You cannot copy content of this page.
. . .

ರೈತರ ಜಮೀನಿನಲ್ಲಿ ಚಿರತೆ ಮರಿ ಪ್ರತ್ಯಕ್ಷ

 ಹುಣಸೂರಿನ ರಾಮಪಟ್ಟದ ರಸ್ತೆ ಪಕ್ಕ ಜಮೀನೊಂದರಲ್ಲಿ ಚಿರತೆ ಮರಿ ಪ್ರತ್ಯಕ್ಷವಾಗಿತ್ತು. ಗ್ರಾಮಸ್ಥರು ಅದನ್ನು ಹಿಡಿದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.

 ಜೋಳದ ಹೊಲದಲ್ಲಿ ರೈತರು ಕೆಲಸ ಮಾಡುತ್ತಿರುವಾಗ ಚಿರತೆ ಮರಿ ಪತ್ತೆಯಾಗಿದ್ದು, ಮರಿಯನ್ನು ಕಂಡ ರೈತರು ಹಾಗೂ ಗ್ರಾಮಸ್ಥರು ಮರಿಯನ್ನು ಹಗ್ಗದಿಂದ ಕಟ್ಟಿ ಹಾಕಿ ನಂತರ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಇನ್ನೂ ಕೆಲವು ಚಿರತೆ ಮರಿಗಳು ಈ ಭಾಗದಲ್ಲಿ ಬೀಡುಬಿಟ್ಟಿವೆ ಎಂದು ಅರಣ್ಯಾಧಿಕಾರಿಗಳ ಬಳಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

 ಅರಣ್ಯಾಧಿಕಾರಿಗಳು ಕುಚೇಲ ಎಂಬವರ ಜಮೀನಿನಲ್ಲಿ ಬೋನು ಇಟ್ಟಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.  

 

%d bloggers like this: