You cannot copy content of this page.
. . .

Day: November 16, 2019

ರಿಲಾಯನ್ಸ್ ಕಮ್ಯುನಿಕೇಷನ್ ದಿವಾಳಿ; ಅನಿಲ್‍ ಅಂಬಾನಿ ರಾಜಿನಾಮೆ

   ರಿಲಾಯನ್ಸ್ ಕಮ್ಯುನಿಕೇಷನ್‍ ನ ನಿರ್ಧೇಸಕ ಹುದ್ದೆಗೆ ಅನಿಲ್ ಅಂಬಾನಿ ರಾಜಿನಾಮೆ ನೀಡಿದ್ದಾರೆ. ಇವರ ಜೊತೆಗೆ ಛಾಯಾ ವಿರಾಣಿ, ರೀನಾ ಕರಾನಿ, ಮಂಜರಿ ಕಕ್ಕರ್ ಹಾಗೂ ಸುರೇಶ್ ರಾಘವಾಚಾರ್‍ ಕೂಡಾ ನಿರ್ದೇಶಕ ಮಂಡಳಿಯಿಂದ ಹೊರಬಂದಿದ್ದಾರೆ ಎಂದು ರಿಲಾಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆ ತಿಳಿಸಿದೆ.   ಅಕ್ಟೋಬರ್ 4 ರಂದು ಮಣಿಕಂಠನ್ . ವಿ ಅವರು ಕಂಪನಿಯ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನವನ್ನು ತ್ಯಜಿಸಿದ್ದರು. ಸುರೇಶ್‍ ರಾಘವಾಚಾರ್ ಅವರು ನವೆಂಬರ್‍ 13, ರೀನಾ ಕರಾನಿ ನವೆಂಬರ್ 14 […]

ಶುರುವಾಗಿದೆ ‘ಆಕ್ಸಿಜನ್‍ ಬಾರ್’.. ; ದೆಹಲಿಯಲ್ಲಿ ಉಸಿರಾಡಲೂ ಹಣ ಕೊಡಬೇಕು..!

   ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜನ ಉಸಿರಾಡುವುದಕ್ಕೂ ಹಣ ಕೊಡುವ ಪರಿಸ್ಥಿತಿ ಬಂದೊದಗಿದೆ. ವಿಪರೀತ ವಾಯುಮಾಲಿನ್ಯದಿಂದಾಗಿ ದೆಹಲಿಯ ಜನ ಗಂಟಲು ಊಟ, ಕಣ್ಣಲ್ಲಿ ಊರಿ, ನಿರಂತರವಾಗಿ ನೀರು ಸುರಿಯವುದು ಮುಂತಾದ ತೊಂದರೆಗಳಿಂದ ಬಳಲುತ್ತಿದ್ದಾರೆ. ಶುದ್ಧ ಗಾಳಿ ಸಿಗದೇ ಇರುವುದೇ ಇದಕ್ಕೆಲ್ಲಾ ಕಾರಣ. ಹೀಗಾಗಿ ಖಾಸಗಿ ಕಂಪನಿಯೊಂದು ದೆಹಲಿಯಲ್ಲಿ ಆಕ್ಸಿಜನ್‍ ಬಾರ್‍ ಒಂದನ್ನು ತೆರೆದಿದೆ. ಏಳು ಬಗೆಯ ಸುವಾಸನೆಯುಕ್ತ ಆಮ್ಲಜನಕ ಸೇವಿಸಲು 15 ನಿಮಿಷಕ್ಕೆ 299 ರೂಪಾಯಿಯಿಂದ 499 ರೂಪಾಯಿ ನಿಗಧಿ ಮಾಡಿದೆ.    ದೆಹಲಿಯ ಸೆಲೆಕ್ಟ್‍’ ಸಿಟಿವಾಕ್ […]

ರೇಣುಕಾಚಾರ್ಯಗೆ ಹೋರಿ ಕಾಟ; ತಿಂಗಳಲ್ಲಿ 2ನೇ ಬಾರಿ ದಾಳಿ

     ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅಂದರೆ ಹೋರಿಗಳಿಗೆ ಅದೇನು ದ್ವೇಷವೋ ಗೊತ್ತಿಲ್ಲ. ಹೋದಲ್ಲೆಲ್ಲಾ ಶಾಸಕರ ಮೇಲೆ ಅಟ್ಯಾಕ್‍ ಮಾಡುತ್ತಿವೆ. ಇವತ್ತು ಹೊನ್ನಾಳಿ ತಾಲ್ಲೂಕಿನ ಕತ್ತಿಗೆ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಶಾಸಕ ರೇಣುಕಾಚಾರ್ಯ ಹಾಜರಿದ್ದರು. ರೇಣುಕಾಚಾರ್ಯ ಅವರು ಹೋರಿಯನ್ನು ಮುಟ್ಟಲು ಹೋದಾಗ ಅದು ಗುಮ್ಮಲು ಬಂದಿದೆ. ಆಗ ಶಾಸಕರು ಹೆದರಿಕೊಂಡು ಓಡಿದ್ದಾರೆ.     ನವೆಂಬರ್‍ 1 ರಂದು ಕೂಡಾ ದಾವಣಗೆರೆ ಜಿಲ್ಲೆ ನ್ಯಾಮತಿ ಬಳಿಯ ದೊಡ್ಡೇರಿ ಗ್ರಾಮದಲ್ಲಿ ಇಂಥಹದ್ದೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ […]

ವಾಯು ಮಾಲಿನ್ಯ ಸಭೆಗೆ ಗೈರು; ಜಿಲೇಬಿ ತಿನ್ನುತ್ತಿದ್ದ ಗಂಭೀರ್‍ ವಿರುದ್ಧ ಆಕ್ರೋಶ

ದೇಶದ ರಾಜಧಾನಿ ನವದೆಹಲಿಯಲ್ಲಿ ವಾಯಮಾಲಿನ್ಯ ಹೆಚ್ಚುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳಲು ಉನ್ನತ ಮಟ್ಟದ ಸಂಸದೀಯ ಸಮಿತಿ ರಚಿಸಿತ್ತು. ಈ ಸಭೆಯಲ್ಲಿ 29 ಸಂಸದರು ಪಾಲ್ಗೊಳ್ಳಬೇಕಿತ್ತು. ಆದರೆ ಹಾಜರಿದ್ದದ್ದು ಕೇವಲ 4 ಮಂದಿ. ಅದರಲ್ಲೂ ದೆಹಲಿ ಸಂಸದ ಗೌತಮ್‍ ಗಂಭೀರ್, ಸಭೆಗೆ ಹಾಜರಾಗದೇ ಜಿಲೇಬಿ ತಿನ್ನುತ್ತಿದ್ದುದನ್ನು ನೋಡಿ ಜನರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.    ವಿಷಕಾರಿ ಗಾಳಿಯಿಂದಾಗಿ ದೆಹಲಿ ಜನ ನಾನಾ ಕಾಯಲೆಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಲಿನ್ಯ ತಡೆಗಟ್ಟಲು ಸರ್ಕಾರ ಹಲವಾರು ಕ್ರಮ […]

ಗೋವಾದಲ್ಲಿ ಧರೆಗುರುಳಿದ ನೌಕಾಪಡೆ ವಿಮಾನ

ತರಬೇತಿಗೆ ಬಳಸುತ್ತಿದ್ದ ಭಾರತೀಯ ನೌಕಾಪಡೆಯ ಮಿಗ್‍-29ಕೆ ವಿಮಾನ ಗೋವಾ ಬಳಿ ಧರೆಗುರುಳಿದೆ. ವಿಮಾನ ಟೇಕಾಫ್‍ ಆಗುತ್ತಿದ್ದಂತೆ ತಾಂತ್ರಿಕದೋಷ ಕಾಣಿಸಿಕೊಂಡಿದೆ. ರಸ್ತೆ ಪಕ್ಕದ ಖಾಲಿ ಜಾಗವೊಂದರಲ್ಲಿ ಉರುಳಿಬಿದ್ದಿದೆ. ಆದರೆ ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್‍ ಗಳೂ ಸುರಕ್ಷಿತವಾಗಿದ್ದಾರೆ.    ತರಬೇತಿ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು, ತಾಂತ್ರಿಕ ದೋಷದ ಕಾರಣದಿಂದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ಪೈಲಟ್‍ ಗಳು ವಿಮಾನವನ್ನು ಕೂಡಲೇ ಲ್ಯಾಂಡ್ ಮಾಡಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ ಎಂದು ನೌಕಾಪಡೆಯ ಅಧಿಕಾರಿಗಳು ಹೇಳಿದ್ದಾರೆ. ಕ್ಯಾಪ್ಟನ್ ಎಂ.ಶಿಯೋಖಂದ್‍ ಹಾಗೂ […]

504 ಕೋಟಿ ನಕಲಿ ಫೇಸ್ ಬುಕ್ ಖಾತೆಗೆ ಕತ್ತರಿ..

   ನಕಲಿ ಫೇಸ್‍ ಬುಕ್‍ ಖಾತೆ ತೆರೆದು ಕಾನೂನು ಬಾಹಿರ ಸಂದೇಶ ಹಾಕುವವರ ವಿರುದ್ಧ ಫೇಸ್‍ಬುಕ್‍ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. 2019ರ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 504 ಕೋಟಿ ನಕಲಿ ಫೇಸ್‍ ಬುಕ್‍ ಖಾತೆಗಳನ್ನು ನಿಷ್ಕ್ರಿಗೊಳಿಸಿರುವುದಾಗಿ ಫೇಸ್‍ ಬುಕ್‍ ಘೋಷಿಸಿಕೊಂಡಿದೆ.   ದ್ವೇಷ ಪೂರಿತ ಹೇಳಿಕೆಗಳು, ಪ್ರಚೋದನಾಕಾರಿ ಸಂದೇಶಗಳನ್ನು ಫೇಸ್‍ ಬುಕ್‍ ಮೂಲಕ ಹರಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಫೇಸ್‍ ಬುಕ್‍, ಆರು ತಿಂಗಳಿಂದೀಚೆಗೆ 1 ಕೋಟಿ 4 ಲಕ್ಷದಷ್ಟು ದ್ವೇಷಪೂರಿತ ಹಾಗೂ […]

ಮುಖ್ಯಮಂತ್ರಿಯಿಂದ ನೀತಿ ಸಂಹಿತೆ ಉಲ್ಲಂಘನೆ; ಸಿದ್ದು ಕಿಡಿ

  ಅನರ್ಹ ಶಾಸಕರಿಗೆ ನೀಡಿದ್ದ ಎಲ್ಲಾ ಭರವಸೆ ಈಡೇರಿಸಿದ್ದೇನೆ. ಶಂಕರ್‍ ಅವರನ್ನು ಪರಿಷತ್‍ಗೆ ಆಯ್ಕೆ ಮಾಡಿ ಸಚಿವರನ್ನಾಗಿ ಮಾಡುತ್ತೇನೆಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.    ಮೈಸೂರಿನ ತಮ್ಮ ನಿವಾದ ಬಳಿ ಮಾತನಾಡಿದ ಸಿದ್ದರಾಮಯ್ಯ, ಉಪಚುನಾವಣೆಯಲ್ಲಿ ಬಿಜೆಪಿ 8 ಸೀಟು ಗೆಲ್ಲುವುದಕ್ಕೆ ಆಗುವುದಿಲ್ಲ. ಹಾಗಾಗಿ ಚುನಾವಣೆ ನಂತರ ಸರ್ಕಾರ ಸಂಕಷ್ಟಕ್ಕೆ ಸಿಲುಕಲಿದೆ ಎಂದರು. ಅನರ್ಹ ಶಾಸಕರು ರಾಜ್ಯದ ಹಿತದೃಷ್ಟಿಯಿಂದ ರಾಜೀನಾಮೆ ಸಲ್ಲಿಸಿಲ್ಲ. ಬದಲಾಗಿ […]

ಎಂಟಿಬಿ ಆಸ್ತಿ 1195 ಕೋಟಿ; ವರ್ಷದಲ್ಲಿ 180 ಕೋ. ಏರಿಕೆ

ಅನರ್ಹ ಶಾಸಕ ಹಾಗೂ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್‍ ಆಸ್ತಿ ಮೌಲ್ಯ ಒಂದೂವರೆ ವರ್ಷದಲ್ಲಿ 180 ಕೋಟಿ ರೂಪಾಯಿ ಜಾಸ್ತಿಯಾಗಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್‍ ತಮ್ಮ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದು, ಅದರ ಪ್ರಕಾರ ಅವರ ಬಳಿ 1195 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ.    ಅಫಿಡವಿಟ್ ಪ್ರಕಾರ ಎಂಟಿಬಿ ನಾಗರಾಜ್, 419 ಕೋಟಿ 28 ಲಕ್ಷದ 63 ಸಾವಿರದ 731 ರೂ. ಮೌಲ್ಯದ ಚರಾಸ್ತಿ, 2.54 ಕೋಟಿ ರೂಪಾಯಿ ಮೌಲ್ಯದ ಕಾರುಗಳು ಸೇರಿದಂತೆ […]

ಅಯ್ಯಪ್ಪ ದರ್ಶನ ಆರಂಭ; ಮಹಿಳಾ ಹೋರಾಟಗಾರರಿಗೆ ಭದ್ರತೆ ಇಲ್ಲ..!

   ಶಬರಿಮಲೆ ದೇಗುಲದ ಬಾಗಿಲನ್ನು ಇಂದಿನಿಂದ (ಶನಿವಾರ) ತೆರೆಯಲಾಗುತ್ತಿದೆ. ಆದರೆ ಮಹಿಳಾ ಭಕ್ತರಿಗೆ ಭದ್ರತೆ ನೀಡುವುದಕ್ಕೆ ಕೇರಳ ಸರ್ಕಾರ ಹಿಂದೇಟು ಹಾಕಿದೆ. ಎಲ್ಲಾ ವಯೋಮಾನದ ಮಹಿಳೆಯರೂ ಅಯ್ಯಪ್ಪ ದೇಗುಲ ಪ್ರವೇಶ ಮಾಡಬಹುದು ಎಂದು ಸುಪ್ರೀಂಕೋರ್ಟ್ 2018ರ ಸೆಪ್ಟಂಬರ್ 28ರಂದು ತೀರ್ಪು ನೀಡಿತ್ತು. ಆದರೆ ಈ ಬಗ್ಗೆ ಸಲ್ಲಿಕೆಯಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ವಿಸ್ತೃತಪೀಠಕ್ಕೆ ವರ್ಗಾಯಿಸಿದೆ. ಈ ಬೆನ್ನನ್ನೇ, ಮಹಿಳೆಯರು ಶಬರಿಮಲೆ ಪ್ರವೇಶಿಸುವ ವಿಚಾರದಲ್ಲಿ ಕೇರಳದ ಎಲ್ ಡಿಎಫ್ ಸರ್ಕಾರ ಹಾಗೂ ಸಿಪಿಎಂ ಯೂ ಟರ್ನ್ ಹೊಡೆದಿದೆ. […]