You cannot copy content of this page.
. . .

ವಿಕಿಲೀಕ್ಸ್ ಸಂಸ್ಥಾಪಕ ಅಸಾಂಜ್ ಜೈಲಲ್ಲೇ ಸಾಯ್ತಾರೆ; 60 ವೈದ್ಯರ ಆತಂಕ

   ಹಲವು ದೇಶಗಳ ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸಿದ್ದ ವಿಕಿಲೀಕ್ಸ್‍ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದೆ. ಹೀಗೆಯೇ ಬಿಟ್ಟರೆ ಅವರು ಜೈಲಿನಲ್ಲೇ ಸಾಯಲಿದ್ದಾರೆ ಎಂದು 60 ಕ್ಕೂ ಹೆಚ್ಚು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

   ಜೂಲಿಯನ್ ಅಸಾಂಜ್ ಅವರು ಸದ್ಯ ಲಂಡನ್ ನ ಬೆಲ್ ಮಾರ್ಶ್ ಜೈಲಿನಲ್ಲಿದ್ದಾರೆ. ಭಾರಿ ಬಿಗಿಭದ್ರತೆಯ ಈ ಜೈಲಿನಲ್ಲಿರುವ ಅಸಾಂಜ್, ಮಾನಸಿಕವಾಗಿ ಹಾಗೂ ದೈಹಿಕವಾಗಿ ಕೃಶರಾಗಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿ ವೈದ್ಯರು ಬ್ರಿಟನ್‍ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‍ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.  ಅವರನ್ನು ಕೂಡಲೇ ಯೂನಿವರ್ಸಿಟಿ ಟೀಚಿಂಗ್ ಹಾಸ್ಪಿಟಲ್‍ ಗೆ ವರ್ಗಾಯಿಸುವುದು ಒಳಿತು ಎಂದೂ ವೈದ್ಯರು ಅಭಿಪ್ರಾಯಟ್ಟಿದ್ದಾರೆ.

  ಅಕ್ಟೋಬರ್ 21ರಂದು ಅಸಾಂಜ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗಿನ ಪರಿಸ್ಥಿತಿ ಮತ್ತು ಅಸಾಂಜ್ ಅನುಭವಿಸುತ್ತಿರುವ ಹಿಂಸೆಯ ಕುರಿತ ವಿಶ್ವಸಂಸ್ಥೆಯ ವರದಿಗಾರ ನೀಲ್ಸ್ ಮೆಲ್ಸರ್ ವರದಿಯ ಆಧಾರದಲ್ಲಿ ವೈದ್ಯರು ತಮ್ಮ ಆತಂಕ ಹೊರಹಾಕಿದ್ದಾರೆ. ನಾವು ಅಸಾಂಜ್ ಅವರ ಪರಿಸ್ಥಿತಿಯ ಕುರಿತು ನಾವು ಬಹಿರಂಗ ಪತ್ರ ಬರೆದಿದ್ದೇವೆ. ಅಸಾಂಜ್ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ನಮ್ಮ ಆತಂಕವನ್ನು ವಿವರಿಸಿದ್ದೇವೆ ಎಂದು ವೈದ್ಯರು 16 ಪುಟಗಳ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  ಅಫ್ಘಾನಿಸ್ತಾನ ಮತ್ತು ಇರಾಕ್ ಮೇಲೆ ಅಮೆರಿಕ 2010ರಲ್ಲಿ ನಡೆಸಿದ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಮಿಲಿಟರಿಯ ಕೆಲ ರಸಹ್ಯ ಮಾಹಿತಿಗಳನ್ನು ಅಸಾಂಜ್ ಅವರು ವಿಕಿಲೀಕ್ಸ್ ಮೂಲಕ ಬಹಿರಂಗಪಡಿಸಿದ್ದರು.

 

%d bloggers like this: