You cannot copy content of this page.
. . .

Month: March 2017

ಇಲ್ಲಿ ಏನು ಕೊಂಡರೂ ಒಂದೂವರೆ ಆಣೆ..!

  ಈಗ ರೂಪಾಯಿಗೇ ಬೆಲೆ ಇಲ್ಲ. ಆದರೆ ಆ ಕಾಲವೊಂದಿತ್ತು. ಆಗ ಪೈಸೆ, ಆಣೆಗಳ ಲೆಕ್ಕದಲ್ಲಿ ವ್ಯಾಪಾರ ವ್ಯವಹಾರ ನಡೆಯುತ್ತಿತ್ತು. ಪೈಸೆಗಳಲ್ಲಿ ಲೆಕ್ಕ ಹಾಕಿದರೆ ಒಂದು ರೂಪಾಯಿಗೆ ನೂರು ಪೈಸೆಯಾಗುತ್ತದೆ. ಅದೇ ಆಣೆ ಲೆಕ್ಕ ಆದರೆ ರೂಪಾಯಿಗೆ ಎಂಟು ಆಣೆ. ಮೈಸೂರಿನಲ್ಲಿ ಒಂದು ಗಲ್ಲಿ ಇತ್ತು. ಆ ಗಲ್ಲಿಯಲ್ಲಿ ಏನು ಕೊಂಡರೂ ಬರೀ ಒಂದೂವರೆ ಆಣೆ. ಅಂದರೆ ಸುಮಾರು 8 ಪೈಸೆ. ಒಂದೂವರೆ ಆಣೆಗೆ ಒಂದು ವಸ್ತು ಸಿಗುತ್ತಿದ್ದರಿಂದ ಈ ಗಲ್ಲಿ ಒಂದೂವರೆ ಆಣೆ ಗಲ್ಲಿ ಎಂದೇ ಫೇಮಸ್ […]

ರಾಮಸ್ವಾಮಿ ಸರ್ಕಲ್ ಗೊತ್ತು.. ರಾಮಸ್ವಾಮಿ ಗೊತ್ತಾ..?

   ರಾಮಸ್ವಾಮಿ ಸರ್ಕಲ್. ಮೈಸೂರಿನ ಪ್ರಮುಖ ವೃತ್ತಗಳಲ್ಲೊಂದು. ನಗರದ ಬಹುತೇಕ ಭಾಗಗಳಿಗೆ ಹೋಗಬೇಕೆಂದರೆ ಈ ಸರ್ಕಲ್ ಮೂಲಕವೇ ಹಾದುಹೋಗಬೇಕು. ಹೀಗಾಗಿ ರಾಮಸ್ವಾಮಿ ಸರ್ಕಲ್ ಎಲ್ಲರಿಗೂ ಚಿರಪರಿಚಿತ. ಆದ್ರೆ ರಾಮಸ್ವಾಮಿ ಬಗ್ಗೆಯೇ ಹೆಚ್ಚು ಜನಕ್ಕೆ ಗೊತ್ತಿಲ್ಲ. ದಶಕಗಳಿಂದ ಈ ಸರ್ಕಲ್‍ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರಿಗೂ ರಾಮಸ್ವಾಮಿ ಬಗ್ಗೆ ಅರಿವಿಲ್ಲ. ಹಾಗಾದರೆ ಈ ರಾಮಸ್ವಾಮಿ ಯಾರು..? ಈ ಸರ್ಕಲ್‍ಗೆ ಯಾಕೆ ಆ ಹೆಸರಿಟ್ಟರು..? ಅನ್ನೋದೇ ಕುತೂಹಲದ ಸಂಗತಿ.    ನಾಲ್ಕು ದಶಕಗಳ ಹಿಂದಿನ ತನಕ ಈ ಸರ್ಕಲ್‍ನ್ನು ಫೈವ್‍ ಲೈಟ್‍ […]

ಗಂಡಾಗಿ ಹುಟ್ಟುತ್ತೆ.. ಹೆಣ್ಣಾಗಿ ಬದಲಾಗುತ್ತೆ..!

ಇತ್ತೀಚೆಗೆ ಮನುಷ್ಯರಲ್ಲಿ ಲಿಂಗ ಬದಲಾವಣೆ ಸಾಮಾನ್ಯವಾಗುತ್ತಿದೆ. ಶಸ್ತ್ರ ಚಿಕಿತ್ಸೆ ಮೂಲಕ ಗಂಡು ಹೆಣ್ಣಾಗಿ, ಹೆಣ್ಣು ಗಂಡಾಗಿ ಬದಲಾಗುವ ತಂತ್ರಜ್ಞಾನ ನಮ್ಮಲ್ಲಿದೆ. ಆದರೆ, ಕ್ಲೌನ್‍ ಎಂಬ ಮೀನಿನ ಸಂತತಿಯಲ್ಲಿ ನೈಸರ್ಗಿಕವಾಗಿಯೇ ಲಿಂಗ ಬದಲಾವಣೆಯಾಗುತ್ತದೆ. ಎಲ್ಲಾ ಕ್ಲೌನ್‍ ಮೀನುಗಳೂ ಮೊದಲು ಗಂಡಾಗಿಯೇ ಹುಟ್ಟುತ್ತವೆ. ಒಂದು ಅನಿವಾರ್ಯ ಪರಿಸ್ಥಿತಿಯಲ್ಲಿ ಲಿಂಗ ಬದಲಾವಣೆ ಮಾಡಿಕೊಳ್ಳುತ್ತವೆ. ಇದು ಒಂದು ಪ್ರಕೃತಿಯ ವಿಸ್ಮಯ.    ಮನುಷ್ಯರಂತೆ ಕ್ಲೌನ್‍ ಮೀನುಗಳೂ ಕೂಡಾ ಸಂ‍ಘ ಜೀವಿಗಳು. ಇವೂ ಕಾಲೋನಿ ವಾಸಿಗಳು. ಒಂದು ಕಾಲೋನಿಯಿಂದ ಇನ್ನೊಂದು ಕಾಲೋನಿಗೆ ಹೋಗುವುದಿಲ್ಲ. ಕುತೂಹಲದ […]