. . .

ಸೇನಾ ಕ್ಯಾಂಟೀನ್ ಗೆ ಊಟಕ್ಕೆ ಬಂತಾ ಕಾಡಾನೆ..?

58 Views

   ಇನ್ನು ಸ್ವಲ್ಪ ಹೊತ್ತಲ್ಲಿ ಸೇನಾ ಸಿಬ್ಬಂದಿ ಊಟಕ್ಕೆ ಕೂರಬೇಕಿತ್ತು. ಅಷ್ಟರಲ್ಲಿ ಅತಿಥಿಯಾಗಿ ಆಗಮಿಸಿತ್ತು ಕಾಡಾನೆ. ನೇರವಾಗಿ ಸೇನಾ ಕ್ಯಾಂಟೀನ್‍ ಒಳಗೇ ನುಗ್ಗಿತ್ತು. ನಂತರ ಅಲ್ಲಿ ನಡೆದಿದ್ದು ಕುರ್ಚಿ, ಟೇಬಲ್ಲುಗಳ ತೂರಾಟ..! ಈ ಘಟನೆ ನಡೆದದ್ದು, ಪಶ್ಚಿಮ ಬಂಗಾಳದ ಹಾಸಿಮಾರಾ ಸೇನಾ ಕ್ಯಾಂಟೀನ್‍ ನಲ್ಲಿ..

   ಊಟದ ಹಾಲ್‍ ಗೆ ನುಗ್ಗಿದ ಕಾಡಾನೆ, ಸಿಕ್ಕ ಮೇಜು, ಕುರ್ಚಿಗಳ ತೂರಾಟ ನಡೆಸಿದೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ಕೂಗಾಡಿದ್ದಾರೆ. ಮುನ್ನುಗ್ಗುತ್ತಿದ್ದ ಸಲಗವನ್ನು ನಿಯಂತ್ರಿಸಲು ರಟ್ಟಿಗೆ ಬೆಂಕಿ ಹಚ್ಚಿ ಎಸೆದಿದ್ದಾರೆ. ಆದರೆ ಇದಕ್ಕೆ ಆನೆ ಜಗ್ಗಿಲ್ಲ. ಹೀಗಾಗಿ ಸಿಬ್ಬಂದಿಯೊಬ್ಬರು ಧೈರ್ಯ ಮಾಡಿ ಪಂಜು ಹಿಡಿದು ಆನೆಗೆ ಹೆದರಿಸಿದ್ದಾರೆ. ಪಂಜಿನ ಬೆಂಕಿಗೆ ಹೆದರಿದ ಅಲ್ಲಿಂದ ಕಾಲ್ಕಿತ್ತಿದೆ.

 ಪಶ್ಚಿಮ ಬಂಗಾಳದ ಹಾಸಿಮಾರಾ ಸೇನಾ ಕ್ಯಾಂಪ್‍ ನ ಕೂಗಳತೆ ದೂರದಲ್ಲಿ ಚಿಲಾಪಾಟಾ ಅರಣ್ಯವಿದೆ. ಇಲ್ಲಿ ಆನೆಗಳ ಓಡಾಟ ಸಾಮಾನ್ಯ. ಹೀಗಾಗಿ ದಾರಿ ತಪ್ಪಿದ ಒಂಟಿ ಸಲಗ ಕ್ಯಾಂಟೀನ್‍ ಗೆ ನುಗ್ಗಿ ಭೀತಿ ಸೃಷ್ಟಿಸಿದೆ

Leave a Reply

 

%d bloggers like this: