You cannot copy content of this page.
. . .

ಮದುವೆಗೆ ಚಿನ್ನಾಭರಣ ಮಾಡಿಸಲು ಕಳ್ಳತನಕ್ಕಿಳಿದ ಆಸಾಮಿ..!

 ಮಂಡ್ಯ ಜಿಲ್ಲೆಯಲ್ಲಿ ಎರಡು ಕ್ರಷರ್‍ ಹಾಗೂ ವಿವಿಧೆಡೆ ನಡೆದ ದರೋಡೆ ಪ್ರಕರಣ ಸಂಬಂಧ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 2.10 ಲಕ್ಷ ರೂಪಾಯಿ ನಗದು ಸೇರಿ 9 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಒಬ್ಬ ಆರೋಪಿ ಮದುವೆಗೆ ಚಿನ್ನ ಖರೀದಿಸಲು, ಇನ್ನೊಬ್ಬ ಆರೋಪಿ ಇಎಂಐ ಕಟ್ಟಲು ಹಣವಿಲ್ಲದಿದ್ದಕ್ಕೆ ಕಳ್ಳತನಕ್ಕಿಳಿದಿದ್ದಾರೆಂದು ತಿಳಿದುಬಂದಿದೆ.

  ಪಾಂಡವಪುರ ತಾಲ್ಲೂಕಿನ ಹೊನಗಾನಹಳ್ಳಿ ಗ್ರಾಮದ ಎಸ್.ಕೃಷ್ಣ, ಚಿನಕುರುಳಿ ಗ್ರಾಮದ ಸಿ.ಎನ್.ಆಕಾಶ್ ಮತ್ತು ಸಿ.ಎಸ್.ಗುರುಕಿರಣ್, ಮೈಸೂರಿನ ನವಾಜ್, ಹಬೀಬ್‍, ರೋಹನ್ ಮತ್ತು ವಸೀಂ ಬಂಧಿತರು. ಬೇಬಿ ಬೆಟ್ಟದಲ್ಲಿರುವ ಅಹಲ್ಯದೇವಿ ಕ್ರಷರ್, ಟಿ.ಎಂ.ಹೊಸೂರು ಶ್ರೀರಂಗನಾಥ ಸ್ಟೋನ್ ಕ್ರಷರ್‍ ಗೆ ನುಗ್ಗಿ ಆರೋಪಿಗಳು ಹಣ ದೋಚಿದ್ದರು. ಚಿನ್ನದ ವ್ಯಾಪಾರಿಯೊಬ್ಬರ ಮೇಲೂ ದಾಳಿ ನಡೆಸಿದ್ದರು.

   ಬಂಧಿತರೆಲ್ಲರೂ ಸ್ನೇಹಿತರಾಗಿದ್ದು, ಒಂದಿಲ್ಲೊಂದು ಆರ್ಥಿಕ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದರು. ಸಮಸ್ಯೆ ಪರಿಹರಿಸಿಕೊಳ್ಳಲು ಕಳ್ಳತನ ವೃತ್ತಿಗೆ ಇಳಿದರೆಂದು ತಿಳಿದುಬಂದಿದೆ. ಬಂಧಿತ ಆರೋಪಿಗಳಲ್ಲಿ ಒಬ್ಬನಾದ ನವಾಜ್‍ ಗೆ ಮದುವೆ ಫಿಕ್ಸ್ ಆಗಿತ್ತು. ಮದುವೆಗೆ ಚಿನ್ನಾಭರಣ ಮಾಡಿಸಲು ಆತನ ಬಳಿ ಹಣವಿರಲಿಲ್ಲ. ಇನ್ನೊಬ್ಬ ಆರೋಪಿ ಎಸ್‍.ಕೃಷ್ಣ ಟಿಪ್ಪರ್‍ ಖರೀದಿ ಮಾಡಿದ್ದು, ಇದಕ್ಕಾಗಿ ಮಾಡಿದ್ದ ಸಾಲಕ್ಕೆ ಇಎಂಐ ಕಟ್ಟಲು ಹಣವಿರಲಿಲ್ಲ. ಹೀಗಾಗಿ ಎಲ್ಲರೂ ಸೇರಿ ಕಳ್ಳತನ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಲು ಯತ್ನಿಸಿದ್ದರೆಂದು ಪೊಲೀಸ್‍ ತನಿಖೆ ವೇಳೆ ತಿಳಿದುಬಂದಿದೆ.

 

 

%d bloggers like this: