You cannot copy content of this page.
. . .

ವಂಚನೆ ಮಾಡಿದ್ದಕ್ಕೆ 40 ಸಾವಿರ ದಂಡ, 3 ವರ್ಷ ಜೈಲು ಶಿಕ್ಷೆ

 ಮೈಸೂರು: ವಿಶ್ವಾಸ ದ್ರೋಹ ಹಾಗೂ ವಂಚನೆಯ ಪ್ರಕರಣದಲ್ಲಿ ಓರಿಯಂಟಲ್ ಬ್ಯಾಂಕ್ ಆ ಕಾಮರ್ಸ್ ಮಾಜಿ ವ್ಯವಸ್ಥಾಪಕ ವಕೀಲ ಬೆಂಕಿ ಚಿದಾನಂದ್ ಅವರಿಗೆ ಮೈಸೂರಿನ ೧ನೇ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯವು 40,000 ರೂ. ದಂಡದೊಂದಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

 ವಕೀಲನೂ ಆಗಿರುವ ಬೆಂಕಿ ಚಿದಾನಂದ ಲಷ್ಕರ್ ಮೊಹಲ್ಲಾದ ಅಕ್ಬರ್ ರಸ್ತೆಯ ನಿವಾಸಿ ಕೆ. ರಾಘು ಅವರಿಂದ 2012ರಲ್ಲಿ 20 ಸಾವಿರ ರೂ. ಸಾಲವಾಗಿ ಪಡೆದಿದ್ದರು. ಆ ಸಾಲದ ಮರು ಪಾವತಿಗಾಗಿ ದಿವಾನ್ಸ್ ರಸ್ತೆಯ ಓರಿಯೆಂಟಲ್ ಬ್ಯಾಂಕ್ ಆ ಕಾಮರ್ಸ್‌ನ 20 ಸಾವಿರ ಮೊತ್ತದ ಚೆಕ್ ಒಂದಕ್ಕೆ ಸಹಿ ಮಾಡಿ ಕೆ.ರಾಘು ಅವರಿಗೆ ನೀಡಿದ್ದರು.

 ಆ ಚೆಕ್ಕನ್ನು ರಾಘು ಬ್ಯಾಂಕಿಗೆ ಹಾಜರು ಪಡಿಸಿದಾಗ ಚೆಕ್‌ನಲ್ಲಿ ಇರುವ ಸಹಿ ತಾಳೆಯಾಗುವುದಿಲ್ಲ ಎಂದು ಚೆಕ್ ಬೌನ್ಸ್ ಆಗಿತ್ತು. 2016ರಲ್ಲಿ ಕೆ.ರಾಘು ಅವರು ಬೆಂಕಿ ಚಿದಾನಂದ ಅವರ ಮನೆಯ ಬಳಿ ಹೋಗಿ ಚೆಕ್ ಬೌನ್ಸ್ ಆದ ವಿಚಾರ ತಿಳಿಸಿ, ಹಣ ವಾಪಾಸು ನೀಡುವಂತೆ ಕೇಳಿದಾಗ ಬೆಂಕಿ ಚಿದಾನಂದ, ಅವರ ಪತ್ನಿ ಹಾಗೂ ಪುತ್ರ ಸೇರಿಕೊಂಡು ಕೆ. ರಾಘು ಅವರನ್ನು ಅವಾಚ್ಯವಾಗಿ ನಿಂದಿಸಿ, ತಾನು ತನ್ನ ಪತ್ನಿಯ ಖಾತೆಯ ಚೆಕ್‌ಗೆ ಸಹಿ ಹಾಕಿ ನೀಡಿರುವುದಾಗಿಯೂ ಈ ವಿಚಾರವಾಗಿ ಕೇಳಿದರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದರೆಂದು ಆರೋಪಿಸಿ ರಾಘು ವಿದ್ಯಾರಣ್ಯಪುರಂ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು.

 ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಕೀಲ ಬೆಂಕಿ ಚಿದಾನಂದ್, ಪತ್ನಿ ಗಿರಿಜಾಂಬಾ ಹಾಗೂ ಪುತ್ರ ಸ್ನೇಹಿತ್ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 1ನೇ ಹಿರಿಯ ಸಿಜೆ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಯಶವಂತ್ ಕುಮಾರ್ ಅವರು, ಬೆಂಕಿ ಚಿದಾನಂದ್ ಮೇಲಿನ ಆರೋಪ ಸಾಬೀತಾಗಿದೆ ಎಂದು 3 ವರ್ಷಗಳ ಸೆರೆವಾಸ ಹಾಗೂ 15 ಸಾವಿರ ರೂ. ದಂಡ ಹಾಗೂ ಕೆ. ರಾಘು ಅವರಿಗೆ 25 ಸಾವಿರ ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಎಂ.ಸಿ.ಶಿವಶಂಕರಮೂರ್ತಿ ವಾದಿಸಿದ್ದರು.

 

%d bloggers like this: