You cannot copy content of this page.
. . .

ಮೈಸೂರಲ್ಲಿ ಯಶ್-ದುಲ್ಕರ್ ಸನ್ಮಾನ್ ಭೇಟಿ

 ಮೈಸೂರು: ನಗರದ ಖಾಸಗಿ ಹೋಟೆಲ್‌ನಲ್ಲಿ ಇರುವ ಚಿತ್ರನಟ ಯಶ್ ಅವರನ್ನು ಮಲೆಯಾಳಂ ಚಿತ್ರನಟ ದುಲ್ಕರ್ ಸಲ್ಮಾನ್ ಭೇಟಿ ಮಾಡಿದ್ದಾರೆ.

 ಮೈಸೂರಿನಲ್ಲೇ ರಾಕಿಂಗ್ ಸ್ಟಾರ್ ಯಶ್ ಮತ್ತು ಮಾಲಿವುಡ್ ಯೂತ್ ಐಕಾನ್ ದುಲ್ಕರ್ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಇಬ್ಬರೂ ಮೈಸೂರಿನ ರಾಡಿಸನ್ ಬ್ಲೂ ಹೊಟೇಲ್‌ನಲ್ಲಿ ತಂಗಿದ್ದಾರೆ.

 ಬುಧವಾರ ಬೆಳಿಗ್ಗೆ ಜಿಮ್ ಮಾಡುವ ವೇಳೆ ಇಬ್ಬರೂ ಮುಖಾಮುಖಿಯಾಗಿದ್ದು, ಇದೇ ಸಂದರ್ಭದಲ್ಲಿ ಸಿನಿಮಾಗಳ ಬಗ್ಗೆ ಕೆಲ ಹೊತ್ತು ಚರ್ಚೆ ನಡೆಸಿದ್ದಾರೆ. ಈ ಫೋಟೋಗಳನ್ನು ದುಲ್ಕರ್ ಹಾಗೂ ಯಶ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

 

%d bloggers like this: