You cannot copy content of this page.
. . .

ರೈತನ ಖಾತೆಗೆ ಕನ್ನಾ; ಏರ್ಟೆಲ್ ಸಂಸ್ಥೆಗೆ ದಂಡ

ಮೈಸೂರು: ರೈತನ ಖಾತೆಗೆ ಕನ್ನ ಹಾಕಿದ ಏರ್‌ಟೆಲ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ದಂಡ ವಿಧಿಸಿದೆ.

ಆಧುನಿಕ ಮಾರುಕಟ್ಟೆ ಸಿದ್ಧಾಂತವು ಗ್ರಾಹಕನನ್ನು ಮಾರುಕಟ್ಟೆಯ ರಾಜನೆಂದು ಪರಿಗಣಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ಈಚೆಗೆ ಗ್ರಾಹಕರನ್ನು ಸಣ್ಣ ಮಾರುಕಟ್ಟೆಗಳಿಂದ ಹಿಡಿದು, ದೊಡ್ಡ ಕಂಪನಿಗಳು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ವೇಳೆಯಲ್ಲಿ ನೆಟ್‌ವರ್ಕ್ ಸಂಸ್ಥೆಯ ವಿರುದ್ಧವೇ ಪ್ರಕರಣ ಹೂಡಿ ಹಣ ಪೀಕಿಸಿರುವ ಅಂಶ ಬಲು ಅಪರೂಪವಾಗಿದೆ.

ಹೌದು, ನಂಜನಗೂಡು ತಾಲ್ಲೂಕಿನ ಹೊಸಕೋಟೆ ಗ್ರಾಮದ ಕೆಂಪರಾಜು ಏರ್‌ಟೆಲ್ ಕಂಪನಿಯ ವಿರುದ್ಧ ದೂರು ನೀಡಿ, ಕಂಪನಿಯಿಂದ ದಂಡ ಪೀಕಿಸಿರುವ ಪ್ರಜ್ಞಾವಂತ ನಾಗರಿಕ.

ನೆಟ್‌ವರ್ಕ್ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿರುವ ಏರ್‌ಟೆಲ್ ಸಂಸ್ಥೆ ಗ್ರಾಹಕನ ಖಾತೆಗೆ ಠೇವಣಿಯಾಗಿದ್ದ ಹಣವನ್ನು ಆತನ ಅರಿವಿಗೆ ಬರದಂತೆ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಹಕನಿಗೆ ಹಣ ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.

 ಗ್ಯಾಸ್  ಸಬ್ಸಿಡಿ ಹಣ ಕೆಂಪರಾಜು ಅವರ ಬ್ಯಾಂಕಿನ ಖಾತೆಗೆ ಹಣ ಜಮಾ ಆಗಿದೆ. ಆದರೆ, ಏರ್‌ಟೆಲ್ ಕಂಪನಿ ಗ್ರಾಹಕನಿಗೆ ತಿಳಿಯದಂತೆ ಅವನ ಖಾತೆಯಿಂದ ೨ ರೂ.ಅನ್ನು ಏರ್‌ಟೆಲ್ ಪೇಮೆಂಟ್ ಮನಿ ಖಾತೆಗೆ ಜಮಾ ಮಾಡಿಕೊಂಡಿದೆ. ಗ್ಯಾಸ್ ಸಬ್ಸಿಡಿ ಹಣಕ್ಕಾಗಿ ಕಾಯುತ್ತಿದ್ದ ಕೆಂಪರಾಜು ಹಣ ಏರ್‌ಟೆಲ್ ಪೇಮೆಂಟ್ ಮನಿಗೆ ಜಪ್ತಿ ಆಗಿರುವುದನ್ನು ಅರಿತು. ಆ ಬಳಿಕ ಗ್ರಾಹಕರ ಕಂಪನಿಯ ವಿರುದ್ಧ ಡಿಸೆಂಬರ್ ೨೦೧೮ರಲ್ಲಿ  ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.

ಇದರ ಪರಿಣಾಮ ಪ್ರಕರಣದ ವಾದ-ವಿವಾದಗಳನ್ನು ಕೂಲಂಕುಶವಾಗಿ ನೋಡಿ ಏರ್‌ಟೆಲ್ ಕಂಪನಿಯೂ ಗ್ರಾಹಕನಿಗೆ ೪ ಸಾವಿರ ರೂ. ನೀಡುವಂತೆ ತೀರ್ಪು ನೀಡಿದೆ.

ಗ್ರಾಹಕನಿಂದ ೨ ಸಾವಿರ ರೂ. ಅನ್ನು ಕಂಪನಿಯೂ ಕನ್ನಾ ಹಾಕಿತು. ಹಾಗಾಗಿ ಮೊದಲು ೨ ಸಾವಿರ ರೂ. ಸಂದಾಯ ಮಾಡಿ ನಂತರ ಇಲ್ಲಿಯವರೆಗೆ ಆಗಿರುವ ಕಾನೂನು ಹೋರಾಟದ ವೆಚ್ಚ ಹಾಗೂ ಇಷ್ಟು ದಿನಗಳ ಹಣವನ್ನು ಇರಿಸಿಕೊಂಡಿದ್ದಕ್ಕೆ ಶೇ.೧೦ರಷ್ಟು ಬಡ್ಡಿ ದರದಲ್ಲಿ ಒಟ್ಟಾರೆಯಾಗಿ ೪ ಸಾವಿರ ರೂ. ಹಣವನ್ನು ಏರ್‌ಟೆಲ್ ಕಂಪನಿಯೂ ಗ್ರಾಹಕನಿಗೆ ಒಂದು ತಿಂಗಳಿನೊಳಗೆ ಪಾವತಿಸಬೇಕು ಎಂಬಂತೆ ಆದೇಶ ಹೊರಡಿಸಿ ಗ್ರಾಹನಿಗೆ ನ್ಯಾಯ ಕೊಡಿಸಿದೆ.

 

%d bloggers like this: