You cannot copy content of this page.
. . .

ವೃದ್ಧೆ ಮೇಲೆ ಹಲ್ಲೆ ಮಾಡಿದವನಿಗೆ 7 ವರ್ಷ ಜೈಲು ಶಿಕ್ಷೆ

 ಮೈಸೂರು: ವೃದ್ದೆಯ ಮೇಲೆ ಹಲ್ಲೆ ಮಾಡಿ, ಚಿನ್ನದ ಸರವನ್ನು ದೋಚಿದ್ದವನಿಗೆ ಮೈಸೂರಿನ 2ನೇ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ 5 ಸಾವಿರ ದಂಡದೊಂದಿಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

 ನಂಜನಗೂಡು ತಾಲ್ಲೂಕಿನ ತುಂಬುನೇರಳೆ ಗ್ರಾಮದ ಟಿ.ಎಂ.ನಾಗೇಂದ್ರ ಶಿಕ್ಷೆಗೆ ಗುರಿಯಾದ ಆರೋಪಿ. ಮೈಸೂರು ತಾಲ್ಲೂಕಿನ ಬಂಡಿಪಾಳ್ಯದ ನಿವಾಸಿ ನಂಜಮ್ಮ ಅವರ ಮೇಲೆ ಈತ ಹಲ್ಲೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ.

 ಕಳೆದ 2018 ಜ.28ರಂದು ಬೆಳಗ್ಗೆ ನಂಜಮ್ಮ ಅವರು ಹಾಲಿನ ಬೂತ್‌ನ ಬಾಗಿಲು ತೆರೆಯುತ್ತಿದ್ದಾಗ ಹಿಂದಿನಿಂದ ಬಂದ ನಾಗೇಂದ್ರ, ಏಕಾಏಕಿ ನಂಜಮ್ಮ ಅವರ ತಲೆಗೆ ಆಯುಧದಿಂದ ಹೊಡೆದು ಅವರ ಕತ್ತಿನಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂಜಮ್ಮ ಅವರನ್ನು ಸ್ಥಳೀಯ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಲಾಗಿತ್ತು.

 ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, 7 ವರ್ಷ ಶಿಕ್ಷೆಯೊಂದಿಗೆ ಐದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಚ್.ಡಿ.ಆನಂದ ಕುಮಾರ್ ವಾದ ಮಂಡಿಸಿದ್ದರು.

Leave a Reply

 

%d bloggers like this: