You cannot copy content of this page.
. . .

ಸುಳ್ವಾಡಿ ಪ್ರಕರಣ: ಸುಪ್ರೀಂನಲ್ಲೂ ಸಿಗಲಿಲ್ಲ ಜಾಮೀನು

ಚಾಮರಾಜನಗರದ ಸುಳ್ವಾಡಿ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಭಕ್ತರು ಸಾವಿಗೀಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‍ ವಜಾಗೊಳಿಸಿದೆ.

ಚಾಮರಾಜನಗರ ಸ್ಥಳೀಯ, ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಆರೋಪಿ ಸುಪ್ರೀಂ ಕೋರ್ಟ್‍ ಮೆಟ್ಟಿಲೇರಿದ್ದರು. ನವೆಂಬರ್‍ 21ರಂದು ಸುಪ್ರೀಂ ಕೋರ್ಟ್‍‍ಗೆ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‍ನ ತ್ರಿಸದಸ್ಯ ಪೀಠ ವಜಾ ಮಾಡಿದೆ. ಹೀಗಾಗಿ, ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಜೈಲು ಖಾಯಂ ಆಗಿದೆ.

ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧದ ದ್ವೇಷ ಹಿನ್ನೆಲೆಯಲ್ಲಿ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ್, ದೊಡ್ಡಯ್ಯ ಸಹಾಯದಿಂದ ಪ್ರಸಾದಕ್ಕೆ ವಿಷ ಹಾಕಿದ್ದರು. ಈ ವಿಷ ಪ್ರಸಾದ ಸೇವಿಸಿ 17 ಜನರು ಸಾವನ್ನಪ್ಪಿದ್ದರು.

 

%d bloggers like this: