You cannot copy content of this page.
. . .

ಬಿಜೆಪಿ 9 ಸ್ಥಾನ ಗೆಲ್ಲುತ್ತೆ: ಎಸ್.ಎ.ರಾಮದಾಸ್ ವಿಶ್ವಾಸ

   ೧೫ ಕ್ಷೇತ್ರಗಳಿಗೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ೯ ಸ್ಥಾನಗಳನ್ನು ಗೆದ್ದು ಸುಭದ್ರ ಸರ್ಕಾರ ರಚಿಸಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
  ಮೈಸೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನ ದಿನದವರೆಗೂ ಕಾಂಗ್ರೆಸ್-ಜಾ.ದಳ ನಾಯಕರು ಪ್ರಚಾರದಲ್ಲಿ ಅಬ್ಬರಿಸುತ್ತಿದ್ದರು. ಮತದಾನದ ನಂತರ ಧ್ವನಿ ಸ್ವಲ್ಪ ತಣ್ಣಗಾಗಿದೆ. ಈ ನಡುವೆ ಕಾಂಗ್ರೆಸ್-ಜಾ.ದಳ ಮತ್ತೆ ಮೈತ್ರಿ ಮಾಡಿಕೊಳ್ಳುವ ಧ್ವನಿ ಕೇಳಿಬರುತ್ತಿದೆ. ಆದರೆ, ಬಿಜೆಪಿ ಸರ್ಕಾರ ಅದಕ್ಕೆ ಅವಕಾಶ ಕೊಡುವುದಿಲ್ಲ. ೯ ಸ್ಥಾನಗಳನ್ನು ಗೆದ್ದು, ಮುಂದಿನ ಮೂರುವರೆ ವರ್ಷ ಸರ್ಕಾರ ಸುಭದ್ರವಾಗಿ ಮುಂದುವರಿಸಲಿದೆ ಎಂದು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
  ಮಂತ್ರಿ ಸ್ಥಾನಕ್ಕಾಗಿ ಲಾಭಿ ಮಾಡಿಲ್ಲ: ಎಂತಹ ಸಂದರ್ಭದಲ್ಲೂ ಕ್ಷೇತ್ರದ ಜನ ನನ್ನ ಕೈಹಿಡಿದಿದ್ದಾರೆ. ಅವರ ಸೇವೆ ಮಾಡಲು ಬದ್ಧನಾಗಿರುತ್ತೇನೆಯೇ ಹೊರತು ಪಕ್ಷದಲ್ಲಿ ಮಂತ್ರಿ ಸ್ಥಾನಕ್ಕಾಗಿ ಎಂದಿಗೂ ಲಾಭಿ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ೨೦೦೮ರಲ್ಲಿ ನಾನು ಶಾಸಕನಾಗಿದ್ದಾಗ ಶೋಭಾ ಕರಂದ್ಲಾಜೆ ಅವರನ್ನು ಜಿಲ್ಲಾ ಮಂತ್ರಿಯಾಗಿ ಮಾಡಿದ್ದರು. ಆಗಲೂ ನನಗೆ ಯಾವುದೇ ರೀತಿಯ ಅಸಮಾಧಾನ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

%d bloggers like this: