. . .

‘ಭ್ರಷ್ಟಾಚಾರದ ಅಪ್ಪ ಯಡಿಯೂರಪ್ಪ’; ಪ್ರೊ.ಮಹೇಶ್ಚಂದ್ರ ಗುರು

45 Views

    ಆಪರೇಷನ್ ಕಮಲ ಎನ್ನುವ ರಾಜಕೀಯ  ಭ್ರಷ್ಟಾಚಾರದ ಅಪ್ಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ಚಂದ್ರ ಗುರು ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಾಂತರ ಮಾಡಿದ ೧೭ ಮಂದಿ ಶಾಸಕರು ದೇಶದ ರಕ್ಷಣೆಗಾಗಿ ರಾಜೀನಾಮೆ ನೀಡಿಲ್ಲ.
ಬಲಿದಾನ ಮಾಡಿಲ್ಲ, ಅಭಿವೃದ್ಧಿಗೆ ಕೊಡುಗೆ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

   ಕಷ್ಟಕಾಲದಲ್ಲಿ ಸೇವೆ ಮಾಡುತ್ತಾರೆ ಎಂಬ ನಂಬಿಕೆ ಮೇಲೆ ಜನರು ಇವರನ್ನು ಗೆಲ್ಲಿಸಿದರೆ, ಮುಂಬೈನಲ್ಲಿ ಕುಳಿತು ಶೋಕಿ ಮಾಡುತ್ತಿದ್ದರು. ಇಂತಹ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದಂತಹ ವ್ಯಕ್ತಿಗಳನ್ನು ಗೆಲ್ಲಿಸಬೇಕೆ..? ಎಂದು ಮಹೇಶ್ಚಂದ್ರ ಗುರು ಪ್ರಶ್ನಿಸಿದರು. ಯಡಿಯೂರಪ್ಪ ಅವರು ವೀರಶೈವರು, ಲಿಂಗಾಯಿತರು ಬಿಜೆಪಿಗೆ ಮತ ನೀಡಿ ಎಂದು ಹೇಳಿಕೆ ನೀಡಿದ್ದು, ಚುನಾವಣಾ ನೀತಿ ಸಂಹಿತೆ, ಸಂವಿಧಾನದ ಆಶಯಗಳ ಉಲ್ಲಂಘನೆ ಮಾಡಿದ್ದಾರೆ. ಇವರಿಗೆ ಮುಖ್ಯಮಂತ್ರಿ ಆಗುವುದಕ್ಕೆ ನೈತಿಕತೆ ಇಲ್ಲ. ಬಹುಮತದಿಂದ ಆಡಳಿತ ನಡೆಸುತ್ತಿದ್ದ ಪಕ್ಷಗಳನ್ನು ಕಡೆವಿದರು ಎಂದು ದೂರಿದರು. 

Leave a Reply

 

%d bloggers like this: