You cannot copy content of this page.
. . .

ಸುತ್ತೂರು ಜಾತ್ರೆಯಲ್ಲಿ ಹ್ಯಾಟ್ರಿಕ್‍ ಹೀರೋ

 ಸುತ್ತೂರು ಜಾತ್ರಾ ಕಾರ್ಯಕ್ರಮಕ್ಕೆ ಇವತ್ತು ಸ್ಟಾರ್‍ ಮೆರುಗು ಬಂದಿತ್ತು. ಹ್ಯಾಟ್ರಿಕ್‍ ಹೀರೊ ಶಿವರಾಜ್ ‍ಕುಮಾರ್‍ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

 ಈ ವೇಳೆ ಮಾತನಾಡಿದ ಶಿವರಾಜ್‍ ಕುಮಾರ್‍, ಸುತ್ತೂರಿಗೆ ಎರಡನೇ ಬಾರಿ ನಾನು ಬರುತ್ತಿದ್ದು, ಬಹಳ ಸಂತೋಷ ಆಗುತ್ತದೆ. ಜಾತ್ರೆ ನೋಡಿದರೆ ನಮ್ಮ ಬಾಲ್ಯದ ನೆನಪಾಗುತ್ತದೆ. ಜಾತ್ರೆ ಎಂಬುದೇ ಒಂದು ಸಡಗರ, ಅದನ್ನು ಅನುಭವಿಸಬೇಕು. ಎಲ್ಲರಿಗೂ ಶಿಕ್ಷಣ ಕೊಡುವ ಜತೆಗೆ ಇಂತಹದೊಂದು ಹಬ್ಬವನ್ನು ಮಾಡುವ ಮೂಲಕ ನಮ್ಮ ಸಂಸ್ಕೃತಿ ಉಳಿಸುತ್ತಿರುವುದು ಸಂತೋಷದ ಸಂಗತಿ ಎಂದರು. ಈ ವೇಳೆ ಹಾಡುಗಳನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದರು. ಶಿವರಾಜ್‍ ಕುಮಾರ್‍ ಅಳಿಯ ದಿಲೀಪ್ ಉಪಸ್ಥಿತರಿದ್ದರು.

 

%d bloggers like this: