You cannot copy content of this page.
. . .

ಮತದಾರರು ಹಣಕ್ಕೆ ಕರಗುವುದಿಲ್ಲ: ಸಿದ್ದರಾಮಯ್ಯ ವಿಶ್ವಾಸ

  ಬಿಜೆಪಿಯವರು ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡುತ್ತಿದ್ದು, ಮತದಾರರು ದುಡ್ಡಿಗೆ ಕರಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮಂತ್ರಿಗಿರಿಗಾಗಿ ಮತ ಕೇಳ್ತಿರೋ ಬಿಜೆಪಿ ನಿಲುವನ್ನು ಜನ ಒಪ್ಪಲು ಸಾಧ್ಯವೇ ಇಲ್ಲ ಎಂದರು.

    ಬಿಜೆಪಿಯವರು 15 ಕ್ಷೇತ್ರಗಳಲ್ಲೂ ಬೇಕಾಬಿಟ್ಟಿ ಹಣ ಖರ್ಚು ಮಾಡಿದ್ದಾರೆ. ಹೀಗಾಗಿಯೇ ನಾನು ಬಿಜೆಪಿಯ ದುಡ್ಡು, ಕಾಂಗ್ರೆಸ್‍ ಗೆ ಓಟು ಎಂದು ಹೇಳಿದ್ದೇನೆ. ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‍ ಗೆದ್ದೇ ಗೆಲ್ಲುತ್ತೆಂಬ ವಿಶ್ವಾಸ ನನಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಅನರ್ಹರು ಹಣಕ್ಕಾಗಿ ಸರ್ಕಾರವನ್ನು ಬೀಳಿಸಿದ್ದಾರೆ. ಹೀಗಾಗಿ ಅವರಿಗೆ ಪಾಠ ಕಲಿಸಲು ಮತದಾರರು ಕಾಯುತ್ತಿದ್ದಾರೆಂದು ಹೇಳಿದರು.

 

%d bloggers like this: