You cannot copy content of this page.
. . .

ಮೈಸೂರು ವಿ.ವಿ. ‘ಫ್ರೀ ಕಾಶ್ಮೀರ’ ಪ್ರಕರಣ; ನಾಳೆ ನಳಿನಿ ಪರ ವಕಾಲತ್ತು ವಹಿಸಲಿದೆ ಜಗದೀಶ್‍ ನೇತೃತ್ವದ ವಕೀಲರ ತಂಡ

 ಜೆಎನ್‍ಯು ದಾಂದಲೆ ಖಂಡಿಸಿ ಮೈಸೂರು ವಿ.ವಿ. ಮಾನಸಗಂಗೋತ್ರಿ ಆವರಣದಲ್ಲಿ ಈಚೆಗೆ ನಡೆದಿದ್ದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಪ್ಲೆಕಾರ್ಡ್‍ ಪ್ರದರ್ಶಿಸಿ ವಿವಾದಕ್ಕೆ ಕಾರಣವಾಗಿದ್ದ ಯುವತಿ ನಳಿನಿ ಪರವಾಗಿ ವಕಾಲತ್ತು ವಹಿಸಲು ಬೆಂಗಳೂರು ವಕೀಲರ ತಂಡ ನಾಳೆ (ಸೋಮವಾರ) ಮೈಸೂರಿಗೆ ಬರಲಿದೆ.

 ಈ ವಿಚಾರವಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಕೀಲರೂ ಆದ ಸಿ.ಎಸ್.ದ್ವಾರಕನಾಥ್‍ ಅವರು ತಮ್ಮ ಫೇಸ್‍ಬುಕ್‍ ಪೇಜ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

 ‘ಮೈಸೂರಿನ ಜನಪರ ಸಂಗಾತಿಗಳೇ, ನಾಳೆ 20ರಂದು ನಮ್ಮ ಬೆಂಗಳೂರು ವಕೀಲರ ತಂಡ ಜಗದೀಶ್‍ ನೇತೃತ್ವದಲ್ಲಿ ನಳಿನಿ ಕೇಸಿಗಾಗಿ ಮೈಸೂರಿಗೆ ಬರಲಿದೆ. ಅಂತೆಯೇ ಅನೇಕ ಮಂದಿ ವೃತ್ತಿ ಧರ್ಮದಲ್ಲಿ ನಂಬಿಕೆಯಿಟ್ಟ ವಕೀಲರು ರಾಜ್ಯದ ಎಲ್ಲೆಡೆಯಿಂದ ಬರಲಿದ್ದಾರೆ. ಮೈಸೂರಿನ ಜನಪರ ವಕೀಲರೊಂದಿಗೆ ನನ್ನ ವಕಾಲತ್ತೂ ಸೇರಿದಂತೆ ನಿಕಟಪೂರ್ವ ಎಸ್‍.ಪಿ.ಪಿ.ಯಾಗಿದ್ದ ಹಿರಿಯ ವಕೀಲರಾದ ಬಿ.ಟಿ.ವೆಂಕಟೇಶ್‍, ಖ್ಯಾತ ಹಾಗೂ ಹಿರಿಯ ಕ್ರಿಮಿನಲ್ ವಕೀಲರಾದ ಶಂಕರಪ್ಪ, ಕಾಶೀನಾಥ್‍ ಮುಂತಾದವರು ವಕಾಲತ್ತಿನೊಂದಿಗೆ ನಳಿನಿ ಪ್ರಕರಣದಲ್ಲಿ ಸದರಿ ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ. ದಯವಿಟ್ಟು ನಿಮ್ಮ ನೈತಿಕ ಬೆಂಬಲ ನೀಡಿ..’ ಎಂದು ಸಿ.ಎಸ್.ದ್ವಾರಕನಾಥ್‍ ಅವರು ಬರೆದುಕೊಂಡಿದ್ದಾರೆ.  

 

%d bloggers like this: