You cannot copy content of this page.
. . .

ಮುಂದುವರಿದ ಕಾಡಾನೆ ದಾಳಿ; ಕಾರ್ಮಿಕನ ಸ್ಥಿತಿ ಗಂಭೀರ

 ಸಿದ್ದಾಪುರ (ಕೊಡಗು): ಕಾಡಾನೆ ದಾಳಿಗೆ ಕಾರ್ಮಿಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದಲ್ಲಿ ಗುಹ್ಯ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

 ಚೆನ್ನಯ್ಯನಕೋಟೆ ನಿವಾಸಿ ಕಾರ್ಮಿಕ ಸುನಿಲ್ ಎಂಬಾತ ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡವರು. ಸೋಮವಾರ ಬೆಳಿಗ್ಗೆ ತನ್ನ ಬೈಕ್‍ನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಗುಹ್ಯ ಗ್ರಾಮದ ಶಾಲೆಯ ಪಕ್ಕದಲ್ಲಿದ್ದ ಮೂರು ಕಾಡಾನೆಗಳನ್ನು ಕಂಡು ಬೈಕ್ ಬಿಟ್ಟು ಓಡಿ ಹೋಗಲು ಮುಂದಾಗಿದ್ದಾರೆ. ಈ ವೇಳೆ ಕಾಡಾನೆಯು ಸುನಿಲ್ ಮೇಲೆ ದಾಳಿ ನಡೆಸಿದ ಪರಿಣಾಮ ಕಾಲು ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

 ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಹಿಂದೆ ಸಿದ್ದಾಪುರ ಸಮೀಪದ ಅವರೆಗುಂದ ಗ್ರಾಮದಲ್ಲಿ ಕಾಡಾನೆ ದಾಳಿಗೆ ಬೆಳೆಗಾರ ಪೆಮ್ಮಯ್ಯ ಎಂಬವರು ಸಾವನ್ನಪ್ಪಿದ್ದರು.

Leave a Reply

 

%d bloggers like this: