You cannot copy content of this page.
. . .

ರಾಜಶೇಖರ ಕೋಟಿ ಸ್ಮರಣೆ; ಮೈವಿವಿ ನೌಕರರ ವೇದಿಕೆಯಿಂದ ದಿನದರ್ಶಿಕೆ ಬಿಡುಗಡೆ

 ಮೈಸೂರು: ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯಿಂದ ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕ ದಿ.ರಾಜಶೇಖರ ಕೋಟಿ ಅವರ ಸ್ಮರಣಾರ್ಥ 2020ನೇ ದಿನದರ್ಶಿಕೆಯನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.

 ಅಗ್ರಹಾರದ ರಮಾನುಜ ರಸ್ತೆಯಲ್ಲಿರುವ ಪತ್ರಿಕೆಯ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ ದಿನದರ್ಶಿಕೆ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಜನಪರ ಚಟುವಟಿಕೆಗಳ ಮೂಲಕ ರೂಪುಗೊಂಡ ‘ಆಂದೋಲನ’ ದಿನಪತ್ರಿಕೆ ನೋವುಳ್ಳವರ, ಹಿಂದುಳಿದವರ, ದನಿ ಇಲ್ಲದವರ ದನಿಯಾಗಿ ನಿಂತಿದ್ದನ್ನು ನಾವಿಂದು ಸ್ಮರಿಸಬಹುದಾಗಿದೆ ಎಂದರು.

 ಶಾಸಕ ಎಲ್.ನಾಗೇಂದ್ರ ಮಾತನಾಡಿ, ‘ಆಂದೋಲನ’ ದಿನಪತ್ರಿಕೆ ಎಂದರೆ ಹೋರಾಟದ ಪ್ರತಿರೂಪ ಎಂಬ ಅರ್ಥ ಕೊಡುತ್ತದೆ. ದಲಿತರು, ಹಿಂದುಳಿದ ಸಮುದಾಯದವರ ಪರವಾಗಿ ನಿರಂತರವಾಗಿ ಬೆಳಕು ಚೆಲ್ಲುತ್ತಿರುವ ಪತ್ರಿಕೆಯನ್ನು ಮುನ್ನಡೆಸುವಲ್ಲಿ ರಾಜಶೇಖರ ಕೋಟಿ ಅವರ ಶ್ರಮ ಅಪಾರವಾಗಿತ್ತು. ಇಂಥ ಕಾರ್ಯಕ್ರಮಗಳ ಮೂಲಕ ಅವರನ್ನು ನಾವು ನೆನೆಯಬೇಕು ಎಂದು ಹೇಳಿದರು.  

 ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ದಿ.ರಾಜಶೇಖರ ಕೋಟಿಯವರ ಜನಪರ ಕಾಳಜಿ ಮನಗಂಡ ಮಹಾಪೌರರೊಬ್ಬರು ಪಾಲಿಕೆಗೆ ಮನವಿ ಸಲ್ಲಿಸಿದರೆ, ನಿಮ್ಮ ಹೆಸರನ್ನು ವೃತ್ತ ಒಂದಕ್ಕೆ ನಾಮಕರಣ ಮಾಡುತ್ತೇವೆ ಎಂದಿದ್ದರು. ಆಗ ಕೋಟಿ ಅವರು ‘ನನ್ನ ಹೆಸರಿಡುವುದು ಬಿಡುವುದು ನಿಮಗೆ ಬಿಟ್ಟ ವಿಚಾರ ಆದರೆ, ನಾನು ಅರ್ಜಿ ಹಾಕುವುದಿಲ್ಲ’ ಎಂದಿದ್ದರು. ಬಳಿಕ ಜನರೇ ಆಡು ಭಾಷೆಯಲ್ಲಿ ‘ಆಂದೋಲನ ವೃತ್ತದ’ ನಾಮಕರಣ ಮಾಡಿದರು. ಪಾಲಿಕೆ ಆ ವೃತ್ತಕ್ಕೆ ಬೇರೆ ಹೆಸರಿಟ್ಟರೂ, ಆ ವೃತ್ತ ಇಂದಿಗೂ ಜನರ ಮನಸ್ಸಿನಲ್ಲಿ ಆಂದೋಲನ ವೃತ್ತವಾಗಿಯೇ ಉಳಿದಿದೆ. ಇದರಿಂದ ಕೋಟಿ ಅವರು ಜನರ ಮನಸ್ಸಿನಲ್ಲಿ ಶಕ್ತಿಯಾಗಿ ಉಳಿದಿದ್ದಾರೆ ಎಂದು ಹೇಳಿದರು.

 ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ‘ಆಂದೋಲನ’ ದಿನಪತ್ರಿಕೆ ಸಂಪಾದಕ ರವಿಕೋಟಿ, ಸಹಾಯಕ ಪ್ರಾಧ್ಯಾಪಕ ಪ್ರೊ.ಜಗದೀಶ್, ಮಹಾರಾಣಿ ಕಾಲೇಜು ಪ್ರಾಧ್ಯಾಪಕ ಡಾ.ಸಿದ್ದರಾಜು, ಮಹಾರಾಜ ಕಾಲೇಜಿನ ಉಪನ್ಯಾಸಕರಾದ ಬಿ.ಎಸ್.ದಿನಮಣಿ, ಎಸ್.ಟಿ.ರಾಮಚಂದ್ರ, ಛಾಯಾಗ್ರಾಹಕ ಉಮೇಶ್, ಯುವರಾಜ ಕಾಲೇಜು ಗಣಕ ವಿಭಾಗದ ಚೆಲುವಾಂಬಿಕೆ, ವೇದಿಕೆ ಅಧ್ಯಕ್ಷ ಆರ್.ವಾಸುದೇವ್, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ವಿನೋದ್, ಸಹಕಾರ್ಯದರ್ಶಿ ಯೋಗೇಶ್, ಭರತ್‌ರಾಜ್, ಗೌ.ಕಾರ್ಯದರ್ಶಿ ಮಹೇಶ್‌ಬಾಬು ರೆಡ್ಡಿ, ಸಂಚಾಲಕ ವಿವೇಕ್, ಖಜಾಂಚಿ ಶಿವಕುಮಾರ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಶಿಕ್ಷಕ ಸಾ.ಸಿ.ದೊರೆಸ್ವಾಮಿ ವೇದಿಕೆ ನಿರ್ದೇಶಕರಾದ ಗಣೇಶ್, ಮಧು, ನವೀನ್‌ಕುಮಾರ್, ಎಸ್.ಮಂಜುನಾಥ್, ರಾಜೇಶ್ವರಿ, ಚಿದಾನಂದ, ಹರೀಶ್,  ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

%d bloggers like this: