You cannot copy content of this page.
. . .

ಶಾಸಕರಿಗೆ ಚಾಟಿ ಬೀಸಿದ ಹೈಕೋರ್ಟ್

 ಶಾಸಕರು ತಮ್ಮ ಖಾಸಗಿ ಕಾರಿನ ಮೇಲೆ ಹುದ್ದೆ, ಸರ್ಕಾರಿ ಲಾಂಛನ ಹಾಕಿಕೊಳ್ಳಬಾರದೆಂದು ಎಂದು ಕರ್ನಾಟಕ ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನಿಯಮ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ವಿಧಾನಸಭೆ ಸ್ಪೀಕರ್‌ ಗೂ ಆದೇಶ ನೀಡಿದೆ.

  ಆನಂದ್ ಶೆಟ್ಟಿ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ. ಖಾಸಗಿ ಕಾರುಗಳ ಮೇಲೆಯೂ ಸರ್ಕಾರಿ ಲಾಂಛನ ಅಳವಡಿಸಿರುವುದು ಕಂಡು ಬಂದಿದೆ ಎಂದು ನ್ಯಾಯಾಲಯ ಹೇಳಿದೆ.

 

%d bloggers like this: