You cannot copy content of this page.
. . .

Day: November 15, 2019

ರೇಸ್ ರದ್ದು ಮಾಡಿದ್ದಕ್ಕೆ ಆಕ್ರೋಶ; ಕುರ್ಚಿ, ಮೇಜು ಪೀಸ್ ಪೀಸ್

  ಬೆಂಗಳೂರಿನ ರೇಸ್‌ಕೋರ್ಸ್‌ನಲ್ಲಿ ರೇಸ್ ರದ್ದುಗೊಂಡಿದ್ದಕ್ಕೆ ಕುಪಿತಗೊಂಡ ಜೂಜುಕೋರರು, ರೇಸ್ ಕೋರ್ಸ್‍ ಕಚೇರಿಯ ಕೌಂಟರ್, ಕುರ್ಚಿ, ಮೇಜು, ಟಿವಿಗಳನ್ನು ದ್ವಂಸಗೊಳಿಸಿದ್ದಾರೆ. ಶುಕ್ರವಾರ ನಡೆಯುತ್ತಿದ್ದ ಮೊದಲ ರೇಸ್ ವೇಳೆ ಆಕಸ್ಮಿಕವಾಗಿ ಮೂರು ಕುದುರೆಗಳು ಜಾರಿ ಬಿದ್ದಿವೆ. ಈ ವೇಳೆ ಜಾಕಿಗಳು ಕೂಡಾ ಬಿದ್ದು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಂತರ ನಿಗದಿಪಡಿಸಲಾಗಿದ್ದ 6 ರೇಸ್‌ಗಳನ್ನು ಆಡಳಿತ ಮಂಡಳಿ ರದ್ದುಗೊಳಿಸಿತು. ಇದರಿಂದಾಗಿ ಮೊದಲ ರೇಸ್‍ ನಲ್ಲಿ ಹಣ ಕಳೆದುಕೊಂಡವರು ರೊಚ್ಚಿಗೆದ್ದರು. ಕುರ್ಚಿ, ಮೇಜು, ಟಿವಿ, ಹಣ ಸಂಗ್ರಹಿಸುವ ಕೌಂಟರ್‍ ಎಲ್ಲವನ್ನೂ ಧ್ವಂಸಗೊಳಿಸಿದರು.

ಮಾಯಾಂಕ್‍ ದ್ವಿಶತಕ; ಕನ್ನಡಿಗನ ಅಬ್ಬರಕ್ಕೆ ಬೆದರಿದ ಬಾಂಗ್ಲಾ

ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಾಯಾಂಕ್‍ ಅಗರ್‍ ವಾಲ್‍ ದ್ವಿಶತಕ ಸಿಡಿಸಿದ್ದಾರೆ. ಇಂದೋರ್‍ ನಲ್ಲಿ ನಡೆಯುತ್ತಿರುವ ಟೆಸ್ಟ್ ನ ಮೊದಲ ಇನ್ನಿಂಗ್ಸ್‍ ನಲ್ಲಿ ಬಾಂಗ್ಲಾ ಬೌಲರ್ ಗಳನ್ನು ಕಾಡಿದ ಮಾಯಾಂಕ್‍, 330 ಎಸೆತಗಳಲ್ಲಿ 28 ಬೌಂಡರಿ, 4 ಸಿಕ್ಸರ್‍ ಬಾರಿಸಿ ವೈಯಕ್ತಿಕ 243 ರನ್‍ ಬಾರಿಸಿದರು. ಆರಂಭಿಕರಾದ ರೋಹಿತ್ ಶರ್ಮಾ (6) ಹಾಗೂ ವಿರಾಟ್‍ ಕೊಹ್ಲಿ (0) ವೈಫಲ್ಯದಿಂದ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಕ್ಕೆ ಮಯಾಂಕ್‍ ಆಟ ಬಲ ತುಂಬಿತು. ಟಾಸ್‍ ಗೆದ್ದು ಮೊದಲು ಬ್ಯಾಟಿಂಗ್‍ […]

‘ಅಯೋಗ್ಯ’ ಸಹನಟಿಯ ಸುಪಾರಿ; ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ

   ಅಯೋಗ್ಯ ಚಿತ್ರದ ಸಹನಟಿ ದೃಶ್ಯ ವಿರುದ‍್ಧ ರಿಯಲ್‍ ಎಸ್ಟೇಟ್‍ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿದ ಆರೋಪ ಕೇಳಿಬಂದಿದೆ. ಕೊಟ್ಟ ಹಣ ವಾಪಸ್‍ ಕೇಳಿದ್ದಕ್ಕೆ ನಟಿ ದೃಶ್ಯ ಹಾಗೂ ಆಕೆಯ ತಂದೆ ಕುಂದಾಪುರ ಮೂಲದ ರಿಯಲ್‍ ಎಸ್ಟೇಟ್‍ ಉದ್ಯಮಿ ರಾಜೇಶ್ ಮೇಲೆ ಹಲ್ಲೆ ಮಾಡಿಸಿದ್ದಾರೆಂದು ತಿಳಿದುಬಂದಿದೆ. ಶ್ರೀರಂಗಪಟ್ಟಣ ಬಳಿಯ ಬಲಮುರಿಯಲ್ಲಿ ಈ ಕೃತ್ಯ ನಡೆದಿದ್ದು, ಗಾಯಾಳು ರಾಜೇಶ್‍ ಮೈಸೂರಿನ ಕೆ.ಆರ್‍.ಆಸ್ಪತ್ರೆಗೆ ದಾಖಲಾಗಿದ್ದಾರೆ.   ಉದ್ಯಮಿ ರಾಜೇಶ್‍ ನಟಿ ದೃಶ್ಯಗೆ ಸಾಲವಾಗಿ ಹಣ ನೀಡಿದ್ದು, ಅದನ್ನು ವಾಪಸ್‍ […]

ಸೇನೆ-ಕೈ-NCP ಮೈತ್ರಿ ಫಿಕ್ಸ್; ಶನಿವಾರ ರಾಜ್ಯಪಾಲರ ಭೇಟಿ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‍ ಹಾಗೂ ಎನ್‍ಸಿಪಿ ಬೆಂಬಲದೊಂದಿಗೆ ಶಿವಸೇನೆ ಸರ್ಕಾರ ರಚನೆ ಮಾಡೋದು ಪಕ್ಕಾ ಆಗಿದೆ. ಶನಿವಾರ ಮೂರೂ ಪಕ್ಷಗಳ ಮುಖಂಡರು ಬೆಂಬಲ ಪತ್ರಗಳೊಂದಿಗೆ ರಾಜ್ಯಪಾಲ ಭಗತ್‍ ಸಿಂಗ್‍ ಕೋಶ್ಯಾರಿಯವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.   ಶಿವಸೇನೆಗೆ ಸಿಎಂ ಸ್ಥಾನ ಬಿಟ್ಟುಕೊಡುವುದಕ್ಕೆ ಕಾಂಗ್ರೆಸ್‍ ಹಾಗೂ ಎನ್‍ಸಿಪಿ ಎರಡೂ ಪಕ್ಷಗಳೂ ಒಪ್ಪಿವೆ. ಆದರೆ ಪ್ರಮುಖ ಖಾತೆಗಳನ್ನು ಕಾಂಗ್ರೆಸ್‍ ಹಾಗೂ ಎನ್‍ಸಿಪಿಗೆ ನೀಡೋದಕ್ಕೆ ಸೇನೆ ಕೂಡಾ ಅಸ್ತು ಎಂದಿದೆ ಎನ್ನಲಾಗಿದೆ. ಮೂರೂ ಪಕ್ಷಗಳ ನಾಯಕರೂ […]

ಗಾಂಧೀಜಿ ಸಾವು ಆಕಸ್ಮಿಕ: ಒಡಿಶಾ ಸರ್ಕಾರದ ಎಡವಟ್ಟು

  ಒಡಿಶಾ ಸರ್ಕಾರ ಪ್ರಕಟಿಸಿರುವ ಕಿರುಹೊತ್ತಿಗೆಯಲ್ಲಿ ಮಹಾತ್ಮಾಗಾಂಧೀಜಿ ಸಾವು ಒಂದು ಅಪಘಾತ ಎಂಬುವ ರೀತಿಯಲ್ಲಿ ಬಿಂಬಿಸಲಾಗಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಒಡಿಶಾ ಸಿಎಂ ನವೀನ್‍ ಪಟ್ನಾಯಕ್‍ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್‍ ಸೇರಿ ಹಲವು ಪಕ್ಷಗಳು ಆಗ್ರಹಿಸಿವೆ.   ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ, ಆಮಾ ಬಾಪೂಜಿ; ಏಕ ಝಲಕಾ (ನಮ್ಮ ಬಾಪೂಜಿ; ಒಂದು ನೋಟ) ಎಂಬ ಎರಡು ಪುಟಗಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದೆ. ಶಿಕ್ಷಣ ಇಲಾಖೆ ವತಿಯಿಂದ ಪ್ರಕಟಿಸಲಾದ ಈ ಹೊತ್ತಿಗೆಯನ್ನು ಒಡಿಶಾದ […]

ಭೀಕರ ರಸ್ತೆ ಅಪಘಾತ; ಖ್ಯಾತ ಹಿನ್ನೆಲೆ ಗಾಯಕಿ ಸಾವು

  ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರ ಬಳಿ ಶುಕ್ರವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮರಾಠಿಯ ಖ್ಯಾತ ಹಿನ್ನೆಲೆ ಗಾಯಕಿ ಗೀತಾ ಮಲಿ ಮೃತಪಟ್ಟಿದ್ದಾರೆ. ಅಮೆರಿಕದಿಂದ ಆಗಮಿಸಿದ್ದ ಗೀತಾ ಹಾಗೂ ಪತಿ ವಿಜಯ್ ಕಾರಿನಲ್ಲಿ ಆಗ್ರಾ-ಮುಂಬೈ ಹೈವೇ ಮೂಲಕ ತಮ್ಮ ಊರು ನಾಸಿಕ್‍ ಗೆ ತೆರಳುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.   ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗೀತಾ ಪ್ರಯಾಣಿಸುತ್ತಿದ್ದ ಕಾರು ರಸ್ತೆ ಪಕ್ಕ ನಿಲ್ಲಿಸಿದ್ದ ಕಂಟೇನರ್‍ ಗೆ ಡಿಕ್ಕಿ ಹೊಡೆದು […]

ಡಿಕೆಶಿಗೆ ಬಿಗ್ ರಿಲೀಫ್: ED ಮೇಲ್ಮನವಿ ಅರ್ಜಿ ವಜಾ

  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾನೂನು ಸಂಕಷ್ಟ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‍ ಗೆ ಬಿಗ್‍ ರಿಲೀಫ್‍ ಸಿಕ್ಕಿದೆ. ಡಿಕೆಶಿಗೆ ಜಾಮೀನು ನೀಡಿದ್ದ ದೆಹಲಿ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್‌ನಲ್ಲಿ ವಜಾ ಮಾಡಿದೆ.  ED ಅಧಿಕಾರಿಗಳ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ರೋಹಿಂಗ್ಟನ್ ನಾರಿಮನ್ ನೇತೃತ್ವದ ಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿತು. ಸುಪ್ರೀಂ ಕೋರ್ಟ್‍ ಇಡಿ ಅಧಿಕಾರಿಗಳ ಅರ್ಜಿ ಮಾನ್ಯ ಮಾಡಿದ್ದರೆ ಮತ್ತೆ ಡಿಕೆಶಿ ಬಂಧನವಾಗುವ ಸಾಧ್ಯತೆ ಇತ್ತು. ಆದರೆ […]

ಸೋಮವಾರದಿಂದ ಸಂಸತ್ ಚಳಿಗಾಲದ ಅಧಿವೇಶನ: 27 ಮಸೂದೆ ಮಂಡನೆ

   ನವೆಂಬರ್‍ 18 (ಸೋಮವಾರ)ರಿಂದ ಸಂಸತ್‍ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ಸುಮಾರು 27 ಮಸೂದೆಗಳನ್ನು ಮಂಡನೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಪೌರತ್ವ ತಿದ್ದುಪಡಿ ಮಸೂದೆ ಪ್ರಮುಖವಾದುದು. ವಿರೋಧ ಪಕ್ಷಗಳಿಂದ ತೀವ್ರ ವಿರೋಧ ಹೊಂದಿರುವ ಈ ಮಸೂದೆಯ ಅಂಗೀಕಾರದ ಮೇಲೆ ಸರ್ಕಾರ ಹೆಚ್ಚಿನ ಗಮನ ಹರಿಸಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಮುಸ್ಲಿಮೇತರ ನಾಗರಿಕರಿಗೆ ಪೌರತ್ವ ನೀಡುವ ಮಸೂದೆ ಜಾರಿಗೆ ತರಬೇಕೆಂದು ಬಿಜೆಪಿ ನಾಯಕರು ಹೇಳುತ್ತಲೇ ಬಂದಿದ್ದಾರೆ.   ಇನ್ನು ಡಿಜಿಟಲ್‍ ಆರ್ಥಿಕತೆ […]

ಶಂಕರ್ ಗೆ ಸಿಗಲಿಲ್ಲ ಟಿಕೆಟ್; ಅರುಣ್ ಕಮಲ ಕಲಿ..!

  ಸಚಿವ ಸ್ಥಾನ ಸಿಕ್ಕಿದ್ದರೂ ಬಂಡೆದ್ದು ಸರ್ಕಾರ ಬೀಳಿಸಲು ಕಾರಣರಾಗಿದ್ದ ರಾಣೆಬೆನ್ನೂರಿನ ಅನರ್ಹ ಶಾಸಕ ಆರ್‍.ಶಂಕರ್‍ ಗೆ ಟಿಕೆಟ್‍ ನೀಡಲು ಬಿಜೆಪಿ ನಿರಾಕರಿಸಿದೆ. ಪರಿಷತ್‍ ಆಯ್ಕೆ ಮಾಡುತ್ತೇವೆಂದು ಸಮಾಧಾನ ಹೇಳಿರುವ ಬಿಜೆಪಿ ನಾಯಕರು ಅರುಣ್‍ ಕುಮಾರ್‍ ಪೂಜಾರ್‍ ಎಂಬುವವರಿಗೆ ರಾಣೆಬೆನ್ನೂರು ಕ್ಷೇತ್ರದ ಟಿಕೆಟ್‍ ನೀಡಿದ್ದಾರೆ.    ಕ್ಷೇತ್ರದ ಬಹುತೇಕ ಬಿಜೆಪಿ ಮುಖಂಡರು ಆರ್‍.ಶಂಕರ್‍ ಗೆ ಟಿಕೆಟ್‍ ನೀಡಿದರೆ ಗೆಲ್ಲುವುದಿಲ್ಲ ಎಂದು ಹೇಳಿದ್ದರು. ಅವರಿಗೆ ಟಿಕೆಟ್ ನೀಡಬಾರದೆಂದೂ ಆಗ್ರಹಿಸಿದ್ದರು. ಇದನ್ನು ಪರಿಗಣಿಸಿರುವ ಬಿಜೆಪಿ ವರಿಷ್ಠರು, ಅರುಣ್‍ ಕುಮಾರ್‍ ಪೂಜಾರ್‍ […]