You cannot copy content of this page.
. . .

ಬಿಎಸ್‌ವೈ ಆದಷ್ಟು ಬೇಗ ಅವರನ್ನು ತೃಪ್ತಿ ಪಡಿಸಲಿ; ವಿಶ್ವನಾಥ್‌ಗೆ ಸಾರಾ ಟಾಂಗ್

 ಮೈಸೂರು: ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಿಂದ ತಮಗೆ ತೃಪ್ತಿ ಆಗುತ್ತಿಲ್ಲ ಎಂದು ಹೋಗಿದ್ದರು. ಈಗ ಬಿ.ಎಸ್.ಯಡಿಯೂರಪ್ಪ ಅವರು ಇವರನ್ನು ಎಷ್ಟು ತೃಪ್ತಿ ಪಡಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್‍ ಅವರಿಗೆ ಶಾಸಕ ಸಾ.ರಾ.ಮಹೇಶ್‍ ಪರೋಕ್ಷವಾಗಿ ಟಾಂಗ್ ನೀಡಿದರು.

 ಆದಷ್ಟು ಬೇಗ ಬಿ.ಎಸ್.ಯಡಿಯೂರಪ್ಪ ಅವರು ಇವರನ್ನು ತೃಪ್ತಿಪಡಿಸಲಿ ಎಂದು ಕುಟುಕಿದರು.

 ಅಡಗೂರು ಎಚ್.ವಿಶ್ವನಾಥ್‍ ಅವರು ಮೈತ್ರಿ ಸರ್ಕಾರ ತಮ್ಮನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಲಿಲ್ಲ. ನಂತರ ಶಾಸಕ ಸ್ಥಾನದಿಂದ ಅನರ್ಹಗೊಂಡು ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಎಂದು ಬಿಎಸ್‍ವೈ ಹೇಳಿದ್ದರು.

Leave a Reply

 

%d bloggers like this: