You cannot copy content of this page.
. . .

Day: November 13, 2019

ಆಯಾರಾಮ್.. ಗಯಾರಾಮ್..; ಪಕ್ಷಾಂತರ ನಿಷೇಧ ಕಾಯ್ದೆ ಬಂದಿದ್ದು ಹೇಗೆ..?

  ಆಯಾ ರಾಮ್‍.. ಗಯಾ ರಾಮ್‍… ಈ ಮಾತನ್ನು ಆಗಾಗ ನಾವು ಕೇಳುತ್ತಲೇ ಇರುತ್ತೇವೆ. ಅಂದಹಾಗೆ ಈ ಮಾತು ಬಳಕೆಗೆ ಬಂದಿದ್ದು 1967ರಲ್ಲಿ. ಆ ಸಮಯದಲ್ಲಿ ಹರ್ಯಾಣದಲ್ಲಿ ಶಾಸಕರಾಗಿದ್ದ ಗಯಾ ಲಾಲ್‍ ಎಂಬುವವರ ಚಂಚಲ ನಿರ್ಧಾರದಿಂದಾಗಿ ಈ ಮಾತು ಇಂದಿಗೂ ಬಳಕೆಯಾಗುತ್ತಾ ಬಂದಿದೆ. ಜೊತೆಗೆ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬರುವುದಕ್ಕೆ ಬುನಾದಿ ಹಾಕಿದ್ದೂ ಇದೇ ವಿಷಯ. ಶಾಸಕರಾಗಿದ್ದ ಗಯಾ ಲಾಲ್‍, ಒಂದೇ ದಿನದಲ್ಲಿ 3 ಪಕ್ಷಗಳನ್ನು ಬದಲಾಯಿಸಿದ್ದರು. ಇದರಿಂದಾಗಿ ಹರ್ಯಾಣದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಈ […]

ಖ್ಯಾತ ತೆಲುಗು ನಟ ಡಾ.ರಾಜಶೇಖರ್ ಕಾರು ಪಲ್ಟಿ..!

  ಖ್ಯಾತ ತೆಲುಗು ನಟ ಡಾ.ರಾಜಶೇಖರ್‍ ಪ್ರಯಾಣಿಸುತ್ತಿದ್ದ ಬೆಂಜ್‍ ಕಾರು ಪಲ್ಟಿ ಹೊಡೆದಿದೆ. ಹೈದರಾಬಾದ್‍’ನ ಔಟರ್‍ ರಿಂಗ್‍ರೋಡ್‍ ಬಳಿ ಈ ದುರ್ಘಟನೆ ನಡೆದಿದ್ದು, ಕಾರು ನಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್ ನಟ ರಾಜಶೇಖರ್‍ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದಾರೆ.  ಮಂಗಳವಾರ ವಿಜಯವಾಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಡಾ.ರಾಜಶೇಖರ್‍ ಭಾಗವಹಿಸಿದ್ದರು. ನಂತರ ತಡರಾತ್ರಿಯಲ್ಲಿ ಒಬ್ಬರೇ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಮನೆ ತಲುಪಲು ಕೆಲವೇ ಕಿಲೋ ಮೀಟರ್‍ ದೂರವಿತ್ತು. ಈ ವೇಳೆ ಕಾರು ನಿಯಂತ್ರಣ […]

ಉಪಸಮರಕ್ಕೆ ಬಿಜೆಪಿ ಉಸ್ತುವಾರಿ ನೇಮಕ: ಹುಣಸೂರಿಗೆ ವಿಜಯಶಂಕರ್

       ಸುಪ್ರೀಂಕೋರ್ಟ್‍ ತೀರ್ಪಿನ ಬೆನ್ನಲ್ಲೇ ಎಲ್ಲಾ ರಾಜಕೀಯ ಪಕ್ಷಗಳೂ ಅಲರ್ಟ್‍ ಆಗಿವೆ. ರಾಜ್ಯದಲ್ಲಿ ನಡೆಯುವ ಉಪಚುನಾವಣೆಗೆ ತಯಾರಿಗಳು ಭರ್ಜರಿಯಿಂದ ನಡೆಯುತ್ತಿವೆ. ಬಿಜೆಪಿ ಪಕ್ಷ ಒಂದು ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಸರತ್ತು ಮಾಡುತ್ತಿದೆ. ಇನ್ನೊಂದೆಡೆ ಉಪಚುನಾವಣೆ ನಡೆಯುವ ಎಲ್ಲಾ 15 ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳನ್ನು ನೇಮಿಸಿದೆ. ಹುಣಸೂರು ಕ್ಷೇತ್ರಕ್ಕೆ ಇತ್ತೀಚೆಗೆ ಬಿಜೆಪಿ ಸೇರಿದ ಮಾಜಿ ಸಂಸದ ಸಿ.ಎಚ್.ವಿಜಯ ಶಂಕರ್‍ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ಬಿಜೆಪಿ ನೇಮಿಸಿದೆ.    ಇನ್ನು ಅಥಣಿ ಕ್ಷೇತ್ರಕ್ಕೆ ಕೆ.ಎಸ್‍.ಈಶ್ವರಪ್ಪ, ಚಿಕ್ಕಬಳ್ಳಾಪುರಕ್ಕೆ ಸಂಸದ ಬಿ.ಎನ್‍.ಬಚ್ಚೇಗೌಡ, ಹೊಸಕೋಟೆಗೆ ಡಾ.ಅಶ್ವತ್ಥನಾರಾಯಣರನ್ನು […]

ಸಿಜೆಐ ಹುದ್ದೆ ಕೂಡಾ RTI ವ್ಯಾಪ್ತಿಗೆ : ಸುಪ್ರೀಂ ಐತಿಹಾಸಿಕ ತೀರ್ಪು

   ಸುಪ್ರೀಂ ಕೋರ್ಟ್‍ ಮುಖ್ಯ ನ್ಯಾಯಮೂರ್ತಿಗಳೂ ಕೂಡಾ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುತ್ತಾರೆ ಎಂದು ಸುಪ್ರೀಂ ಕೋರ್ಟ್‍ ಐತಿಹಾಸಿಕ ಆದೇಶ ನೀಡಿದೆ. ನ್ಯಾಯಾಂಗದಲ್ಲಿ ಪಾರದರ್ಶಕತೆ ತರಲು ಈ ಆದೇಶ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್‍ ಸಾಂವಿಧಾನಿಕ ಪೀಠ ಹೇಳಿದೆ.   ಈ ಹಿಂದೆ ದೆಹಲಿ ಹೈಕೋರ್ಟ್‍, ಸುಪ್ರೀಂ ಕೋರ್ಟ್‍ ಮುಖ್ಯ ನ್ಯಾಯಮೂರ್ತಿಗಳೂ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುತ್ತಾರೆ ಎಂಬ ತೀರ್ಪು ನೀಡಿತ್ತು. ಆದರೆ ಇದನ್ನು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಸುಪ್ರಿಂ […]

ಮೂರೂವರೆ ವರ್ಷ ಬಿಎಸ್‍ವೈ ಸಿಎಂ; ಗೌಡರ ಅಚ್ಚರಿ ಹೇಳಿಕೆ

   ಯಡಿಯೂರಪ್ಪ ಅವರು ಮೂರೂವರೆ ವರ್ಷ ಸಿಎಂ ಆಗಿ ಮುಂದುವರೆಯಲಿದ್ದು, ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಸ್ಥಾನವೇ ಖಾಯಂ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಅನರ್ಹತೆ ವಿಚಾರ ಸಂಬಂಧ ಸುಪ್ರೀಂ ಕೋರ್ಟ್‍ ತೀರ್ಪು ನೀಡಿದ ನಂತರ ಸುದ್ದಿಗೋಷ್ಠಿ ನಡೆಸಿದ ದೇವೇಗೌಡರು, ಈ ಹೇಳಿಕೆ ನೀಡಿದ್ದಾರೆ.   ಉಪಚುನಾವಣೆಯಲ್ಲಿ ಜೆಡಿಎಸ್‍ ಸ್ವತಂತ್ರವಾಗಿ ಸ್ಪರ್ಧಿಸುತ್ತದೆ. ಕಾಂಗ್ರೆಸ್‍ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಇದೇ ಮಾತನ್ನೇ ಹೇಳಿದ್ದಾರೆ.

ಕಾಂಕ್ರೀಟ್ ಕಾಡಲ್ಲಿ ‘ಬಾಳೆ’ ಹಸಿರಾಯಿತು..

   ಮಳೆನೀರು ಕೊಯ್ಲು ಪದ್ಧತಿಯ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಆದರೆ ಬಿಸಿಲು ಕೊಯ್ಲಿನ ಬಗ್ಗೆ ಕೇಳಿರುವವರ ಸಂಖ್ಯೆ ಕಡಿಮೆ. ಸೂರ್ಯನಿಂದ ನೇರವಾಗಿ ಭೂಮಿಗೆ ಬೀಳುವ ಬಿಸಿಲು ಹಾನಿಕಾರಕ. ಅವುಗಳು ಪ್ರಖರವಾಗಿ ಭೂಮಿ ಮೇಲೆ ಬೀಳದಂತೆ ಎಲ್ಲೆಡೆ ಹಸಿರು ಬೆಳೆಸಿ ಉರಿ ಬಿಸಿಲನ್ನು ಒಳ್ಳೆಯ ಕೆಲಸಕ್ಕೆ ಉಪಯೋಗ ಮಾಡಿಕೊಳ್ಳುವ ಪದ್ಧತಿಯೇ ಬಿಸಿಲು ಕೊಯ್ಲು. ಬೆಳಕಿನ ಬೇಸಾಯ ಅಥವಾ ಬಿಸಿಲು ಕೊಯ್ಲು ಪದ್ಧತಿ ಬಗ್ಗೆ ಇನ್ನೂ ಹೆಚ್ಚು ಜನಕ್ಕೆ ತಿಳಿದಿಲ್ಲ. ಆದರೆ ಮೈಸೂರಿನ ಈ ನಿವೃತ್ತ ಕೃಷಿ ವಿಜ್ಞಾನಿಯೊಬ್ಬರು ನಗರದ […]

ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ : ಎಚ್‍.ವಿಶ್ವನಾಥ್

  ನವದೆಹಲಿ: ಸುಪ್ರೀಂ ಕೋರ್ಟ್‍ ತೀರ್ಪು ಸಮಾಧಾನ ತಂದಿದ್ದು, ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆಂದು ಅನರ್ಹ ಶಾಸಕ ಎಚ್‍.ವಿಶ್ವನಾಥ್‍ ಹೇಳಿದ್ದಾರೆ.    ಜೆಡಿಎಸ್‍ ಪಕ್ಷದ ಅಭ್ಯರ್ಥಿಯಾಗಿ ಹುಣಸೂರಿನಿಂದ ಸ್ಪರ್ಧಿಸಿದ್ದ ಎಚ್‍.ವಿಶ್ವನಾಥ್‍ ನಂತರ ದೋಸ್ತಿ ಸರ್ಕಾರದ ವಿರುದ್ಧ ಬಂಡೆದ್ದು ರಾಜೀನಾಮೆ ನೀಡಿ, ಮುಂಬೈ ಸೇರಿದ್ದರು. ಅನರ್ಹಗೊಂಡಿದ್ದ ಎಚ್‍.ವಿಶ್ವನಾಥ್‍, ಉಪಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಲಾಗುತ್ತಿತ್ತು. ಸಿ.ಪಿ.ಯೋಗೀಶ್ವರ್ ಸೇರಿದಂತೆ ಹಲವರು ಹೆಸರುಗಳು ಚಾಲ್ತಿಯಲ್ಲಿದ್ದರು. ಆದರೆ ಇದೀಗ ವಿಶ್ವನಾಥ್‍ ಅವರೇ ಸ್ಪರ್ಧೆಗೆ ನಾನು ಸಿದ್ಧ ಎಂದು ಹೇಳಿದ್ದಾರೆ.

ಅನರ್ಹತೆ ಎಂಬುದೇ ಕಳಂಕ – ರಮೇಶ್ ಕುಮಾರ್

   ಅನರ್ಹತೆ ಎಂಬುದೇ ಕಳಂಕ. ಅನರ್ಹರನ್ನು ಆಯ್ಕೆ ಮಾಡುವುದು ಬಿಡುವುದು ಮತದಾರರಿಗೆ ಬಿಟ್ಟ ವಿಚಾರ ಎಂದು ಮಾಜಿ ಸ್ಪೀಕರ್‍ ರಮೇಶ್‍ ಕುಮಾರ್‍ ಹೇಳಿದ್ದಾರೆ. ಸುಪ್ರೀಂ ಕೋರ್ಟ್‍ ತೀರ್ಪಿಗೆ ಪ್ರತಿಕ್ರಿಯೆ ನೀಡಿದ ಅವರು, ತೀರ್ಪು ನನಗೆ ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.    ನಾನು ಕಾನೂನಿನ ಅಡಿಯಲ್ಲಿಯೇ ಈ ವಿಧಾನಸಭೆ ಅವಧಿ ಮುಗಿಯುವವರೆಗೆ ಚುನಾವಣೆಗೆ ಸ್ಪರ್ಧಿಸಬಾರದು ಎಂದು ಆದೇಶ ನೀಡಿದ್ದೆ. ಅನರ್ಹರು ಏನೇ ಆರೋಪ ಮಾಡಿದರೂ ಅದಕ್ಕೆ ನಾನು ಮನ್ನಣೆ ಕೊಡುವುದಿಲ್ಲ. ನಾನು ಯಾವುದೇ ಪಕ್ಷದ ಪರವಾಗಿ ಆದೇಶ […]

17 ಶಾಸಕರು ಅನರ್ಹರು, ಆದರೆ ಚುನಾವಣೆಗೆ ನಿಲ್ಲಬಹುದು-ಸುಪ್ರೀಂ

   ರಾಜ್ಯದ 17 ಶಾಸಕರನ್ನು ಅನರ್ಹತೆಗೊಳಿಸಿದ್ದ ಸ್ಪೀಕರ್‍ ರಮೇಶ್‍ ಕುಮಾರ್‍ ಆದೇಶವನ್ನು ಸುಪ್ರೀಂ ಕೋರ್ಟ್‍ ಎತ್ತಿಹಿಡಿದಿದೆ. ಆದರೆ ಉಪಚುನಾವಣೆಗೆ ಸ್ಪರ್ಧಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಸುಪ್ರೀಂ ಕೋರ್ಟ್‍ ಹೇಳಿದೆ. ಈ ಹಿನ್ನೆಲೆಯಲ್ಲಿ 15 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅನರ್ಹರು ಸ್ಪರ್ಧೆ ಮಾಡಲು ಯಾವುದೇ ತೊಂದರೆಯಿಲ್ಲ.    ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಸಂಜೀವ್ ಖನ್ನಾ, ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಸ್ಪೀಕರ್‍ ಅವರು ರಾಜೀನಾಮೆಯನ್ನು ಅಂಗೀರಕರಿಸಬಹುದು ಅಥವಾ ಅನರ್ಹತೆಗೊಳಿಸಬಹುದು. ಆದರೆ ಚುನಾವಣೆಗೆ […]