You cannot copy content of this page.
. . .

ಶೂ ಇಲ್ಲದೆ ಬ್ಯಾಂಡೇಜ್‍ ಸುತ್ತಿಕೊಂಡು ರನ್ನಿಂಗ್ ರೇಸ್‍; 3 ಚಿನ್ನದ ಪದಕ ಗೆದ್ದ ಬಾಲಕಿ

  ಶೂ ಇಲ್ಲದೆ ಓಡಿ ಚಿನ್ನದ ಪದಕ ಗೆಲ್ಲುವ ದೃಶ್ಯಗಳನ್ನು ಸಿನಿಮಾಗಳನ್ನು ನೋಡುತ್ತೇವೆ. ನಿಜ ಜೀವನದಲ್ಲೂ ಒಮ್ಮೊಮ್ಮೆ ಇವು ನಿಜವಾಗುತ್ತವೆ. ಅದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಶೂ ಇಲ್ಲದೆಯೂ ಶಾಲಾ ಕ್ರೀಡಾಕೂಟದಲ್ಲಿ ಪಾದಕ್ಕೆ, ಬೆರಳುಗಳಿಗೆ ಬ್ಯಾಂಡೇಜ್ ಸುತ್ತಿಕೊಂಡು ರನ್ನಿಂಗ್‍ ರೇಸ್‍ ಮಾಡಿ 11 ಬಾಲಕಿ ಒಟ್ಟು ಮೂರು ಚಿನ್ನದ ಪದಕ ಗಳಿಸಿದ್ದಾಳೆ.

 ಫಿಲಿಫ್ಫೀನ್ಸ್ ನ 11 ವರ್ಷದ ಬಾಲಕಿಯ ಈ ಸಾಧನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ರೇಯಾ ಬುಲ್ಲೋಸ್ ಇಲ್ಲೋಲಿಯೋ ಹೆಸರಿನ ಬಾಲಕಿ ಶಾಲಾ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದಳು. ಆದರೆ ಈಕೆ ಬಳಿ ಶೂ ಇರಲಿಲ್ಲ. ಆದರೂ ಧೈರ್ಯಗೆಡದೆ ಪಾದದ ಹಿಂಭಾಗ, ಪಾದಕ್ಕೆ ಬ್ಯಾಂಡೇಜ್ ಅನ್ನೇ ಸುತ್ತಿಕೊಂಡು 400 ಮೀಟರ್, 800 ಮೀಟರ್ ಹಾಗೂ 1500 ಮೀಟರ್ ಓಟದ ಸ್ಪರ್ಧೆಯಲ್ಲಿ 3 ಚಿನ್ನದ ಪದಕ ಗೆಲ್ಲುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.

 

%d bloggers like this: