You cannot copy content of this page.
. . .

ಯುವತಿಯರ ಅಶ್ಲೀಲ ಫೋಟೊ ಹಾಕಿ ಬ್ಲಾಕ್ಮೇಲ್ ಮಾಡುತ್ತಿದ್ದ ವ್ಯಕ್ತಿ ಬಂಧನ

ಹಾಸನ: ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಅಶ್ಲೀಲ ಘೋಟೊಗಳನ್ನು ಹಾಕಿ ಬ್ಲಾಕ್ಮೇಲ್ ಮಾಡಿ ಹಣ ವಸೂಲು ಮಾಡುತ್ತಿರುವ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಫೇಸ್ಬುಕ್ನಲ್ಲಿ ಕದ್ದ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಹಣ ನೀಡುವಂತೆ ಅಮಾಯಕ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಜಾಲವನ್ನು ಭೇದಿಸಿ ಆರೋಪಿಯೊಬ್ಬನನ್ನು ಹಾಸನದ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಕೇಡಿಗೆ ಗ್ರಾಮದ, ಕಾರು ಚಾಲಕ ಪ್ರಶಾಂತ್ ರಾಜಶೇಖರ್ ವಾಮ (೨೪) ಎಂಬಾತನೇ ಬಂಧಿತ ಆರೋಪಿ. ಕೃತ್ಯದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಫೇಸ್ಬುಕ್ನಿಂದ ಕದ್ದ ಫೋಟೋವನ್ನು ಪ್ರಶಾಂತ್ ಅಶ್ಲೀಲವಾಗಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ. ನಂತರ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ.

ಹಾಸನದ ಯುವತಿಯೊಬ್ಬಳು .೭ರಂದು ಪೊಲೀಸರಿಗೆ ದೂರು ನೀಡಿದ್ದಳು. ಯುವತಿಗೆ ಪವಿತ್ರಾ ಎಂಬಾಕೆ ಕರೆ ಮಾಡಿ, ‘ಮಹೇಶ್ ಕುಲಕರ್ಣಿ ಎಂಬಾತ ನಿನ್ನ ಅಶ್ಲೀಲ ಫೋಟೊಗಳನ್ನು ನನಗೆ ಕಳುಹಿಸಿದ್ದಾನೆ. ಫೋಟೊಗಳನ್ನು ತೆಗೆದು ಹಾಕಬೇಕೆಂದರೆ ಸ್ವಾತಿ ಎಂಬಾಕೆಗೆ ಕರೆ ಮಾಡುಎಂದು ನಂಬರ್ ಕೊಟ್ಟು ಕರೆ ಕಟ್ ಮಾಡಿದ್ದಾಳೆ.

ಪವಿತ್ರಾ ಎಂಬಾಕೆಯೇ ಸ್ವಾತಿ ಪಾತ್ರ ಸೃಷ್ಟಿಸಿದ್ದಳು. ಆತಂಕಗೊಂಡ ಯುವತಿ ಸ್ವಾತಿಗೆ ಕರೆ ಮಾಡಿದ್ದಾರೆ. ಎಲ್ಲ ಫೋಟೊಗಳನ್ನು ಡಿಲೀಟ್ ಮಾಡಬೇಕಾದರೆ ಅಸಲಿ ಪೋಟೊ ಹಾಗೂ ವಿಡಿಯೋ ನೀಡುವಂತೆ ಕೇಳಿದ್ದಾಳೆ. ಮೋಸದ ಜಾಲದ ಬಗ್ಗೆ ಅರಿಯದ ಯುವತಿ ಬೆತ್ತಲೆ ವಿಡಿಯೋ ಮಾಡಿ ಕಳುಹಿಸಿದ್ದಾರೆ.

ಯುವತಿಗೆ ಮತ್ತೆ ಕರೆ ಮಾಡಿದ ಸ್ವಾತಿ, ಚಿತ್ರಗಳು ಡಿಲೀಟ್ ಆಗುತ್ತಿಲ್ಲ. ಪ್ರೀತಂ ಎಂಬಾತನಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಹೇಳಿ ಕರೆ ಕಟ್ ಮಾಡಿದ್ದಳು.

ಪ್ರೀತಂ ಎಂಬಾತ ಯುವತಿಗೆ ಕರೆ ಮಾಡಿ, ಬೆಳಗಾವಿಯಲ್ಲಿರುವ ತನ್ನ ಸ್ನೇಹಿತನ ಖಾತೆಗೆ ೨೨ ಸಾವಿರ ರೂ. ಹಾಕಬೇಕೆಂದು ಹೇಳಿದ್ದಾನೆ. ದಿಕ್ಕು ತೋಚದೆ ಯುವತಿ, .೧೧ ರಂದು ೧೭ ಸಾವಿರ ರೂ. ಅನ್ನು ಬಿ.ಸಿ.ಶಿವಾನಂದ ಎಂಬಾತನ ಎಸ್ಬಿಐ ಖಾತೆಗೆ ಹಾಕಿದ್ದಾರೆ. ಮೂರು ದಿನಗಳ ಬಳಿಕ ಪ್ರೀತಂ ಕರೆ ಮಾಡಿ, ‘ಅಶ್ಲೀಲ ಫೋಟೊಗಳನ್ನು ಶಾಶ್ವತವಾಗಿ ಡಿಲೀಟ್ ಮಾಡಬೇಕೆಂದರೆ ೫೦ ಸಾವಿರ ರೂ. ಕೊಡಬೇಕು. ಇಲ್ಲವಾದರೆ ಫೇಸ್ಬುಕ್, ವಾಟ್ಸ್ ಆಪ್ಗಳಲ್ಲಿ ಫೋಟೊ ವೈರಲ್ ಆಗುತ್ತದೆಎಂದು ಹೆದರಿಸಿದ್ದಾನೆ. ಆಗ ಯುವತಿ ಪೋಷಕರಿಗೆ ತಿಳಿಸಿ ಅಪರಾಧ ಠಾಣೆಗೆ ದೂರು ನೀಡಿದ್ದರು.

ಹಾಸನದ ಯುವತಿಗೆ ವಂಚಿಸಿದವನನ್ನು ಬಂಧಿಸಲಾಗಿದೆ. ಆಕೆಗೆ ಕರೆ ಮಾಡಿದ ಸ್ವಾತಿ, ಪ್ರೀತಂ ಇನ್ನೂ ಪತ್ತೆಯಾಗಿಲ್ಲ. ೧೭ ಸಾವಿರ ಹಣ ಪಾವತಿಸಿಕೊಂಡ ಶಿವಾನಂದ ಸಂಪರ್ಕಕಕ್ಕೆ ಸಿಕ್ಕಿಲ್ಲ. ಮುಂಬೈ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಜಾಲ ಹರಡಿರುವ ಸಾಧ್ಯತೆ ಇದೆ. ಆರೋಪಿಯ ವಿಚಾರಣೆ ನಡೆಯುತ್ತಿದೆಎಂದು ಪೊಲಿಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.

 

%d bloggers like this: