You cannot copy content of this page.
. . .

ಪೊಲೀಸ್ ಭದ್ರತೆ ಇಲ್ಲದೆ ಯುವಜನತೆ ಮುಂದೆ ಹೋಗಿ ಮೋದಿ ಮಾತನಾಡಲಿ; ರಾಹುಲ್ ಗಾಂಧಿ ಸವಾಲು

 ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೈರ್ಯವಿದ್ದರೆ ಯಾವುದೇ ಪೊಲೀಸ್‍ ಭದ್ರತೆ ಇಲ್ಲದೇ ‘ನಾನು ಈ ದೇಶಕ್ಕಾಗಿ ಏನು ಮಾಡುತ್ತಿದ್ದೇನೆ’ ಎಂಬ ವಿಚಾರವನ್ನು ವಿದ್ಯಾರ್ಥಿಗಳ ಹಾಗೂ ಜನರ ಮುಂದೆ ಹೋಗಿ ಹೇಳಲಿ ಎಂದು ಕಾಂಗ್ರೆಸ್‍ ನಾಯಕ ರಾಹುಲ್‍ ಗಾಂಧಿ ಸವಾಲು ಹಾಕಿದರು.

 ವಿರೋಧ ಪಕ್ಷಗಳೊಂದಿಗೆ ಸಿಎಎ, ಎನ್‍ಆರ್‍ಸಿ ಸಂಬಂಧ ಚರ್ಚೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕೆ ಭಾರತದ ಆರ್ಥಿಕತೆ ಸಂಕಷ್ಟದಲ್ಲಿದೆ ಎಂಬ ವಿಚಾರವನ್ನು ಮೋದಿ ಅವರು ವಿದ್ಯಾರ್ಥಿಗಳಿಗೆ ಹೇಳುವ ಧೈರ್ಯ ಮಾಡಬೇಕು. ವಿದ್ಯಾರ್ಥಿಗಳ ಮುಂದೆ ನಿಲ್ಲುವ ಧೈರ್ಯ ಅವರಿಗಿಲ್ಲ ಎಂದು ಟೀಕಿಸಿದರು.

 ಯುವಜನತೆಯ ಸಮಸ್ಯೆ ಆಲಿಸದೇ ಮೋದಿ ಅವರು ದೇಶದ ಜನತೆ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ. ಅಲ್ಲದೇ, ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಯುವಜನತೆ ಧ್ವನಿ ಸರಿಯಾಗಿಯೇ ಇದೆ. ಅದನ್ನು ಹತ್ತಿಕ್ಕುವ ಕೆಲಸ ಮಾಡದೇ, ಸರ್ಕಾರ ಅವರ ಮಾತನ್ನು ಕೇಳಬೇಕು ಎಂದರು.  

Leave a Reply

 

%d bloggers like this: