You cannot copy content of this page.
. . .

Day: November 14, 2019

ಮಹಾರಾಷ್ಟ್ರ: ಸರ್ಕಾರ ರಚನೆಗೆ ದಾರಿ ಕ್ಲಿಯರ್

  ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಕೊನೆಗೂ ಶಮನಗೊಳ್ಳುವ ಹಂತಕ್ಕೆ ತಲುಪಿದೆ. ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್‍ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಗೆ ಒಮ್ಮತ ಅಜೆಂಡ ಸಿದ್ಧವಾಗಿದೆ. ಮೂರು ಪಕ್ಷಗಳ ಸ್ಥಳೀಯ ನಾಯಕರು ಸೇರಿ ರಚಿಸಿದ ಅಜೆಂಡಾವನ್ನು ಮೂರೂ ಪಕ್ಷಗಳ ಹಿರಿಯ ನಾಯಕರಿಗೆ ಕಳುಹಿಸಲಾಗಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಶಿವಸೇನೆಯ ಸರ್ಕಾರ ರಚನೆ ಕಸರತ್ತು ಸುಗಮವಾಗಿದೆ ಎಂದು ಹೇಳಲಾಗುತ್ತಿದೆ.  ಸದ್ಯ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ಯಾವ ಪಕ್ಷಕ್ಕೂ ಬಹುಮತ ಬಂದಿರದ ಕಾರಣ, ಅತಿದೊಡ್ಡ ಪಕ್ಷ ಬಿಜೆಪಿಗೆ ಸರ್ಕಾರ […]

ಸಿದ್ದು ವಿರುದ್ಧ ಮುನಿಸು: ಚುನಾವಣಾ ಸಭೆಗೆ ಹಿರಿಯರ ಗೈರು

  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹಿರಿಯ ಹಾಗೂ ಮೂಲ ಕಾಂಗ್ರೆಸ್ಸಿಗರ ಮುನಿಸು ಮುಂದುವರೆದಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ (ಬುಧವಾರ) ನಡೆದ ಕಾಂಗ್ರೆಸ್‍ ಚುನಾವಣಾ ಸಭೆಯಿಂದ ಡಿ.ಕೆ.ಶಿವಕುಮಾರ್‍, ಪರಮೇಶ್ವರ್‍ ಸೇರಿ ಹಲವು ನಾಯಕರು ದೂರ ಉಳಿದಿದ್ದು ಇದಕ್ಕೆ ಸಾಕ್ಷಿಯಾಗಿದೆ.   15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ರಂಗೇರುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣಾ ಸಿದ್ಧತೆಗಾಗಿ ಸಭೆ ಆಯೋಜಿಸಲಾಗಿತ್ತು. ಆದರೆ ಈ ಸಭೆಗೆ ಡಿ.ಕೆ.ಶಿವಕುಮಾರ್‍, ಪರಮೇಶ್ವರ್‍, ಬಿ.ಕೆ.ಹರಿಪ್ರಸಾದ್‍, ಕೆ.ಎಚ್‍.ಮುನಿಯಪ್ಪ, ಎಲ್‍.ಹನುಮಂತಯ್ಯ ಸೇರಿ ಹಲವು ಪ್ರಮುಖ ನಾಯಕರು ಗೈರು […]

ದೇಸಿ ಹೈದನ ವಿದೇಶಿ ಕೃಷಿ..

   ಏನು ಮಾಡಿದರೂ ವಿದ್ಯೆ ತಲೆಗೆ ಹತ್ತಲಿಲ್ಲ.. ತಿಪ್ಪರಲಾಗ ಹಾಕಿದ್ರೂ ಎಸ್‍ಎಸ್‍ಎಲ್‍ಸಿ ಪಾಸಾಗ್ಲಿಲ್ಲ.. ಮನೆ ಪರಿಸ್ಥಿತಿಯೂ ಓದು ಮುಂದುವರೆಸೋಕೆ ಅವಕಾಶ ಕೊಡಲಿಲ್ಲ.. ಮತ್ತಿನ್ನೇನು ಮಾಡೋದು.. ಇರೋ ಆಯ್ಕೆ ಕೃಷಿ ಒಂದೇ.. ಮೂರೂವರೆ ಎಕರೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು.. ಸರಿ ಅಂತ ಹೊಲದಲ್ಲಿ ನೇಗಿಲು ಹಿಡಿದು ನಿಂತುಬಿಟ್ಟ.. ಎಸ್‍ಎಸ್‍ಎಲ್‍ಸಿ ಪಾಸ್‍ ಮಾಡೋಕೆ ಆಗದಾತ ಕೃಷಿ ವಿಷಯದಲ್ಲಿ ಮಾತ್ರ ದೊಡ್ಡ ಕನಸೇ ಕಂಡ.. ಈತನ ವಿದೇಶಿ ಕನಸು ಈಗ ತನ್ನ ಬದುಕನ್ನೇ ಹಸನು ಮಾಡಿದೆ.   ಇವರ ಹೆಸರು ಯೋಗೇಶ್‍.. ಚೆನ್ನಾಗಿ […]

ಕೈತಪ್ಪಿದ ಟಿಕೆಟ್‍: ಪಕ್ಷೇತರನಾಗಿ ಬೇಗ್‍ ಕಣಕ್ಕೆ

   ಶಿವಾಜಿನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‍ ಕೈ ತಪ್ಪಿದ್ದರಿಂದ ಅನರ್ಹ ಶಾಸಕ ರೋಷನ್‍ ಬೇಗ್‍ ಭುಗಿಲೆದ್ದಿದ್ದಾರೆ. ಎಂ.ಶರವಣ ಎಂಬುವವರಿಗೆ ಬಿಜೆಪಿ ಟಿಕೆಟ್‍ ಘೋಷಣೆಯಾಗುತ್ತಿದ್ದರೆ, ಬೇಗ್‍ ತಮ್ಮ ಆಪ್ತರ ಸಭೆ ನಡೆಸಿದ್ದಾರೆ. ಜೆಡಿಎಸ್‍ ಬೆಂಬಲ ಪಡೆದು ಪಕ್ಷೇತರನಾಗಿ ಸ್ಪರ್ಧಿಸಲು ಬೇಗ್‍ ನಿರ್ಧರಿಸಿದ್ದಾರೆನ್ನಲಾಗಿದೆ.    ಐಎಂಎ ಹಗರಣದಲ್ಲಿ ರೋಷನ್‍ ಬೇಗ್‍ ಹೆಸರು ತಳಕು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ರೋಷನ್‍ ಬೇಗ್‍ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಜತೆಗೆ ಟಿಕೆಟ್‍ ಕೂಡಾ ನಿರಾಕರಣೆ ಮಾಡಿದ್ದಾರೆ. ಇದರಿಂದಾಗಿ ಬೇಗ್ […]

ಕುಮಟಳ್ಳಿಗೆ ಟಿಕೆಟ್; ಡಿಸಿಎಂ ಸವದಿ ಸ್ಥಿತಿ ಅತಂತ್ರ..

   ಚುನಾವಣೆಯಲ್ಲಿ ಸೋತರೂ ಡಿಸಿಎಂ ಸ್ಥಾನ ಗಿಟ್ಟಿಸಿಕೊಂಡಿರುವ ಲಕ್ಷ್ಮಣ ಸವದಿ ಸ್ಥಿತಿ ಅತಂತ್ರವಾಗಿದೆ. ಉಪಚುನಾವಣೆಯಲ್ಲಿ ಲಕ್ಷ್ಮಣ ಸವದಿಗೆ ಅಥಣಿ ಟಿಕೆಟ್‍ ನೀಡಿ, ಮಹೇಶ್‍ ಕುಮಟಳ್ಳಿಗೆ ಬೇರೆ ವ್ಯವಸ್ಥೆ ಮಾಡಲಾಗುತ್ತದೆಂದು ಹೇಳಲಾಗಿತ್ತು. ಆದರೆ ಬಿಜೆಪಿ ಮಾತು ಕೊಟ್ಟಂತೆ ಅನರ್ಹ ಶಾಸಕ ಮಹೇಶ್‍ ಕುಮಟಳ್ಳಿಗೆ ಟಿಕೆಟ್‍ ಘೋಷಣೆ ಮಾಡಿದೆ. ಹೀಗಾಗಿ ಲಕ್ಷ್ಮಣ ಸವದಿ ಕಂಗಾಲಾಗಿದ್ದಾರೆ. ಕೋರ್ಟ್‍ ತೀರ್ಪಿನ ನಂತರ ಸವದಿ ಮನೆ ಬಿಟ್ಟು ಹೊರಬಂದಿರಲಿಲ್ಲ. ಅನರ್ಹರ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೂ ಅವರು ಗೈರು ಹಾಜರಾಗಿದ್ದರು.   ಹೈಕಮಾಂಡ್‍ ಸೂಚನೆ ಹಿನ್ನೆಲೆಯಲ್ಲಿ […]

ಉಪಸಮರ: 13 ಅನರ್ಹರಿಗೆ ಟಿಕೆಟ್, ಶರವಣಗೆ ಶಿವಾಜಿನಗರ..!

      ಡಿಸೆಂಬರ್‍ 5ರಂದು ನಡೆಯುವ 15 ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.  13 ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್‍ ಖಾತ್ರಿಯಾಗಿದೆ. ಆದರೆ ರಾಣೆಬೆನ್ನೂರಿನ ಅನರ್ಹ ಶಾಸಕ ಶಂಕರ್‍ ಬಿಜೆಪಿ ಸೇರ್ಪಡೆಯಾಗಿದ್ದರೂ ಅವರ ಹೆಸರನ್ನು ಬಿಜೆಪಿ ಪಟ್ಟಿಯಲ್ಲಿ ಘೋಷಣೆ ಮಾಡಿಲ್ಲ. ಇನ್ನು ಶಿವಾಜಿನಗರದ ಅನರ್ಹ ಶಾಸಕ ರೋಷನ್‍ ಬೇಗ್‍ರನ್ನು ಇನ್ನೂ ಪಕ್ಷಕ್ಕೆ ಸೇರಿಸಿಕೊಂಡಿಲ್ಲ. ಈ ನಡುವೆ ಎಂ.ಶರವಣ ಎಂಬುವವರನ್ನು ಶಿವಾಜಿನಗರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. 2ನೇ ಪಟ್ಟಿಯಲ್ಲಿ ಮಾಜಿ ಕಾರ್ಪೊರೇಟರ್‍ ಶರವಣಗೆ ಟಿಕೆಟ್‍ […]

ಜೆಡಿಎಸ್ ಪಟ್ಟಿ ; ಹುಣಸೂರಿಗೆ ಸೋಮಶೇಖರ್, ಕೆಆರ್ ಪೇಟೆಗೆ ದೇವರಾಜ್

    ಡಿಸೆಂಬರ್‍ 5 ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಜೆಡಿಎಸ್‍  10 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದಂತೆ ಹೊಸಕೋಟೆಯಲ್ಲಿ ಶರತ್‍ ಬಚ್ಚೇಗೌಡಗೆ ಈಗಾಗಲೇ ಜೆಡಿಎಸ್‍ ಬೆಂಬಲ ಸೂಚಿಸಿದ್ದು, ಇನ್ನು ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್‍ ಆಗಬೇಕಿದೆ.                ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ..? ಯಶವಂತಪುರ-ಜವರಾಯಿಗೌಡ ಹುಣಸೂರು-ಸೋಮಶೇಖರ್ ಕೆ.ಆರ್‍.ಪೇಟೆ-ಬಿ.ಎಲ್‍.ದೇವರಾಜ್‍ ಚಿಕ್ಕಬಳ್ಳಾಪುರ-ಕೆ.ಪಿ.ಬಚ್ಚೇಗೌಡ ಶಿವಾಜಿನಗರ-ತನ್ವೀರ್‍ ಅಹ್ಮದ್‍ ಯಲ್ಲಾಪುರ-ಚೈತ್ರಾಗೌಡ ಕೆ.ಆರ್‍.ಪುರಂ-ಕೃಷ್ಣಮೂರ್ತಿ ರಾಣೆಬೆನ್ನೂರು-ಮಲ್ಲಿಕಾರ್ಜುನ ಹಲಗೇರಿ ಹಿರೇಕೆರೂರು-ಅಂಜನಪ್ಪ ಜಟ್ಟೆಪ್ಪ […]

ನಡ್ಡಾ ಹೆಸರನ್ನು ಚಡ್ಡಾ ಎಂದ ಅನರ್ಹ ಶಾಸಕ ವಿಶ್ವನಾಥ್

  ನಿನ್ನೆ ತಾನೇ ಕೋರ್ಟ್‍ನಿಂದ ಅನರ್ಹ ಎಂಬ ಮುದ್ರೆ ಒತ್ತಿಸಿಕೊಂಡಿದ್ದ 17 ಅನರ್ಹ ಶಾಸಕರಲ್ಲಿ 16 ಮಂದಿ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್‍ ಕಟೀಲ್‍, ಸಿಎಂ ಯಡಿಯೂರಪ್ಪ ಅನರ್ಹ ಶಾಸಕರಿಗೆ ಬಿಜೆಪಿ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಶಿವಾಜಿನಗರ ಅನರ್ಹ ಶಾಸಕ ರೋಷನ್‍ ಬೇಗ್ ರನ್ನು ‍ಮಾತ್ರ ಕೆಲ ಕಾರಣಗಳಿಂದ ಇಂದು ಬಿಜೆಪಿಗೆ ಸೇರಿಸಿಕೊಳ್ಳಲಿಲ್ಲ.   ಭೈರತಿ ಬಸವರಾಜು, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ, ಮುನಿರತ್ನ, ಆನಂದ್ […]

ರಫೇಲ್ ಖರೀದಿ ಪ್ರಕರಣ : ಮೋದಿ ಸರ್ಕಾರಕ್ಕೆ ಮತ್ತೆ ಕ್ಲೀನ್ ಚಿಟ್..

 ನವದೆಹಲಿ: ರಫೇಲ್‍ ಯುದ್ಧ ವಿಮಾನಗಳ ಖರೀದಿಯಲ್ಲಿ ಬಿಜೆಪಿ ನೇತೃತ್ವದ NDA ಸರ್ಕಾರ ಭಾರೀ ಅವ್ಯವಹಾರ ನಡೆಸಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‍, ಮೋದಿ ಸರ್ಕಾರಕ್ಕೆ ಮತ್ತೆ ಕ್ಲೀನ್‍ ಚಿಟ್‍ ನೀಡಿದೆ.    ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್‍ನ ಡಸಾಲ್ಟ್‍ ಏವಿಯೇಷನ್‍ ಸಂಸ್ಥೆ ಜತೆ ಮೋದಿ ಸರ್ಕಾರ 59 ಸಾವಿರ ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್‍ ಸೇರಿ ಹಲವು ಪಕ್ಷಗಳು […]

ಎಚ್ಚರ.. ಮೈಸೂರಿಗೆ ಬಂದಿದ್ದಾರೆ ಚಾಲಾಕಿ ಕಳ್ಳಿಯರು..!

   ಮಳಿಗೆ ಮಾಲೀಕರ ಗಮನ ಬೇರೆಡೆ ಸೆಳೆದು ಗಲ್ಲಾದಲ್ಲಿದ್ದ ನಗದು ದೋಚುವ ಚಾಲಾಕಿ ಕಳ್ಳಿಯರ ಗುಂಪೊಂದು ಮೈಸೂರು ನಗರಕ್ಕೆ ಆಗಾಗ್ಗೆ ಲಗ್ಗೆ ಇಡುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ಇಂತಹ 2 ಪ್ರಕರಣಗಳು ದಾಖಲಾಗಿವೆ. ಪುಟ್ಟ ಮಕ್ಕಳನ್ನು ಎತ್ತಿಕೊಂಡು ಭಿಕ್ಷೆ ಬೇಡುವುದಕ್ಕೆ ಬರುವ ಮಹಿಳೆಯರ ಗುಂಪು, ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದು ಹಣ ದೋಚಿ ಪರಾರಿಯಾಗುತ್ತಿದೆ. ಹೀಗಾಗಿ ಮಹಿಳೆಯರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಕಳ್ಳತನ ಹೇಗೆ ಮಾಡುತ್ತಾರೆ..?:  ಇಂತಹ ಕೃತ್ಯ ಎಸಗುವವರ ತಂಡದಲ್ಲಿ ಸುಮಾರು 5 […]