You cannot copy content of this page.
. . .

ಸಮಾಧಿಗೆ ಪುಷ್ಪ ನಮನ.. ಸ್ಮಶಾನದಲ್ಲಿ ಪುಸ್ತಕ ಬಿಡುಗಡೆ..!

  ಸ್ಮಶಾನದಲ್ಲಿ ಬಿಡುಗಡೆಯಾಯ್ತು ಪುಸ್ತಕ… ಸಮಾಧಿಗೆ ಸಲ್ಲಿಕೆಯಾಯ್ತು ಪುಷ್ಪ ನಮನ… ಹೌದು, ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಅಶೋಕಪುರಂ ರುದ್ರಭೂಮಿ ಇಂತಹದ್ದೊಂದು ವಿಶಿಷ್ಠ ಸಂದೇಶ ಸಾರುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಆಶೋಕಪುರಂ ಅಭಿಮಾನಿಗಳ ಬಳಗ, ದಲಿತ ವೆಲ್‌ಫೇರ್ ಟ್ರಸ್ಟ್ ಹಾಗೂ ಪ್ರಗತಿಪರ ಸಂಘಟನೆಗಳಿಂದ ಅಂಬೇಡ್ಕರ್‌ ಗೆ ಪುಷ್ಪ ನಮನ ಹಾಗೂ ಗತಿಸಿದ ಹಿರಿಯರ ಸಮಾಧಿಗೆ ಪುಷ್ಪಾರ್ಚನೆ, ದೀಪಗಳ ನಮನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

  ಇದೇ ವೇಳೆ ಸಿದ್ದಸ್ವಾಮಿಯವರು ರಚಿಸಿದ ‘ಮೈಸೂರು ಆದಿಕರ್ನಾಟಕ ಪುರ’ ಪುಸ್ತಕವನ್ನು ಪ್ರೊ.ಕೆ.ಎಸ್ ಭಗವಾನ್ ಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ಸ್ಮಶಾನದ ಸಮಾಧಿಗೆ ಪುಷ್ಪಾರ್ಚನೆ ಮಾಡಲಾಯಿತು. ಸ್ಮಶಾನ ಎಂದರೆ ಸುಡುಗಾಡು ಎಂಬ ಕೀಳುಭಾವನೆ ಹೋಗಲಾಡಿಸುವ ನಿಟ್ಟಿನಲ್ಲಿ ರುದ್ರಭೂಮಿಯಲ್ಲಿ ಕಾರ್ಯಕ್ರಮ ನಡೆಸುತ್ತಿರುವುದಾಗಿ ಕಾರ್ಯಕ್ರಮ ಆಯೋಜಕರು ತಿಳಿಸಿದರು.

 ಸಾಹಿತಿ ಬನ್ನೂರು ಕೆ.ರಾಜು, ಮಾಜಿ ಮಹಾಪೌರ ಪುರುಷೋತ್ತಮ್, ನಗರಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಇನ್ನಿತರರು ಉಪಸ್ಥಿತರಿದ್ದರು. ಈ ಹಿಂದೆಯೂ ಸಹ ಈ ಸಂಘಟನೆಯಿಂದ ತಾವರಕಟ್ಟೆಯ ಸ್ಮಶಾನದಲ್ಲಿ ತಡರಾತ್ರಿ ಸಹಪಂಕ್ತಿ ಭೋಜನ ಏರ್ಪಡಿಸಿ ಮೌಢ್ಯವನ್ನು ವಿರೋಧಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

 

%d bloggers like this: