You cannot copy content of this page.
. . .

ಶುರುವಾಗಿದೆ ‘ಆಕ್ಸಿಜನ್‍ ಬಾರ್’.. ; ದೆಹಲಿಯಲ್ಲಿ ಉಸಿರಾಡಲೂ ಹಣ ಕೊಡಬೇಕು..!

92 Views

   ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜನ ಉಸಿರಾಡುವುದಕ್ಕೂ ಹಣ ಕೊಡುವ ಪರಿಸ್ಥಿತಿ ಬಂದೊದಗಿದೆ. ವಿಪರೀತ ವಾಯುಮಾಲಿನ್ಯದಿಂದಾಗಿ ದೆಹಲಿಯ ಜನ ಗಂಟಲು ಊಟ, ಕಣ್ಣಲ್ಲಿ ಊರಿ, ನಿರಂತರವಾಗಿ ನೀರು ಸುರಿಯವುದು ಮುಂತಾದ ತೊಂದರೆಗಳಿಂದ ಬಳಲುತ್ತಿದ್ದಾರೆ. ಶುದ್ಧ ಗಾಳಿ ಸಿಗದೇ ಇರುವುದೇ ಇದಕ್ಕೆಲ್ಲಾ ಕಾರಣ. ಹೀಗಾಗಿ ಖಾಸಗಿ ಕಂಪನಿಯೊಂದು ದೆಹಲಿಯಲ್ಲಿ ಆಕ್ಸಿಜನ್‍ ಬಾರ್‍ ಒಂದನ್ನು ತೆರೆದಿದೆ. ಏಳು ಬಗೆಯ ಸುವಾಸನೆಯುಕ್ತ ಆಮ್ಲಜನಕ ಸೇವಿಸಲು 15 ನಿಮಿಷಕ್ಕೆ 299 ರೂಪಾಯಿಯಿಂದ 499 ರೂಪಾಯಿ ನಿಗಧಿ ಮಾಡಿದೆ.

   ದೆಹಲಿಯ ಸೆಲೆಕ್ಟ್‍’ ಸಿಟಿವಾಕ್ ಮಾಲ್‍ನಲ್ಲಿ ಆಕ್ಸಿಪ್ಯೂರ್‍ ಹೆಸರಿನ ಆಮ್ಲಜನಕ ಮಾರಾಟ ಶುರುವಾಗಿದ್ದು, ಜನ ಶುದ್ಧಗಾಳಿ ಸೇವಿಸಲು ಸಾಲುಗಟ್ಟಿ ನಿಂತಿದ್ದಾರೆ. ಲೆಮನ್‍ ಗ್ರಾಸ್‍, ಕಿತ್ತಳೆ, ದಾಲ್ಚಿನ್ನಿ, ಲ್ಯಾವೆಂಡರ್‍, ಪುದಿನ, ನೇರಳೆ, ಪೆಪ್ಪರ್‍ ಮಿಂಟ್‍, ನೀಲಗಿರಿ ಹೀಗೆ ಇಲ್ಲಿ ಏಳು ಫ್ಲೇವರ್‍’ಗಳಲ್ಲಿ ಆಕ್ಸಿಜನ್‍ ಲಭ್ಯವಿದೆ. ನಳಿಕೆಗಳ ಮೂಲಕ ಆಮ್ಲಜನಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ದಿನಕ್ಕೊಮ್ಮೆ ಈ ಆಮ್ಲಜನಕ ಉಸಿರಾಡಿದರೆ ಮಾತ್ರ ದೆಹಲಿಯಲ್ಲಿ ಬದುಕಲು ಸಾಧ್ಯ ಎಂಬ ಮಟ್ಟಿಗೆ ಇದನ್ನು ಪ್ರಚಾರ ಮಾಡಲಾಗಿದೆ. 4.6 ಕೋಟಿ ಜನಸಂಖ್ಯೆ ಇರುವ ದೆಹಲಿಯಲ್ಲಿ ಪ್ರತಿಯೊಬ್ಬರೂ ಹೊಗೆಮಂಜು ಹಾಗೂ ವಿಷಗಾಳಿಯಿಂದ ತತ್ತರಿಸಿದ್ದಾರೆ. ಗಾಳಿಯ ಗುಣಮಟ್ಟ ಅಪಾಯದ ಸ್ಥಿತಿ ತಲುಪಿರುವುದರಿಂದ ವಿಧಿಯಿಲ್ಲದೇ ಶುದ್ಧ ಗಾಳಿಯನ್ನು ಹಣ ಕೊಟ್ಟು ಸೇವಿಸುವಂತಾಗಿದೆ.

  ಈಗಾಗಲೇ ಚೀನಾದಲ್ಲಿ ಶುದ್ಧ ಗಾಳಿ ಮಾರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಕಾಡಿನ ಪ್ರದೇಶದಲ್ಲಿ ಶುದ್ಧ ಗಾಳಿಯನ್ನು ಸಂಗ್ರಹಿಸಿ, ಬಾಟಲ್‍ಗಳಿಗೆ ತುಂಬಿ ಚೀನಾದಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಚೀನಾಗೆ ಹೋಲಿಸಿದರೆ ದೆಹಲಿಯಲ್ಲಿ ಆಕ್ಸಿಜನ್‍ ಬೆಲೆ ತುಂಬಾನೇ ಕಡಿಮೆ ಇದೆ. ಹೀಗಿದ್ದರೂ ಮಳಿಗೆ ಮಾಲೀಕ, ನಾಲ್ಕು ಅವಧಿಗೆ ಆಕ್ಸಿಜನ್‍ ಖರೀದಿ ಮಾಡಿದರೆ ಒಂದು ಅವಧಿ ಉಚಿತವಾಗಿ ಸೇವಿಸಬಹುದು ಎಂಬ ಆಫರ್‍ ನೀಡಿದ್ದಾನೆ. ದೆಹಲಿ ವಿಮಾನ ನಿಲ್ದಾಣ, ಬೆಂಗಳೂರು, ಚೆನ್ನೈ, ಹೈದರಾಬಾದ್‍ ವಿಮಾನ ನಿಲ್ದಾಣಗಳಲ್ಲೂ ಆಕ್ಸಿಜನ್‍ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಲು ಮಾಲೀಕ ಚಿಂತನೆ ನಡೆಸಿದ್ದಾನೆ.

  ಆಸ್ತಮಾ, ಉಸಿರಾಟದ ತೊಂದರೆ ಇರುವವರು ಆಗಾಗ ಆಸ್ಪತ್ರೆಗೆ ಭೇಟಿ ನೀಡಿ, ಆಕ್ಸಿಜನ್‍ ತೆಗೆದುಕೊಳ್ಳುತ್ತಿದ್ದರು. ಈಗ ಎಲ್ಲರ ಪರಿಸ್ಥಿತಿಯೂ ಹೀಗೆ ಆಗಿದೆ. ನೀರಿನಂತೆ ಮುಂದೆ ಎಲ್ಲಾ ಕಡೆಯೂ ಆಮ್ಲಜನಕವನ್ನೂ ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗುವ ಮುನ್ಸೂಚನೆಯನ್ನು ದೆಹಲಿ ನೀಡುತ್ತಿದೆ.

 

%d bloggers like this: