You cannot copy content of this page.
. . .

‘ಫ್ರೀ ಕಾಶ್ಮೀರ’ ಪ್ರಕರಣ; ನಳಿನಿ, ಮರಿದೇವಯ್ಯಗೆ ನಿರೀಕ್ಷಣಾ ಜಾಮೀನು ಮಂಜೂರು

 ಮೈಸೂರು ವಿ.ವಿ.ಯ ಮಾನಸಗಂಗೋತ್ರಿ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಪ್ಲೇಕಾರ್ಡ್‍ ಪ್ರದರ್ಶನ ಪ್ರಕರಣದಲ್ಲಿ ರಾಷ್ಟ್ರದ್ರೋಹ ಆರೋಪ ಎದುರಿಸುತ್ತಿದ್ದ ಯುವತಿ ನಳಿನಿ ಹಾಗೂ ಮರಿದೇವಯ್ಯಗೆ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

 ಏನೇನು ಷರತ್ತುಗಳು

ಇಬ್ಬರಿಗೂ 8 ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ. 50 ಸಾವಿರ ರೂ. ಬಾಂಡ್, ಒಬ್ಬರು ಸ್ಯೂರಿಟಿ, ಒಂದು ತಿಂಗಳ ಒಳಗೆ ಪಾಸ್‍ಪೋರ್ಟ್‍ನ್ನು ಪೊಲೀಸ್ ವಶಕ್ಕೆ ನೀಡುವುದು, ತನಿಖಾಧಿಕಾರಿಗೆ ಸಹಕಾರ ನೀಡುವುದು, 15 ದಿನಕ್ಕೆ ಒಮ್ಮೆ ಬೆಳಿಗ್ಗೆ 10ರಿಂದ 12 ಗಂಟೆ ವೇಳೆಗೆ ಪೋಲಿಸ್ ಠಾಣೆಗೆ ಭೇಟಿ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಈ 8 ಷರತ್ತುಗಳನ್ವಯ ಇಬ್ಬರಿಗೂ ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಿದೆ.

 

%d bloggers like this: