You cannot copy content of this page.
. . .

ವಿದ್ಯುತ್ ಸ್ಪರ್ಶಕ್ಕೆ ಮತ್ತೊಂದು ಕಾಡಾನೆ ಸಾವು

   ವಿದ್ಯುತ್ ಸ್ಪರ್ಶದಿಂದ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಕಾಡಾನೆ ಸಾವನ್ನಪ್ಪಿದೆ. ಮಳವಳ್ಳಿ ತಾಲೂಕು ಹಲಗೂರು ಸಮೀಪದ ಎಚ್.ಬಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಬಸವನಬೆಟ್ಟದ ತಾಳುಬೆಟ್ಟದ ಬಳಿ ಈ ಘಟನೆ ನಡೆದಿದೆ.

 ಸುದ್ದಿ ತಿಳಿಯುತ್ತಿದ್ದಂತೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿ ಅವರು, ಹಲಗೂರು ವನ್ಯ ಜೀವಿ ವಲಯ ಬ್ಯಾಡರಹಳ್ಳಿ ಬೀಟ್ , ಬಸವನಹಳ್ಳಿಯ ತಾಳು ಬೆಟ್ಟದ ಹತ್ತಿರ ಇರುವ ಜಮೀನಿನಲ್ಲಿ ರಾಗಿ ಬೆಳೆಯನ್ನು ಬೆಳೆಯಲಾಗಿದೆ. ಐದಾರು ದಿನಗಳಿಂದ ಅಕ್ರಮವಾಗಿ ವಿದ್ಯುತ್ ಬೇಲಿ ಹಾಕಲಾಗಿತ್ತು.  ಈ ತಂತಿಯನ್ನು ಸ್ಪರ್ಶಿಸಿ ಹತ್ತು ವರ್ಷದ ಗಂಡಾನೆ ಸಾವನ್ನಪ್ಪಿದೆ ಎಂದು ತಿಳಿಸಿದರು.

 

 

%d bloggers like this: