You cannot copy content of this page.
. . .

ಬಸ್-ಬೈಕ್ ಡಿಕ್ಕಿ; ಅಪ್ಪ, ಮಗ ಸ್ಥಳದಲ್ಲೇ ಸಾವು

ಮೈಸೂರು ತಾಲ್ಲೂಕಿನ ಕೋಟೆಹುಂಡಿ ಸರ್ಕಲ್ ಬಳಿ ಕೆಎಸ್ಆರ್‍ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಅಪ್ಪ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ಇಂದು ಬೆಳಿಗ್ಗೆ ನಡೆದಿದೆ.

 ಪ್ರಕಾಶ್ (50), ಸುರೇಶ್ (23) ಮೃತಪಟ್ಟವರು. ಕಟ್ಟೆಹುಣಸೂರು ನಿವಾಸಿಗಳಾದ ಇವರು ಮೈಸೂರಿನ ಜೆ.ಪಿ.ನಗರದ ಮಹದೇವುಪರದಲ್ಲಿ ವಾಸವಿದ್ದರು. ಪ್ರಕಾಶ್ ಮತ್ತು ಸುರೇಶ್ ರೇಷನ್ ಅಕ್ಕಿ ತರಲು ಕಟ್ಟೆಹುಣಸೂರಿಗೆ ಡಿಯೋ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಮೃತ್ಯುಸ್ವರೂಪಿಯಾಗಿ ಬಂದ ಕೆಎಸ್ಆರ್‍ಟಿಸಿ ಬಸ್ ಸ್ಕೂಟರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

%d bloggers like this: