You cannot copy content of this page.
. . .

ಬೈಲಕುಪ್ಪೆಯಲ್ಲಿ ಕರುವಿನ ಮೇಲೆ ಬೀದಿ ನಾಯಿಗಳ ದಾಳಿ

  ಬೀದಿನಾಯಿಗಳು ಕರುವಿನ ಮೇಲೆ ದಾಳಿ ನಡೆಸಿದ ಪರಿಣಾಮ ಕರುವಿಗೆ ತೀವ್ರ ಗಾಯಗಳಾಗಿರುವ ಘಟನೆ ಮೈಸೂರು ತಾಲ್ಲೂಕು ಬೈಲಕುಪ್ಪೆ 1ನೇ ಕ್ಯಾಂಪ್ ರಸ್ತೆ ಬದಿಯಲ್ಲಿ ನಡೆದಿದೆ.
ಗಾಯಗೊಂಡಿರುವ ಕರು 1ನೇ ಕ್ಯಾಂಪ್ ರಸ್ತೆಯ ತಮ್ಮೇಗೌಡ ಅವರ ಮಗ ಕೃಷ್ಣ ಎಂಬವರಿಗೆ ಸೇರಿದ್ದಾಗಿದೆ. ಕೃಷ್ಣ ತಮ್ಮ ಜಮೀನಿನಲ್ಲಿ ದನಗಳನ್ನು ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಬೀದಿನಾಯಿಗಳು ಕರುವಿನ ಮೇಲೆ ದಾಳಿ ಮಾಡಿವೆ.

  ಇದೇ ಮಾರ್ಗದಲ್ಲಿ ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳು ಸಂಚರಿಸುತ್ತಿದ್ದು, ನಾಯಿಗಳ ಹಾವಳಿಯಿಂದ ಹೆದರುವಂತಾಗಿದೆ. ಬೈಲಕುಪ್ಪೆ ಗ್ರಾಪಂನವರು ಕೂಡಲೇ ಬೀದಿನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಕೃಷ್ಣ ಆಗ್ರಹಿಸಿದ್ದಾರೆ.

  ಇತ್ತೀಚೆಗೆ ನಂಜನಗೂಡಿನಲ್ಲಿ ಬೀದಿನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿದ್ದವು.

Leave a Reply

 

%d bloggers like this: