You cannot copy content of this page.
. . .

ಮೈಕೆಲ್‍ ಜಾಕ್ಸನ್‍ಗೆ ಮೂನ್‍ವಾಕ್‍ ಕಲಿಸಿದ್ದು ಇದೇ ಹಕ್ಕಿನಾ..?

    ಪಾಪ್‍ ಮಾಂತ್ರಿಕ ಮೈಕೆಲ್‍ ಜಾಕ್ಸನ್‍ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ.. ಅವರ ಡ್ಯಾನ್ಸ್‍ ಶೈಲಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತೆ.. ಆಗಲೂ, ಈಗಲೂ, ಯಾವಾಗಲೂ ಜಾಕ್ಸನ್‍ ರನ್ನು ಮೀರಿಸುವ ನೃತ್ಯ ಕಲಾವಿದ ಹುಟ್ಟಿಲ್ಲ, ಮುಂದೆ ಹುಟ್ಟೋದೂ ಡೌಟು.. ಹಾಗಾದ್ರೆ ಇಡೀ ಪ್ರಪಂಚವೇ ತಲೆಬಾಗಿದ ಮೈಕೆಲ್‍ ಜಾಕ್ಸನ್‍ಗೆ ಡ್ಯಾನ್ಸ್‍ ಕಲಿಸಿದ್ದು ಯಾರು..? ಮೈಕೆಲ್‍ ಜಾಕ್ಸನ್‍ಗಿಂತ ಚೆನ್ನಾಗಿ ಮೂನ್‍ ವಾಕ್‍ ಮಾಡೋರು ಇದ್ದಾರಾ..? ಈ ಪ್ರಶ್ನೆಗಳಿಗೆ ಹೌದು ಎಂಬ ಉತ್ತರವೇ ಸೂಕ್ತವಾಗುತ್ತೆ.. ಯಾಕಂದ್ರೆ, ಗುಬ್ಬಿ ಗಾತ್ರದ ಒಂದು ಪುಟ್ಟ ಹಕ್ಕಿಯೊಂದು ಮೈಕೆಲ್‍ ಜಾಕ್ಸನ್‍ಗಿಂತ ಮೋಹಕವಾಗಿ ಮೂನ್‍ವಾಕ್‍ ಮಾಡುತ್ತೆ. ಅಷ್ಟಕ್ಕೂ ಜಾಕ್ಸನ್‍ಗೆ ಮೂನ್‍ವಾಕ್‍ ಕಲಿಸಿದ್ದೇ ಈ ಹಕ್ಕಿನಾ..?

  ಈ ಹಕ್ಕಿ ಹೆಸರು ರೆಡ್‍ಕ್ಯಾಪ್‍ ಮನಾಕಿನ್‍.. ನಮ್ಮ ಮನೆಗಳ ಗೂಡುಗಳಲ್ಲಿ ವಾಸಿಸುವ ಗುಬ್ಬಿಗಳಷ್ಟೇ ಪುಟ್ಟದಾದ ಹಕ್ಕಿ ಇದು.. ದಕ್ಷಿಣ ಮತ್ತು ಮಧ್ಯ ಅಮೆರಿಕದ ಉಷ್ಣವಲಯದ ಕಾಡುಗಳಲ್ಲಿ ಈ ಹಕ್ಕಿಗಳು ಹೆಚ್ಚಾಗಿ ವಾಸಿಸುತ್ತವೆ.. ರೆಡ್‍ಕ್ಯಾಪ್‍ ಮನಾಕಿನ್‍ ಜಾತಿಯ 50ಕ್ಕೂ ಹೆಚ್ಚು ಪ್ರಬೇಧಗಳು ನಮಗೆ ಕಾಣಸಿಗುತ್ತವೆ.. ಈ ಹಕ್ಕಿಯ ತಲೆಯ ಭಾಗ ಮಾತ್ರ ಕೆಂಪಗಿರುತ್ತೆ. ಉಳಿದ ದೇಹ ಕಪ್ಪಗಿದ್ದು, ಕಾಲುಗಳು ಹಳದಿ ಬಣ್ಣದಲ್ಲಿರುತ್ತವೆ.. ನೋಡಲು ಆಕರ್ಷಕವಾಗಿರುವ ಈ ಹಕ್ಕಿಗಳು ತರಹವೇವಾರಿ ಡ್ಯಾನ್ಸ್‍ ಮಾಡುತ್ತವೆ. ಅದರಲ್ಲಿ ಒಂದು ಪ್ರಬೇಧದ ಹಕ್ಕಿ ಮೈಕೆಲ್‍ ಜಾಕ್ಸನ್‍ ಮೀರಿಸುವ ಮೂನ್‍ ವಾಕ್‍ ಮಾಡುತ್ತದೆ.

  ಮೈಕೆಲ್‍ ಜಾಕ್ಸನ್‍ ಮಾಡುತ್ತಿದ್ದ ಡ್ಯಾನ್ಸ್‍ಗಳಲ್ಲಿ ಮೂನ್‍ವಾಕ್‍ ಹೆಚ್ಚು ಜನಪ್ರಿಯವಾಗಿತ್ತು.. ಜಾಕ್ಸನ್‍ ವೇಗವಾಗಿ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಜಾರುತ್ತಿದ್ದರೆ ನೋಡುಗರು ಆಶ್ಚರ್ಯದಿಂದ ನೋಡುತ್ತಿದ್ದರು.. ಈ ರೆಡ್‍ಕ್ಯಾಪ್‍ ಮನಾಕಿನ್‍ ಹಕ್ಕಿ ಕೂಡಾ ಅದೇ ರೀತಿಯಲ್ಲಿ ಡ್ಯಾನ್ಸ್‍ ಮಾಡುತ್ತೆ. ಮರದ ಕೊಂಬೆಯ ಮೇಲೆ ಕುಳಿತು ಮೂನ್‍ವಾಕ್‍ ಮಾಡುತ್ತೆ.. ಈ ದೃಶ್ಯವನ್ನು ನೋಡಿದ ತಕ್ಷಣ ಮೈಕೆಲ್‍ ಜಾಕ್ಸನ್‍ ನೆನಪಿಗೆ ಬರುತ್ತಾರೆ.

  ರೆಡ್‍ಕ್ಯಾಪ್‍ ಮನಾಕಿನ್‍ ಜಾತಿಯ ಗಂಡು ಹಕ್ಕಿಗಳು ಮಾತ್ರ ಈ ನೃತ್ಯ ಮಾಡೋದು. ಹೆಣ್ಣು ಹಕ್ಕಿಗಳೊಂದಿಗೆ ಮಿಲನಮಹೋತ್ಸವ ಮಾಡಬೇಕು ಎನಿಸಿದಾಗ ಮಾತ್ರ ಇವು ಹೀಗೆ ಡ್ಯಾನ್ಸ್‍ ಮಾಡುತ್ತವೆ. ಹೆಣ್ಣು ಇರುವುದನ್ನು ಗುರುತಿಸುವ ಗಂಡು ಹಕ್ಕಿ, ಅದಕ್ಕೆ ಕಾಣಿಸುವಂತೆ ಮರದ ಕೊಂಬೆಯ ಮೇಲೆ ಮೂನ್‍ವಾಕ್‍ ಮಾಡುತ್ತದೆ. ಜೊತೆಗೆ ಅದೇ ವೇಗದಲ್ಲಿ ರೆಕ್ಕೆಗಳನ್ನು ಕಂಪಿಸುತ್ತಾ ಪಿಟೀಲು ರೀತಿಯ ಶಬ್ದವನ್ನು ಹೊಮ್ಮಿಸುತ್ತದೆ. ಈ ಮೂಲಕ ಹೆಣ್ಣು ಹಕ್ಕಿಯನ್ನು ಇಂಪ್ರೆಸ್‍ ಮಾಡುತ್ತದೆ. ಹೆಣ್ಣು ಹಕ್ಕಿಗೆ ಆ ಡ್ಯಾನ್ಸ್‍ ಇಷ್ಟವಾದರೆ ಅದರೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತದೆ.

   ಈ ಹಕ್ಕಿ ಹೆಸರು ರೆಡ್‍ಕ್ಯಾಪ್‍ ಮನಾಕಿನ್‍ ಆದರೂ ಎಲ್ಲರೂ ಮೂನ್‍ ವಾಕ್‍ ಬರ್ಡ್‍ ಅಂತಾನೇ ಕರೀತಾರೆ. ಮೈಕೆಲ್‍ ಜಾಕ್ಸನ್‍ ಈ ಹಕ್ಕಿಯ ನರ್ತನೆಯನ್ನು ನೋಡಿಯೇ ಮೂನ್‍ವಾಕ್‍ ಕಲಿತಿದ್ದು ಅಂತ ಕೆಲವು ಸಂಶೋಧಕರು ಹೇಳುತ್ತಾರೆ. ಅಂದಹಾಗೆ, ಈ ಹಕ್ಕಿ ತನ್ನ ಸಂಗಾತಿಗೆ ಇಂಪ್ರೆಸ್‍ ಮಾಡಲು ಮೂನ್‍ವಾಕ್‍ ಮಾಡುತ್ತೆ. ಆದರೆ ಮೈಕೆಲ್‍ ಜಾಕ್ಸನ್‍ ಯಾರನ್ನು ಇಂಪ್ರೆಸ್‍ ಮಾಡೋದಕ್ಕೆ ಈ ಡ್ಯಾನ್ಸ್‍ ಕಲಿತರೋ ಗೊತ್ತಿಲ್ಲ. ಅವರ ಈ ಸ್ಟೆಪ್ಸ್‍ ಇಡೀ ವಿಶ್ವವನ್ನೇ ಇಂಪ್ರೆಸ್‍ ಮಾಡಿತ್ತು ಅನ್ನೋದಂತೂ ಸತ್ಯ.

 

%d bloggers like this: