You cannot copy content of this page.
. . .

ಮೈಸೂರಲ್ಲಿ ಮೊದಲ ಬಾರಿ ಅರಳಿಮರ ಸ್ಥಳಾಂತರ..

87 Views

   ಖಾಸಗಿ ಜಾಗದಲ್ಲಿದ್ದ 4 ವರ್ಷದ ಅರಳಿ ಮರವನ್ನು ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಸ್ಥಳಾಂತರ ಮಾಡಲಾಗಿದೆ. ಅಗ್ರಹಾರ ಸರ್ಕಲ್‍ ಬಳಿಯ ಖಾಸಗಿ ಜಾಗದಲ್ಲಿ ಅರಳಿ ಮರವಿತ್ತು. ಆ ಜಾಗದಲ್ಲಿ ಮಾಲೀಕರು ಕಟ್ಟಡ ಕಟ್ಟಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ, ಆರ್‍ಟಿಒ ಹಾಗೂ O2 ಎಂಬ ಸರ್ಕಾರೇತರ ಸಂಸ್ಥೆಯ ನೇತೃತ್ವದಲ್ಲಿ ಮರವನ್ನು ಸ್ಥಳಾಂತರ ಮಾಡಲಾಯಿತು.

  ಜೆಸಿಬಿ ಮೂಲಕ ಸುತ್ತಲೂ ಅಗೆದು ನಂತರ ಬೇರುಗಳ ಸಮೇತ ಮರವನ್ನು ಉರುಳಿಸಲಾಯಿತು. ನಂತರ ಕ್ರೇನ್‍ ತರಿಸಿ ಅದರ ಮೂಲಕ ಲಾರಿಯೊಂದಕ್ಕೆ ಮರವನ್ನು ಸ್ಥಳಾಂತರ ಮಾಡಲಾಯಿತು. ಈ ಮರವನ್ನು ಮಾನಸ ಗಂಗೋತ್ರಿಯಲ್ಲಿರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೆಡಲಾಗುತ್ತದೆಂದು ತಿಳಿದುಬಂದಿದೆ.

Leave a Reply

 

%d bloggers like this: