You cannot copy content of this page.
. . .

ಸುವರ್ಣ ರಥ ರೈಲು ಪುನಾರಂಭ; ಮೈಸೂರಿಗೂ ಬರಲಿದೆ ಐಶಾರಾಮಿ ಟ್ರೇನ್..

    ನಷ್ಟದ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ದಕ್ಷಿಣ ಭಾರತದ ಏಕೈಕ ರೈಲು ಸುವರ್ಣ ರಥ (ಗೋಲ್ಡನ್‍ ಚಾರಿಯೆಟ್‍) ವನ್ನು ಪುನಾರಂಭ ಮಾಡಲು ರೈಲ್ವೆ ಇಲಾಖೆ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ಧಾರ ಮಾಡಿದೆ. ಕರ್ನಾಟಕ, ಕೇರಳ, ಪುದುಚೇರಿ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ 2020ರ ಮಾರ್ಚ್‌ನಿಂದ ಸುವರ್ಣ ರಥ ಓಡಾಟ ನಡೆಸಲಿದೆ. ಸಂತಸದ ಸುದ್ದಿ ಅಂದರೆ ಸುವರ್ಣ ರಥ ಮೈಸೂರಿಗೂ ಆಗಮಿಸಲಿದೆ. ಬಂಡೀಪುರ, ಮೈಸೂರು, ಹಳೇಬಿಡು, ಚಿಕ್ಕಮಗಳೂರು, ಹಂಪಿ, ಬಿಜಾಪುರಗಳಲ್ಲೂ ಸಂಚಾರ ನಡೆಸಲಿದೆ.

  ಸುವರ್ಣ ರಥ ರೈಲನ್ನು ಮಾರುಕಟ್ಟೆಗೆ ತರಲು ಮತ್ತು ಕಾರ್ಯ ನಿರ್ವಹಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, (ಕೆಎಸ್‌ಟಿಡಿಸಿ) ಭಾರತೀಯ ರೈಲ್ವೆ ಕ್ಯಾಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಎಲ್ಲಾ ವರ್ಗದ ಜನರು ಪ್ರಯಾಣಿಸಲು ಅನುಕೂಲವಾಗುವಂತೆ ಸುವರ್ಣ ರಥ ರೈಲಿನ ನಿಯಮಗಳನ್ನು ರೂಪಿಸುವಂತೆ ಚಿಂತನೆ ನಡೆಸಲಾಗಿದೆ. ಸೂಕ್ತ ದಿನಾಂಕಗಳನ್ನು ನಿಗದಿ ಮಾಡುವುದರಿಂದ ಹಿಡಿದು ಇತರೆ ಎಲ್ಲಾ ಹೊಣೆಗಾರಿಕೆಯನ್ನು ಐಆರ್‌ಸಿಟಿಸಿ ಮತ್ತು ಕೆಎಸ್‌ಟಿಡಿಸಿ ನೋಡಿಕೊಳ್ಳಲಿದೆ.

  ರೈಲ್ವೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಈ ಬಗ್ಗೆ ಮಾಹಿತಿ ನೀಡಿದ್ದು, ದೇಶದ 15 ಪ್ರವಾಸೋದ್ಯಮ ತಾಣಗಳನ್ನು ಸಂಪರ್ಕಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಿಂದ ಕರ್ನಾಟಕ ಮತ್ತು ದಕ್ಷಿಣ ಭಾರತದ ಇತರ ರಾಜ್ಯಗಳ ಪ್ರವಾಸೋದ್ಯಮದ ಆದಾಯ ಹೆಚ್ಚಿಲಿದೆ ಎಂದಿದ್ದಾರೆ.

  2008ರಲ್ಲಿ ರಾಜ್ಯ ಸರಕಾರ ಮತ್ತು ಭಾರತೀಯ ರೈಲ್ವೆ ಜಂಟಿ ನೇತೃತ್ವದಲ್ಲಿ ಸುವರ್ಣ ರಥವನ್ನು ಪ್ರಾರಂಭಿಸಲಾಗಿತ್ತು. ಆದರೆ ನಷ್ಟದ ಹಿನ್ನೆಲೆಯಲ್ಲಿ ಸುವರ್ಣ ರಥದ ಓಡಾಟ ನಿಲ್ಲಿಸಲಾಗಿತ್ತು.

ಐಶಾರಾಮಿ ರೈಲಿನ ವಿಶೇಷತೆ ಏನು..?

ಈ ರೈಲಿನಲ್ಲಿ 18 ಕೋಚ್‍ ಗಳಿದ್ದು, ಹವಾನಿಯಂತ್ರಿತ 44 ಅತಿಥಿ ಕೋಣೆಗಳಿವೆ. 2 ರೆಸ್ಟೋರೆಂಟ್‍ಗಳು, ಬಾರ್‍, ಕಾನ್ಫರೆನ್ಸ್‍ ಹಾಲ್‍, ಜಿಮ್‍ ಮತ್ತು ಸ್ಪಾ ವ್ಯವಸ್ಥೆ ಕೂಡಾ ಇದೆ. ಸ್ಯಾಟಲೈಟ್‍ ಆಂಟೆನಾ ಮೂಲಕ ಲೈವ್‍ ಟಿವಿ ನೊಡುವ ವ್ಯವಸ್ಥೆ, ಇಂಟರ್‍ ನೆಟ್‍ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

 

%d bloggers like this: