತ್ನಕ್ಕೆ ಯಾವುದಾದರೂ ಸಂಘಟನೆ, ವ್ಯವಸ್ಥಿತ ಪಿತೂರಿ ಅಥವಾ ಸುಪಾರಿ ನೀಡಿರಬಹುದೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಕಾರಣ ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಜೊತೆಗೆ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.   […]

ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ; ಎನ್.ಆರ್.ಕ್ಷೇತ್ರದಲ್ಲಿ ಬಿಗಿ ಭದ್ರತೆ

    ಶಾಸಕ ತನ್ವೀರ್‍ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರಿನ ಎನ್‍.ಆರ್‍.ವಿಧಾನಸಭಾ ಕ್ಷೇತ್ರದಲ್ಲಿ ಬಿಗಿ ಪೊಲೀಸ್‍ ಬಂದೋಬಸ್ತ್‍ ಏರ್ಪಡಿಸಲಾಗಿದೆ. ರಾತ್ರಿಯಿಂದಲೇ ಪೊಲೀಸರು ಕ್ಷೇತ್ರದ ಪ್ರಮುಖ ಪ್ರದೆಶಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಭದ್ರತೆಗಾಗಿ 3ಎಸಿಪಿ, 10 ಪಿಐ, 10 ಪಿಎಸ್ಐ, 16  ಎಎಸ್ಐ, 150 ಹೆಚ್ ಸಿ, ಪಿಸಿ, 4 ಸಿಎಆರ್ ತುಕಡಿ, ಒಂದು ಚಾಮುಂಡಿ ಕಮಾಂಡೋ, ಒಂದು ಪ್ಯಾಂಥರ್ಸ್ ಪಡೆ ನಿಯೋಜನೆ ಮಾಡಲಾಗಿದೆ.     ಇನ್ನೊಂದೆಡೆ ತನ್ವೀರ್‍ ಸೇಠ್‍ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

ಕೆ.ಆರ್.ಪೇಟೆ ಉಪಸಮರ: ಚೆನ್ನಮ್ಮರಿಂದ ಬಿ ಫಾರ್ಮ್ ಪಡೆದ ದೇವರಾಜು

     ಕೆ.ಆರ್‍.ಪೇಟೆಯ ಜೆಡಿಎಸ್‍ ಅಭ್ಯರ್ಥಿ ಬಿ.ಎಲ್‍.ದೇವರಾಜು, ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಂದ ಬಿ-ಫಾರ್ಮ್‍ ಪಡೆದು ಆಶೀರ್ವಾದ ಪಡೆದುಕೊಂಡಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿರುವ ಬಿ.ಎಲ್‍.ದೇವರಾಜುಗೆ ಜೆಡಿಎಸ್‍ ಟಿಕೆಟ್‍ ಘೋಷಿಸಲಾಗಿತ್ತು. ಇಂದು (ಸೋಮವಾರ) ಬೆಂಗಳೂರಿಗೆ ಆಗಮಿಸಿದ್ದ ದೇವರಾಜು, ಜೆಡಿಎಸ್‍ ವರಿಷ್ಠ ದೇವೇಗೌಡರ ನಿವಾಸಕ್ಕೆ ತೆರಳಿ ಅವರ ಪತ್ನಿ ಚೆನ್ನಮ್ಮರ ಕೈಯಿಂದ ಬಿ-ಫಾರ್ಮ್‍ ಪಡೆದುಕೊಂಡರು.    ಕೆ.ಆರ್‍.ಪೇಟೆಯಲ್ಲಿ ಜೆಡಿಎಸ್‍ನಿಂದ ಚುನಾಯಿತರಾಗಿದ್ದ ನಾರಾಯಣಗೌಡ, ಬಿಜೆಪಿಗೆ ಹಾರಿದ್ದರಿಂದಾಗಿ ಇಲ್ಲಿ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ನಾರಾಯಣಗೌಡ ಹಾಗೂ ಕಾಂಗ್ರೆಸ್‍ನಿಂದ ಕೆ.ಬಿ.ಚಂದ್ರಶೇಖರ್‍ ಕಣದಲ್ಲಿದ್ದಾರೆ.

ಕೆಲಸ ಕೊಡಿಸದಿದ್ದಕ್ಕೆ ತನ್ವೀರ್ ಸೇಠ್ ಮೇಲೆ ಮುಚ್ಚು ಬೀಸಿದನೇ..?

ಮೈಸೂರಿನಲ್ಲಿ ಭಾನುವಾರ ರಾತ್ರಿ ಮಚ್ಚಿನಿಂದ ತೀವ್ರ ಹಲ್ಲೆಗೊಳಗಾಗಿರುವ ಶಾಸಕ ತನ್ವೀರ್‍ ಸೇಠ್‍ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೊಲಂಬಿಯಾ ಏಷಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಶಾಸಕ ತನ್ವೀರ್‍ ಸೇಠ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಪ್ರಮುಖ ನರಗಳು ಕಟ್‍ ಆಗಿದ್ದು, ಶಾಸಕರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇನ್ನೊಂದೆಡೆ ಮಚ್ಚು ಬೀಸಿದ ಆರೋಪಿ ಫರಾನ್ ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆದರೆ ಆತ ತನ್ವೀರ್‍ ಕೊಲೆ ಯತ್ನಕ್ಕೆ ಕಾರಣ ಮಾತ್ರ ಬಾಯಿಬಿಟ್ಟಿಲ್ಲ. ಆದರೆ  ಕೆಲಸ ಕೊಡಿಸುವುದಕ್ಕೆ ವಿಳಂಬ ಮಾಡಿದ್ದಕ್ಕೆ ಬೇಸತ್ತು […]