You cannot copy content of this page.
. . .

ಮಾಧುಸ್ವಾಮಿಗೆ ಚುನಾವಣಾ ಉಸ್ತುವಾರಿಯಿಂದ ಕೊಕ್..

   ಕೆ.ಆರ್‍.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿದ್ದ ಸಚಿವ ಮಾಧುಸ್ವಾಮಿರನ್ನು ಬದಲಾಯಿಸಲಾಗಿದೆ. ಮಾಧುಸ್ವಾಮಿಯವರ ಬದಲಿಗೆ ಡಿಸಿಎಂ ಡಾ.ಅಶ್ವಥನಾರಾಯಣರಿಗೆ ಕೆ.ಆರ್‍.ಪೇಟೆಯ ಬಿಜೆಪಿ ಉಸ್ತುವಾರಿ ನೀಡಲಾಗಿದೆ.

  ಇಂದು ಸಂಜೆ (ಬುಧವಾರ) ಬೆಂಗಳೂರಿನಲ್ಲಿ ಉಪಚುನಾವಣೆಯ ಬಿಜೆಪಿ ಉಸ್ತುವಾರಿಗಳ ಸಭೆ ನಡೆಸಲಾಯಿತು. ಇದರಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಡಿಸಿಎ ಡಾ.ಅಶ್ವಥನಾರಾಯಣ ಅವರಿಗೆ ಮೊದಲು ಹೊಸಕೋಟೆ ಕ್ಷೇತ್ರದ ಜವಾಬ್ದಾರಿ ನೀಡಲಾಗಿತ್ತು. ಆದರೆ ಈಗ ಹೊಸಕೋಟೆಗೆ ಸಿಎಂ ಸಂಸದೀಯ ಕಾರ್ಯದರ್ಶಿ ಎಸ್‍.ಆರ್‍.ವಿಶ್ವನಾಥ್‍ ರನ್ನು ನೇಮಿಸಿ ತೀರ್ಮಾನ ಕೈಗೊಳ್ಳಲಾಗಿದೆ.

 

%d bloggers like this: