You cannot copy content of this page.
. . .

‘ವಿಶ್ವಾಸ’ದಿಂದ ಬೀಗಿದ ಉದ್ಧವ್ ಠಾಕ್ರೆ..

   ಗುರುವಾರವಷ್ಟೇ ಪ್ರಮಾಣವಚನ ಸ್ವೀಕರಿಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್‍ ಠಾಕ್ರೆ ಇಂದು ವಿಶ್ವಾಸಮತ ಗೆದ್ದಿದ್ದಾರೆ. ವಿಶ್ವಾಸಮತದ ಪರ 169 ಶಾಸಕರು ಮತ ಚಲಾಯಿಸಿದರೆ, ಸದನದಲ್ಲಿ ಹಾಜರಿದ್ದ ಎಂಎನ್‍ ಎಸ್ ನ ‍ ಒಬ್ಬ ಶಾಸಕ ಸೇರಿ ನಾಲ್ವರು ಶಾಸಕರು ತಟಸ್ಥರಾಗಿ ಉಳಿದಿದ್ದಾರೆ. ವಿಶ್ವಾಸಮತಯಾಚನೆ ಪ್ರಕ್ರಿಯೆ ಶುರುವಾಗುತ್ತಿದ್ದಂತೆ  ಗದ್ದಲ ಶುರು ಮಾಡಿದ ಬಿಜೆಪಿ ಸದಸ್ಯರು ಸದನದಿಂದ ಹೊರನಡೆದಿದ್ದಾರೆ.

 ಶಿವಸೇನೆ, ಕಾಂಗ್ರೆಸ್‍ ಹಾಗೂ ಎನ್‍ ಸಿಪಿ ಮೈತ್ರಿಕೂಟದ ಸದಸ್ಯರು 154 ಮಂದಿ ಇದ್ದಾರೆ. ಇದರ ಜೊತೆಗೆ ಇತರೆ 15 ಶಾಸಕರು ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ. 288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 145 ಸದಸ್ಯ ಬಲ ಬೇಕಾಗಿತ್ತು.

 ಇವತ್ತು ಕಲಾಪ ಪ್ರಾರಂಭವಾಗುತ್ತಿದ್ದಂತೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಶುರುವಾಯಿತು. ಈ ವೇಳೆ ತೀವ್ರ ಗದ್ದಲ, ಕೋಲಾಹಲ ನಡೆದಿದೆ. ಹಂಗಾಮಿ ಸ್ಪೀಕರ್ ಕಾಳಿದಾಸ್ ಅವರನ್ನು ಬದಲಿಸಿ ಕಾಂಗ್ರೆಸ್ ನ ದಿಲೀಪ್ ಪಾಟೀಲ್ ಅವರನ್ನು ನೇಮಕ ಮಾಡಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ಸ್ಪೀಕರ್ ದಿಲೀಪ್ ಪಾಟೀಲ್, ಗದ್ದಲ ನಡೆಸದಂತೆ ಮನವಿ ಮಾಡಿಕೊಂಡರು. ನಿಯಮಾವಳಿ ಪ್ರಕಾರ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಪ್ರಮಾಣವಚನ ಸಮರ್ಪಕವಾಗಿ ತೆಗೆದುಕೊಂಡಿಲ್ಲ ಎಂದು ಮಾಜಿ ಸಿಎಂ ಫಡ್ನವೀಸ್ ಆಕ್ರೋಶ ವ್ಯಕ್ತಪಡಿಸಿದರು. ವಂದೇ ಮಾತರಂನಿಂದ ಅಧಿವೇಶನ ಆರಂಭವಾಗಬೇಕಿತ್ತು. ಆದರೆ ನಿಯಮಗಳನ್ನು ಗಾಳಿಗೆ ತೂರಿ ಅಧಿವೇಶನ ಕರೆಯಲಾಗಿದೆ ಎಂದು ಆರೋಪಿಸಿದರು. ನಂತರ ಕಲಾಪವನ್ನು ಬಹಿಷ್ಕರಿಸಿ ಹೊರನಡೆದರು.

 

%d bloggers like this: